Spiritual: ಕೆಲವು ವಸ್ತುಗಳನ್ನು ಧರಿಸಿದಾಗ, ಅದರ ಪರಿಣಾಮದಿಂದ ನಮಗೆ ಒಳಿತು-ಕೆಡಕಾಗುವುದನ್ನು ನಾವು ನೋಡಿರುತ್ತೇವೆ. ಉಂಗುರ, ಸರ, ಇತ್ಯಾದಿಗಳನ್ನು ಧರಿಸಿ, ಕೆಲವರು ಸಿರಿವಂತರೂ, ಆರೋಗ್ಯವಂತರೂ ಆದರೆ, ಇನ್ನು ಕೆಲವರು ಅನಾರೋಗ್ಯಕ್ಕೀಡಾಗಿದ್ದಾರೆ. ಇದ್ದ ಹಣ ಕಳೆದುಕ“ಂಡು ಗತಿಗೆಟ್ಟವರಾಗಿದ್ದಾರೆ. ಹಾಗಾಗಿ ಯಾವ ವಸ್ತುಗಳನ್ನಾದರೂ ಧರಿಸುವ ಮುನ್ನ ಅದರ ಬಳಕೆಯ ಬಗ್ಗೆ ನಾವು ತಿಳಿದಿರಬೇಕು. ಹಾಗಾಗಿ ನಾವಿಂದು ತುಳಸಿ ಮಾಲೆ ಧರಿಸುವ ಮುನ್ನ ಏನೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ತುಳಸಿ ಮಾಲೆಯನ್ನು ಧರಿಸಲು ಅದರದ್ದೇ ಆದ ದಿನಗಳಿದೆ. ಏಕಾದಶಿ, ಸೋಮವಾರ,. ಗುರುವಾರ, ಶುಕ್ರವಾರದಂದು ತುಳಸಿ ಮಾಲೆ ಧರಿಸಬಹುದು.
ತುಳಸಿ ಮಾಲೆ ಧರಿಸುವ ಮುನ್ನ ಬೇಗ ಎದ್ದು ಸ್ನಾನ ಮಾಡಿ, ದೇವರ ಮುಂದೆ ತುಳಸಿ ಮಾಲೆ ಇರಿಸಿ, ಗಂಗಾಜಲದಲ್ಲಿ ಶುದ್ಧವಾಗಿಸಿ, ದೇವರಿಗೆ ಕೈ ಮುಗಿದು, ಸ್ವಚ್ಛ ಉಡುಪು ಧರಿಸಿ, ತುಳಸಿ ಮಾಲೆ ಹಾಕಬೇಕು.
ತುಳಸಿ ಮಾಲೆ ಹಾಕಿ ಮಾಂಸ, ಮದ್ಯ ಸೇವನೆ ಮಾಡಬಾರದು. ಸಾವಿನ ಮನೆಗೆ ಹೋಗಬಾರದು. ಋತುಮತಿ ಸ್ತ್ರೀಯನ್ನು ಮುಟ್ಟಬಾರದು. ಏಕೆಂದರೆ, ಇವೆಲ್ಲವೂ ಅಶುದ್ಧ. ಋತುಮತಿಯಾದವರ ದೇಹದಲ್ಲಿ ಶಕ್ತಿ ಹೆಚ್ಚಾಗಿರುತ್ತದೆ. ನಿಮ್ಮ ತುಳಸಿ ಮಾಲೆಗೆ ಆ ಶಕ್ತಿಯ ಸ್ಪರ್ಶವಾದರೆ, ತುಳಸಿ ಮಾಲೆಯ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಋುತುಮತಿಯಾದವರನ್ನು ಮುಟ್ಟಬಾರದು ಅಂತಾ ಹೇಳೋದು.
ತುಳಸಿ ಮಾಲೆ ಧರಿಸಿ, ಮಾಡಬಾರದ ಕೆಲಸ ಮಾಡಿ, ಎಲ್ಲರಿಗೂ ಬೈಯ್ದುಕ“ಂಡು ತಿರುಗಿದರೆ, ಆ ಫಲ ನಿಮಗೆಂದೂ ಸಿಗುವುದಿಲ್ಲ. ಹಾಗಾಗಿ ತುಳಸಿ ಮಾಲೆ ಧರಿಸಿ, ಸಾತ್ವಿಕರಾಗಿ ಬದುಕಲು ಕಲಿಯಬೇಕು.
ತುಳಸಿ ಮಾಲೆ ಧರಿಸಿ, ಶೌಚಕ್ಕೆ ಹೋಗಬಾರದು. ಮಲಗುವಾಗ ತುಳಸಿ ಮಾಲೆ ಧರಿಸಬಾರದು. ಲೈಂಗಿಕ ಕ್ರಿಯೆ ಮಾಡುವಾಗ ಅಥವಾ ಮಾಡುವ ಸ್ಥಳದಲ್ಲಿ ತುಳಸಿ ಮಾಲೆ ಇರಿಸಬೇಡಿ. ತುಳಸಿ ಮಾಲೆಯನ್ನು ದೇವರ ಕೋಣೆಯಲ್ಲಿರಿಸಿ.

