Spiritual: ಗರುಡ ಪುರಾಣದಲ್ಲಿ ಯಾವ ತಪ್ಪು ಮಾಡಿದ್ರೆ, ಯಾವ ಶಿಕ್ಷೆ ಅಂತಾ ಹೇಳಲಾಗಿದೆ. ಅದೇ ರೀತಿ, ನಾವು ಜೀವನದಲ್ಲಿ ಮಾಡುವ ಕೆಲ ತಪ್ಪುಗಳ ಬಗ್ಗೆಯೂ ವಿವರಿಸಲಾಾಗಿದೆ. ಅದರಲ್ಲೂ ಜನ ಹೇಗೆ ಬಡವರಾಗುತ್ತಾರೆ..? ಎಂಥ ಜನ ಬಡವರಾಗುತ್ತಾರೆ ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥವರು ಬಡವರಾಾಗುತ್ತಾರೆ ಅಂತಾ ತಿಳಿಯೋಣ ಬನ್ನಿ.
ಅತಿಯಾಸೆ: ಯಾರಿಗೆ ಜೀವನದಲ್ಲಿ ಅತಿಯಾಸೆ ಇರುತ್ತದೆಯೋ ಅಂಥವರು ಶ್ರೀಮಂತರಾಗಲು ಸಾಧ್ಯವೇ ಇಲ್ಲ. ಆಸೆ ಅನ್ನೋದು ಮನುಷ್ಯನಿಗೆ ಇರುವ ಸಹಜ ಗುಣ. ಆದರೆ ಅತಿಯಾಸೆ ಇದ್ದರೆ ಅವನತಿಗೆ ಹೋಗೋದು ಖಂಡಿತ. ಹಾಗಾಗಿ ಸಿಕ್ಕಷ್ಟು ಮತ್ತೂ ಬೇಕು ಮತ್ತೂ ಬೇಕು ಅಂತಿದ್ರೆ, ಖಂಡಿತ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಅದರ ಬದಲು ದುಡಿದು ನೀವೇ ಗಳಿಸುವುದು ಉತ್ತಮ.
ದುರಹಂಕಾರ: ಯಾರಿಗೆ ಜೀವನದಲ್ಲಿ ದುರಹಂಕಾರವಿರುತ್ತದೆಯೋ, ಅಂಥವರು ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ. ದುರಹಂಕಾರವಿರುವವರ ಬಳಿ ಎಷ್ಟೇ ಹಣ, ಅಂತಸ್ತು, ದೌಲತ್ತು, ಆರೋಗ್ಯ, ನೆಮ್ಮದಿ ಏನೇ ಇದ್ದರೂ, ದುರಹಂಕಾರ ಮಿತಿ ಮೀರಿದರೆ, ಎಲ್ಲವೂ ಹೋಗಿ ದರಿದ್ರತೆ ಬರುತ್ತದೆ. ಹಾಗಾಗಿ ಮನುಷ್ಯ ಎಂದಿಗೂ ಯಾವ ವಿಷಯದಲ್ಲೂ ದುರಹಂಕಾರ ಪಡಬಾರದು.
ಸ್ನಾನ ಮಾಡದೇ ಗಲೀಜಾಗಿದ್ದರೆ: ಯಾವ ಮನುಷ್ಯ ಸ್ನಾನ ಮಾಡದೇ, ಸ್ವಚ್ಛವಾಗಿರದ ಉಡುಪು ಧರಿಸುತ್ತಾನೋ, ಅಂಥವರಿಗೆ ಎಂದಿಗೂ ಶ್ರೀಮಂತಿಕೆ ಬರಲು ಸಾಧ್ಯವಿಲ್ಲ. ನಾವು ಎಷ್ಟು ಸ್ವಚ್ಛವಾಗಿರುತ್ತೆವೋ, ಲಕ್ಷ್ಮೀ ದೇವಿಯ ಕೃಪೆ ಅಷ್ಟು ಹೆಚ್ಚಾಗಿರುತ್ತದೆ.
ಆಲಸ್ಯ: ಯಾವ ವ್ಯಕ್ತಿ ಆಲಸ್ಯಭರಿತವಾಾದ ಜೀವನ ಮಾಡುತ್ತಾನೋ, ಅಂಥ ವ್ಯಕ್ತಿ ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಆತ ಶ್ರೀಮಂತನೂ ಆಗುವುದಿಲ್ಲ.
ಚಾಡಿ ಹೇಳುವ ಬುದ್ಧಿ: ಯಾರಿಗೆ ಅವರಿವರ ಬಗ್ಗೆ ಚಾಡಿ ಹೇಳುವ ಬುದ್ಧಿ ಇರುತ್ತದೆಯೋ, ಅಂಥವರು ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಅಲ್ಲದೇ ಶ್ರೀಮಂತರೂ ಆಗುವುದಿಲ್ಲ. ಅವರ ಈ ನೀಚ ಬುದ್ಧಿಯೇ , ಅವರ ಎಲ್ಲ ಖುಷಿಗಳನ್ನೂ ಕಿತ್ತುಕ“ಳ್ಳುತ್ತದೆ.