Monday, October 13, 2025

Latest Posts

Spiritual: ನನ್ನ ಹೆಸರಲ್ಲಿ ಮಾಡುವ ದುಡ್ಡು ಆಸ್ಪತ್ರೆ ಸೇರುವಂತೆ ಮಾಡುತ್ತೇನೆ: ಭಕ್ತರಿಗೆ ಅಭಯ ನೀಡಿದ ದೈವ

- Advertisement -

Spiritual: ಕಾಂತಾರ ಸಿನಿಮಾ ತೆರೆಗೆ ಬರುವ ಮುನ್ನ ದೈವಗಳ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ, ದೈವದ ಬಗ್ಗೆ, ಭೂತಕೋಲದ ಬಗ್ಗೆ, ದೈವಗಳ ಶಕ್ತಿ ಬಗ್ಗೆ ತಿಳಿದಿದೆ. ಆದರೆ ಅದನ್ನು ಭಕ್ತಿಯಿಂದ ನೋಡುವುದನ್ನು ಬಿಟ್ಟು ಕೆಲವರು ನಾಟಕಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಕಾಂತಾರ ರಿಲೀಸ್ ಆದಾಗ, ರಿಷಬ್ ಅವರೇ ಸಿನಿಮಾದಲ್ಲಿ ದೈವ ವರ್ತಿಸಿದ ರೀತಿ, ನೀವು ಎಂದಿಗೂ ಅನುಕರಣೆ ಮಾಡಬೇಡಿ ಎಂದು ವಿನಂತಿಸಿದ್ದರು.

ಆದರೂ ಹಲವರು ಬೀದಿ ನಾಟಕಗಳಲ್ಲಿ, ಛದ್ಮವೇಷ ಸ್ಪರ್ಧೆಯಲ್ಲಿ ಕಾಲೇಜು ಕಾರ್ಯಕ್ರಮದಲ್ಲಿ ದೈವದ ವೇಷ ಹಾಕಿ, ನರ್ತಿಸಿದ್ದರು. ಇದೀಗ ಕಾಂತಾರ 1 ಬಿಡುಗಡೆಯಾಗಿದ್ದು, ಥಿಯೇಟರ್‌ನಲ್ಲೇ ಜನ ಮೈ ಮೇಲೆ ದೈವ ಬಂದ ಹಾಗೆ ವರ್ತಿಸುತ್ತಿದ್ದಾರೆ. ದೈವಕ್ಕೆ ಅದರದ್ದೇ ಆದ ನಿಯಮ, ಪದ್ಧತಿ, ನಂಬಿಕೆ ಇದೆ. ಅದು ಹಾಗೆಲ್ಲ ಕಂಡ ಕಂಡವರ ಮೇಲೆ ಬರುವುದಲ್ಲ. ಆದರೆ ತಮ್ಮ ಮೇಲೆ ದೈವ ಬಂದಂತೆ ವರ್ತಿಸುವವರ ಬಗ್ಗೆ ತುಳುನಾಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮಂಗಳೂರಿನಲ್ಲಿ ಪಿಲ್ಚಂಡಿ ದೈವದ ಬಳಿ ಈ ಬಗ್ಗೆ ದೂರು ನೀಡಿದಾಾಗ, ಭಕ್ತರಿಗೆ ಅಭಯ ನೀಡಿರುವ ದೈವ, ನನ್ನ ವೇಷ ಹಾಕಿ ದುಡ್ಡು ಮಾಡುವವರಿಗೆ, ನನ್ನ ಹೆಸರಿನಲ್ಲಿ ಹಣ ಮಾಡುವವರಿಗೆ ತಕ್ಕ ಶಾಸ್ತಿ ಮಾಡುತ್ತೇನೆ. ಆ ಹಣ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ನನ್ನ ವೇಷ ಧರಿಸಿ ಹುಚ್ಚಾಟ ಮೆರೆಯುವವರಿಗೆ ಸತ್ಯಕ್ಕೂ ಹುಚ್ಚು ಹಿಡಿಯುತ್ತದೆ ಎಂದು ಅಭಯ ನೀಡಿದೆ.

ಈ ಹಿಂದೆ ದೈವಗಳ ಬಗ್ಗೆ, ಕಾರ್ಣಿಕ ದೈವ ಅಜ್ಜನ ಬಗ್ಗೆ ಅಪಹಾಸ್ಯ ಮಾಡಿದವರು ರಕ್ತ ಕಾರಿ ಸಾಯುವ ಪರಿಸ್ಥಿತಿ ಬಂದಿತ್ತು. ಅಲ್ಲದೇ, ಈಗಲೂ ಕೆಲವರು ದೈವಗಳಿಗೆ ಅಪಹಾಸ್ಯ ಮಾಡಲು ಹೋಗಿ, ಹುಚ್ಚರಂತೆ ಬೀದಿ ಬೀದಿ ಅಲೆಯುತ್ತಿದ್ದಾರೆ. ಹೀಗಾಗಿ ದೈವ ಬರುವುದೆಂದರೆ , ಬೇಕಾದಾಗ, ಬೇಕಾದ ಹಾಗೆ ವರ್ತಿಸುವ ಸಾಮಾನ್ಯ ವಿಷಯವಲ್ಲ. ಇದನ್ನು ಜನ ಅರಿಯಬೇಕಿದೆ.

- Advertisement -

Latest Posts

Don't Miss