Spiritual: ಕೆಲವು ಅಭ್ಯಾಸಗಳು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಇನ್ನು ಕೆಲವು ಕೆಲಸಗಳು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ. ನಮ್ಮನ್ನು ಬಡವರನ್ನಾಗಿ, ಸಾಲಗಾರರನ್ನಾಗಿ ಮಾಡುವ ಅಭ್ಯಾಸದ ಬಗ್ಗೆ ತಿಳಿಯೋಣ.
ಆಲಸ್ಯ: ನಾವು ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿದಾಗ ಮಾತ್ರ, ಲಕ್ಷ್ಮೀ ಕೃಪೆ ತೋರಲು ಸಾಧ್ಯ ಮತ್ತು ನಾವು ಶ್ರೀಮಂತರಾಗಲು ಸಾಧ್ಯ. ಆದರೆ ನಾವು ಯಾವುದೇ ವಿಷಯದಲ್ಲಿ ಆಲಸ್ಯ ತೋರಿಸಿದರೆ, ನಾವೆಂದೂ ಉದ್ಧಾರವಾಗಲು ಸಾಧ್ಯವಿಲ್ಲ ಮತ್ತು ಲಕ್ಷ್ಮೀ ಕೃಪೆ ಸಿಗಲು ಸಾಧ್ಯವಿಲ್ಲ.
ದುರಾಸೆ: ಯಾರಿಗೆ ಅಗತ್ಯಕ್ಕಿಂತ ಹೆಚ್ಚು ಆಸೆ ಇರುತ್ತದೆಯೋ, ಅಂಥವರಿಗೆ ಲಕ್ಷ್ಮೀ ಎಂದಿಗೂ ಕೃಪೆ ತೋರುವುದಿಲ್ಲ. ಮನುಷ್ಯನಿಗೆ ಆಸೆ ಇರುವುದು ಸಹಜ. ಆದರೆ ದುರಾಸೆ ಇದ್ದಲ್ಲಿ, ಅವನು ಉದ್ಧಾರವಾಗಲು ಸಾಧ್ಯವಿಲ್ಲ.
ಬೇರೆಯವರನ್ನು ಹೀಯಾಳಿಸುವ ಗುಣ: ತಮ್ಮ ಮನೆಯಲ್ಲಿ ನೂರಾರು ಸಮಸ್ಯೆ ಇದ್ದೂ ಕೂಡ, ಬೇರೆಯವರ ಬಗ್ಗೆ ಹೀಯಾಳಿಸುವವರನ್ನು ಲಕ್ಷ್ಮೀ ಎಂದಿಗೂ ಪ್ರೀತಿಸುವುದಿಲ್ಲ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂದ ಹಾಗೆ, ಇಂದು ನಾವು ಇತರರನ್ನು ಬೈದು ಮನಸ್ಸಿಗೆ ತೃಪ್ತಿ ತಂದುಕ“ಳ್ಳಬಹುದು. ಆದರೆ ಅದಕ್ಕಿಂತಲೂ ಹೆಚ್ಚು ಕಷ್ಟ ದೇವರು ನಿಮಗೆ ನೀಡಬಹುದು. ಹಾಗಾಗಿ ಯಾರ ಬಗ್ಗೆ ಕೀಳಾಗಿ ಮಾತನಾಡಬೇಡಿ, ಯಾರನ್ನೂ ಹೀಯಾಳಿಸಬೇಡಿ.
ಅಶುದ್ಧತೆ: ಯಾರ ಮನೆಯಲ್ಲಿ ಅಶುದ್ಧತೆ ತಾಂಡವವಾಡುತ್ತದೆಯೋ, ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಬದಲಾಗಿ ಅಲಕ್ಷ್ಮೀ ನೆಲೆಸುತ್ತಾಳೆ. ಹಾಗಾಗಿ ಮನೆಯನ್ನು ಸದಾ ಸ್ವಚ್ಛವಾಗಿರಿಸಿ.
ಸ್ವಚ್ಛವಿರದ ಅಡುಗೆಕೋಣೆ: ಅಡುಗೆಕೋಣೆ ಯಾವಾಗಲೂ ಕ್ಲೀನ್ ಆಗಿರಲಿ. ಏಕೆಂದರೆ ಅದು ಅನ್ನಪೂರ್ಣೆಯ ಸ್ಥಾನ. ಮತ್ತು ಅನ್ನಪೂರ್ಣೆಯ ಸ್ಥಾನ ಸ್ವಚ್ಛವಾಗಿ ಇರದೇ ಇದ್ದಲ್ಲಿ, ಲಕ್ಷ್ಮೀ ಬಂದು ನೆಲೆಸುವುದಿಲ್ಲ. ಅಲ್ಲಿ ಮಾಡಿದ ಆಹಾರವನ್ನೇ ನಾವು ಸೇವಿಸಬೇಕಿರುವುದರಿಂದ, ಅಂಥ ಆಹಾರ ಆರೋಗ್ಯಕರವಾಗಿರಬೇಕು. ಇಲ್ಲದಿದ್ದಲ್ಲಿ, ಆರೋಗ್ಯ ಹಾಳಾಗುವುದರ ಜತೆಗೆ, ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತದೆ.

