Tuesday, September 23, 2025

Latest Posts

Spiritual: ಗುರುವಾರ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ

- Advertisement -

Spiritual: ಗುರುವಾರ ಗುರುವಿನ ದಿನ, ಅಂದ್ರೆ ಬೃಹಸ್ಪತಿಯ ದಿನ. ಈ ದಿನ ನಾವು ಹೇಗಿರುತ್ತೇವೋ, ಆ ರೀತಿ ನಮ್ಮ ಜೀವನದಲ್ಲಿ ಗುರು ಬಲ ಹೆಚ್ಚಿಸಲು ಸಹಾಯಕವಾಗಿರುತ್ತದೆ. ಹಾಗಾಗಿ ಇಂದು ನಾವು ಗುರುವಾರ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಗುರುವಾರದ ದಿನ ಮನೆ ಒರೆಸಬೇಡಿ: ಗುರುವಾರದ ದಿನ ಮನೆ ಗುಡಿಸಬಹುದು. ಆದರೆ ಒರೆಸಬೇಡಿ. ಬುಧವಾರದಂದೇ ಮನೆಯನ್ನು ಕ್ಲೀನ್ ಮಾಡಿಬಿಡಿ. ಗುರುವಾರ ಮನೆ ಒರೆಸಿದರೆ, ಬೃಹಸ್ಪತಿ ಕೃಪೆ ಇರುವುದಿಲ್ಲ ಎನ್ನಲಾಗಿದೆ. ಹಾಗಾಗಿ ಗುರುವಾರದ ದಿನ ಮನೆ ಕ್ಲೀನ್ ಮಾಡುವಂತಿಲ್ಲ.

ತಲೆ ಸ್ನಾನ ಮಾಡಬೇಡಿ: ಇನ್ನು ಗುರುವಾರದ ದಿನ ತಲೆ ಸ್ನಾನ ಮಾಡಿದರೆ, ಪತಿ-ಪತ್ನಿ-ಮಕ್ಕಳು ಎಲ್ಲರಿಗೂ ಗುರುಬಲ ಕಡಿಮೆಯಾಗುತ್ತದೆ. ಜಾಾತಕದಲ್ಲಿ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗಿದೆ.

ಕೂದಲು, ಉಗುರು ಕತ್ತರಿಸಬೇಡಿ: ಗುರುವಾರದ ದಿನ ಕೂದಲು ಕತ್ತರಿಸಬಾರದು, ಉಗುರು ಕತ್ತರಿಸಬಾರದು. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಮನೆಯಲ್ಲಿಯೂ ನೆಮ್ಮದಿ ಇರುವುದಿಲ್ಲ. ಮಾನಸಿಕ ನೆಮ್ಮದಿ ಹಾಳಾಗುವುದು. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

- Advertisement -

Latest Posts

Don't Miss