Spiritual: ಮಂಗಳವಾರವೆಂದರೆ ಮಹಾಗಣಪತಿ ಮತ್ತು ಹನುಮಂತನಿಗೆ ಸೇರಿದ ದಿನ. ಆದರೂ ಈ ದಿನ ಮಂಗಳಕಾರ್ಯಕ್ಕೆ ಉತ್ತಮವಲ್ಲವೆಂದೇ ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಮಂಗಳವಾರದಂದು ಪಾಲಿಸಬೇಕಾದ ನಿಯಮಗಳು ಯಾವುದು ಅಂತಾ ಹೇಳಲಿದ್ದೇವೆ.
ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಿ: ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರ ಧರಿಸಬೇಕು. ಈ ದಿನ ಕೆಂಪು ಬಣ್ಣದ ವಸ್ತ್ರ ಧರಿಸಿ, ನೀವೇನೇ ಕೆಲಸ ಮಾಡಿದರೂ ಅದು ಉತ್ತಮ ಫಲಿತಾಂಶ ನೀಡುತ್ತದೆ. ಏಕೆಂದರೆ, ಮಂಗಳನಿಗೆ ಕೆಂಪು ನೆಚ್ಚಿನ ಬಣ್ಣ. ಹಾಗಾಗಿ ಕೆಂಪು ಬಣ್ಣದ ಉಡುಪು ಧರಿಸಿ.
ಗಣೇಶ ಮತ್ತು ಹನುಮನನ್ನು ಪೂಜಿಸಿ: ಈ ದಿನದಂದು ಹೆಚ್ಚಿನವರು ಹನುಮನನ್ನು ಪೂಜಿಸುತ್ತಾರೆ. ಗಣೇಶನನ್ನು ಕೂಡ ಈ ದಿನ ಪೂಜಿಸಲಾಗುತ್ತದೆ. ಈ ದಿನ ಹನುಮಾನ್ ಚಾಲೀಸಾವನ್ನು ಕೂಡ ಪಠಿಸಿದರೆ ಉತ್ತಮ.
ಶುಭಕಾರ್ಯ ಮಾಡುವುದು ಬೇಡ: ಮಂಗಳವಾರದ ದಿನ ದೇವರಿಗೆ ಸಂಬಂಧಿಸಿದ ಪೂಜೆ ಮಾಡಬಹುದು. ಆದರೆ ಮದುವೆ, ಮುಂಜಿ, ಅಥವಾ ನಮಗೆ ಸಂಬಂಧಿಸಿದ ಯಾವುದೇ ಶುಭಕಾರ್ಯ ಮಾಡಬಾರದು ಎಂದು ಹೇಳಲಾಗಿದೆ. ಏಕೆಂದರೆ, ಈ ದಿನ ಮಾಡಿದ ಕಾರ್ಯ ಮತ್ತೆ ಪುನರಾವರ್ತಿಸಬೇಕಾಗುತ್ತದೆ ಅನ್ನೋ ನಂಬಿಕೆ ಇದೆ.
ಮಗಳನ್ನು ಗಂಡನ ಮನೆಗೆ ಕಳುಹಿಸಬಾರದು: ಮಂಗಳವಾರದ ದಿನ ಮಗಳನ್ನು ಗಂಡನ ಮನೆಗೆ ಕಳುಹಿಸಬಾರದು. ಶುಕ್ರವಾರದ ದಿನ ಸೊಸೆಯನ್ನು ತವರುಮನೆಗೆ ಕಳುಹಿಸಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿನ ಧನಾತ್ಮಕ ಶಕ್ತಿ ಪರಿಣಾಮ ಕಡಿಮೆಯಾಗಿ, ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾ ಹೇಳ್ತಾರೆ ಹಿರಿಯರು.

