Spiritual: ಈ ಗುಣ ಇತ್ತೀಚಿಗೆ ನಿಮ್ಮಲ್ಲಿ ಕಾಣಿಸುತ್ತೆ ಅಂದ್ರೆ ನಿಮಗೆ ಶನಿದೋಷ ಇದೆ ಎಂದು ಅರ್ಥ

Spiritual: ನಮ್ಮಲ್ಲಿ ಕಾಣ ಸಿಗುವ ಕೆಲ ಗುಣಗಳು ನಮಗೆ ಶನಿದೋಷವಿದೆ ಎಂಬ ಸೂಚನೆ ನೀಡುತ್ತದೆಯಂತೆ. ಹಾಗಾದ್ರೆ ನಮ್ಮಲ್ಲಿ ಯಾವ ಗುಣವಿದ್ದರೆ, ಶನಿದೋಷವಿದೆ ಎಂದರ್ಥ ಎಂದು ತಿಳಿಯೋಣ ಬನ್ನಿ.

ಸಾಲ ಹೆಚ್ಚಾಗುತ್ತಾ ಹೋಗುವುದು: ಶನಿದೋಷವಿದ್ದಾಗ, ಸಾಲ ಹೆಚ್ಚಾಗುತ್ತದೆ. ಆರ್ಥಿಕ ಸಂಕಷ್ಟ ಬರುತ್ತದೆ. ಹಣ ಬಂದಹಾಗೆ ನೀರಿನಂತೆ ಖರ್ಚಾಗುತ್ತದೆ. ಹಣದ ಕಾರಣಕ್ಕೆ ಅವಮಾನವಾಗುತ್ತದೆ.

ಹಣಕ್ಕಾಗಿ ಅಡ್ಡದಾಾರಿ ಹಿಡಿಯುವುದು: ಶನಿದೋಷವಿದ್ದರೆ, ಸಾಲಗಳು ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಡುತ್ತದೆ. ಬುದ್ಧಿ ಭ್ರಮಣೆಯಾಗುತ್ತದೆ. ಹಣಕ್ಕಾಗಿ ಅಡ್ಡದಾರಿ ಹಿಡಿಯಲು ಹೋಗುತ್ತಾರೆ. ಕಳ್ಳತನ, ಮೋಸ, ಲಂಚ, ದರೋಡೆ, ವೇಶ್ಯವಾಟಿಕೆ ಹೀಗೆ ಕೆಟ್ಟ ಕೆಲಸ ಮಾಡಿ, ಹಣ ಸಂಪಾದಿಸಲು ಮುಂದಾಗುತ್ತಾರೆ.

ದುಷ್ಚಟಗಳ ದಾಸರಾಗುವುದು: ಶನಿದೋಷವಿರುವವರು ದುಷ್ಚಟಗಳ ದಾಸರಾಗುತ್ತಾರೆ. ಪರ ಸ್ತ್ರೀ, ಪರಪುರುಷರ ವ್ಯಾಮೋಹ, ಮದ್ಯಪಾನ, ಧೂಮಪಾನ ಇಂಥ ಗುಣಗಳಿಗೆ ಬಲಿಯಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್‌ತಿಗೆ ದುಷ್ಚಟ ಬಂದಿದೆ ಎಂದಾಗ ನೀವು ಆತನಿಗೆ ಶನಿದೆಶೆ ಶುರುವಾಗಿದೆ ಎಂದೇ ತಿಳಿಯಬೇಕು.

ಕರುಣೆ ಮರೆತು ಬದುಕುವುದು: ಕರುಣೆಯಿಂದ ಇರಬೇಕಾಗಿದ್ದು ಮಾನವ ಗುಣ. ಇದೇ ಆತ ಪಾಪದ ದಾರಿಗೆ ಹೋಗುವನೋ, ಪುಣ್ಯದ ದಾರಿಗೆ ಹೋಗುವನೋ ಅನ್ನುವುದನ್ನು ನಿರ್ಧರಿಸುತ್ತದೆ. ಓರ್ವ ಮನುಷ್ಯ ಕರುಣೆ ಮರೆತು ವರ್ತಿಸುತ್ತಿದ್ದಾನೆ ಎಂದರೆ ಆತನಲ್ಲಿ ಶನಿದೋಷವಿದೆ ಎಂದರ್ಥ.

ಆರೋಗ್ಯ ಹಾಳಾಗುವುದು: ಶನಿದೋಷ ಇದ್ದಾಗ ಆರೋಗ್ಯ ಹಾಳಾಗುತ್ತದೆ. ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಾರೆ. ದುಡಿದ ಹಣವೆಲ್ಲ ಆಸ್ಪತ್ರೆ ಪಾಲಾಗುತ್ತದೆ. ಏನೇ ಮದ್ದು ಮಾಡಿದರೂ, ಆರೋಗ್ಯ ಮುಂಚಿನ ಸ್ಥಿತಿಗೆ ಬರುವುದಿಲ್ಲ. ಹೀಗೆಲ್ಲ ಆಗುವುದ್ದಕ್ಕೂ ಮುನ್ನ ವ್ಯಕ್ತಿ ಈ ಮೇಲೆ ಹೇಳಿದ ದುರ್ಬುದ್ಧಿಗಳನ್ನು ತೋರಿರುತ್ತಾನೆ. ಇದರ ಫಲವನ್ನೇ ಅನಾರೋಗ್ಯದ ರೂಪದಲ್ಲಿ ಅನುಭವಿಸುತ್ತಾನೆ.

About The Author