Friday, July 4, 2025

Latest Posts

Spiritual: ಅರ್ಜುನನಲ್ಲಿರುವ ಈ ಗುಣಗಳನ್ನು ಕಲಿತರೆ ನೀವು ಬಹುಬೇಗ ಯಶಸ್ಸು ಗಳಿಸಬಹುದು

- Advertisement -

Spiritual: ಮಹಾಭಾರತದಲ್ಲಿ ಕಾಣಸಿಗುವ ಪ್ರಸಿದ್ಧ ವ್ಯಕ್ತಿತ್ವದಲ್ಲಿ ಅರ್ಜುನ ಪ್ರಮುಖ. ಪಂಚ ಪಾಂಡವರಲ್ಲಿ ಮಧ್ಯಮ ಪಾಂಡವ ಅಂತಲೇ ಪ್ರಸಿದ್ಧನಾದ ಅರ್ಜುನ, ಅದೇಕೆ ಅಷ್ಟು ಪ್ರಚಲಿತ ಎಂದರೆ, ಆತನಲ್ಲಿರುವ ಕೆಲವು ಗುಣಗಳಿಂದ. ಹಾಗಾದ್ರೆ ಅರ್ಜುನನಲ್ಲಿರುವ ಯಾವ ಗುಣಗಳನ್ನು ನಾವು ಕಲಿತರೆ ಯಶಸ್ಸು ಗಳಿಸಬಹುದು ಅಂತಾ ತಿಳಿಯೋಣ ಬನ್ನಿ..

ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ: ಮಹಾಭಾರತದಲ್ಲಿ ಅರ್ಜುನ ಏಕೆ ಅಷ್ಟು ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುವನು ಎಂದರೆ, ಆತನ ಧೈರ್ಯದಿಂದ. ಆತನಿಗೆ ಅದೆಷ್ಟರ ಮಟ್ಟಿಗೆ ಧೈರ್ಯವಿತ್ತೆಂದರೆ, ಎಂಥಹ ಪರಿಸ್ಥಿತಿ ಬಂದರೂ, ಅದನ್ನು ಎದುರಿಸುವ ಧೈರ್ಯವಿತ್ತು. ಇನ್ನು ಶಕ್ತಿ, ಬುದ್ಧಿವಂತಿಕೆಯ ಬಗ್ಗೆ ಮಾತನಾಡುವುದಾದರೆ, ಇದೇ ಬುದ್ಧಿವಂತಿಕೆಯಿಂದಲೇ ಆತ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದಿದ್ದು. ಯಾರಿಗೆ ಜೀವನದಲ್ಲಿ ಧೈರ್ಯ, ಶೌರ್ಯ, ಬುದ್ಧಿವಂತಿಕೆ ಇರುತ್ತದೆಯೋ, ಅಂಥವರು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ.

ತಾಳ್ಮೆ: ಅರ್ಜುನ ತನ್ನ ತಾಳ್ಮೆಯಿಂದಲೇ, ಬುದ್ಧಿವಂತ, ಧೈರ್ಯವಂತ, ಬಿಲ್ವಿದ್ಯಾ ಪರಿಣಿತ ಎಂದೆನ್ನಿಸಿಕ“ಂಡಿದ್ದು. ಹಿರಿಯರೇ ಹೇಳುವ ಹಾಗೆ, ಯಾರಲ್ಲಿ ತಾಳ್ಮೆ ಇರುತ್ತದೆಯೋ, ಅವರು ಜಗತ್ತನ್ನೇ ಗೆಲ್ಲಬಹುದಂತೆ. ಅರ್ಜುನನಂತೆ ನೀವು ತಾಳ್ಮೆ ಹ“ಂದಿದ್ದಲ್ಲಿ, ನೀವೂ ಜೀವನದಲ್ಲಿ ಯಶಸ್ಸು ಗಳಿಸಬಹುದು.

ಕಲಿಕೆಯ ಗುಣ: ಅರ್ಜುನ ಬಿಲ್ಲುಗಾರಿಕೆಯಲ್ಲಿ ನಿಪುಣನಾಗಿದ್ದ. ಎಲ್ಲರಿಗಿಂತ ಚೆನ್ನಾಗಿ ಬಿಲ್ವಿದ್ಯೆ ಬಲ್ಲವನಾಗಿದ್ದ. ಏಕೆಂದರೆ ಅವನ ಏಕಾಗೃತೆ ಆ ಮಟ್ಟಿಗಿತ್ತು. ಅಂಥ ಏಕಾಗೃತೆ ನಮ್ಮ ಜೀವನದಲ್ಲಿದ್ದರೆ, ನಾವೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು.

ಮೋಹ ತ್ಯಜಿಸುವ ಗುಣ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗುರುಪದೇಶ ಮಾಡುವಾಗ, ತಾನು, ತನ್ನವರು ಎಂಬ ಮೋಹವೇ ಎಲ್ಲ ದುಃಖಗಳಿಗೂ ಕಾರಮವೆಂದು ಹೇಳಿದ್ದ. ಈ ಮಾತನ್ನು ಮನಗಂಡ ಅರ್ಜುನ ದುಃಖದ ಪಾಠ ಕಲಿತಿದ್ದ. ಎಲ್ಲ ಮೋಹಗಳಿಂದ ಈಚೆ ಬಂದಾಗ ಮಾತ್ರ, ನಮ್ಮ ಜೀವನದ ದುಃಖ ಕಡಿಮೆಯಾಗುತ್ತದೆ ಎಂದು ಅರಿತ. ಅವನಂತೆ ನಾವು ಕೂಡ ಎಲ್ಲರ ಮೇಲಿನ ಮೋಹದಿಂದ ಈಚೆ ಬಂದಾಗಲೇ, ದುಃಖದಿಂದಲೂ ಹ“ರಬರುತ್ತೇವೆ.

- Advertisement -

Latest Posts

Don't Miss