Spiritual: ಓರಿಸ್ಸಾದ ಪುರಿ ಜಗನ್ನಾಥ ದೇವಸ್ಥಾನ ಭಾರತದಲ್ಲಿಯೇ ಪ್ರಾಚೀನ, ಪ್ರಸಿದ್ಧ ದೇವಸ್ಥಾನವಾಗಿದೆ. ಇಲ್ಲಿ ಜಗನ್ನಾಥನ ವೇಷದಲ್ಲಿ ಇರುವ ಕೃಷ್ಣನ ಜತೆ ಅವನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳು ಚಾಲ್ತಿಯಲ್ಲಿದೆ. ಅದರಲ್ಲಿ 1 ಆದ ಕರಮಾ ಬಾಯಿ ಕಥೆಯನ್ನು ನಾವಿಂದು ಹೇಳಲಿದ್ದೇವೆ.
ಕರಮಾ ಬಾಯಿ ಚಿಕ್ಕಂದಿನಲ್ಲಿ ತನ್ನ ಮನೆಯಲ್ಲಿ ಮಾಡಿದ ಕಿಚಡಿ ಪ್ರಸಾದವನ್ನು ಜಗನ್ನಾಥ ದೇವಸ್ಥಾನಕ್ಕೆ ಹೋಗಿ, ಜಗನ್ನಾಥನ ಮುಂದಿರಿಸಿ, ನೈವೇದ್ಯ ಮಾಡಿ ಬರುತ್ತಿದ್ದಳು. ಬಾಲ್ಯ, ಯವ್ವನ, ವೃದ್ಧಾಪ್ಯದವರೆಗೂ ಕರಮಾ ಬಾಯಿ ಇದೇ ರೀತಿ ಕಿಚಡಿ ಮಾಡಿ, ಪ್ರಸಾದ ನೈವೇದ್ಯ ಮಾಡುತ್ತಿದ್ದಳು. ಆದರೆ ವಯಸ್ಸಾಗುತ್ತಿದ್ದಂತೆ, ಆಕೆಗೆ ದೇವಸ್ಥಾನದ ತನಕ ಬರಲು ಸಾಧ್ಯವಾಗುತ್ತಿರಲಿಲ್ಲ.
ಹಾಗಾಗಿ ಆಕೆ 1 ದಿನ ಕಿಚಡಿ ಮಾಡಿ, ತಂದು ದೇವರ ಮುಂದಿರಿಸಿ, ನೋಡು ಜಗನ್ನಾಥ ನಾನೀಗ ವೃದ್ಧೆಯಾಗಿದ್ದೇನೆ. ಇಷ್ಟು ವರ್ಷದಿಂದ ಪ್ರತಿದಿನ ನಿನ್ನ ಬಳಿ ಬಂದು ಕಿಚಡಿ ಪ್ರಸಾದ ನೈವೇದ್ಯ ಮಾಡುತ್ತಿದ್ದೆ. ಆದರೆ ನಾನೀಗ ವೃದ್ಧೆಯಾಗಿದ್ದೇನೆ. ನನಗೆ ದೇವಸ್ಥಾನದ ತನಕ ಬರುವಷ್ಟು ಶಕ್ತಿ ಇಲ್ಲ. ಹಾಗಾಗಿ ನಾನು ಮನೆಯಲ್ಲೇ ಪ್ರಸಾದ ಮಾಡಿ, ನೈವೇದ್ಯ ಮಾಡುತ್ತೇನೆ ಎಂದು ಹೇಳಿ ಹೋಗುತ್ತಾಳೆ.
ಅದೇ ರೀತಿ 2 ದಿನ ಮನೆಯಲ್ಲೇ ಕಿಚಡಿ ಮಾಡಿ ನೈವೇದ್ಯ ಮಾಡುತ್ತಾಳೆ. ಆದರೆ ಪ್ರತೀದಿನ ಕರ್ಮಾ ಬಾಯಿಯನ್ನು ನೋಡುತ್ತಿದ್ದ ಅರ್ಚಕರಿಗೆ ಆಶ್ಚರ್ಯವಾಗುತ್ತದೆ. ಇದೇನಿದು, ಪ್ರತಿದಿನ ತಪ್ಪದೇ ದೇವಸ್ಥಾನಕ್ಕೆ ಬಂದು, ದೇವರ ದರ್ಶನ ಮಾಡಿ, ನೈವೇದ್ಯ ಅರ್ಪಿಸುತ್ತಿದ್ದ ಕರ್ಮಾ ಬಾಯಿ, ಎರಡು ದಿನದಿಂದ ಬರಲೇ ಇಲ್ಲವಲ್ಲ..? ಏನಾಗಿರಬಹುದು ಎಂದು ಯೋಚಿಸಿ, ಮರುದಿನ ಬೆಳಿಗ್ಗೆ ಕರ್ಮಾಬಾಯಿ ಮನೆಗೆ ಹೋಗುತ್ತಾರೆ.
ಹಾಗೆ ಹೋದಾಗ, ಅಲ್ಲಿ ಕರ್ಮಾಬಾಯಿ ಶುಚಿತ್ವವಿಲ್ಲದ ರೀತಿ, ಸ್ನಾನ ಮಾಡದೇ, ಪೂಜೆ ಮಾಡದೇ, ಜಗನ್ನಾಥನಿಗೆ ಕಿಚಡಿ ತಯಾರಿಸಿ, ನೈವೇದ್ಯ ಮಾಡುವುದನ್ನು ನೋಡುತ್ತಾರೆ. ಅದನ್ನು ನೋಡಿದ ಅರ್ಚಕರು. ಇದೇನು ಮಾಡುತ್ತಿರುವಿ..? ಯಾಕೆ 2 ದಿನದಿಂದ ದೇವಸ್ಥಾನಕ್ಕೆ ಬರಲಿಲ್ಲ..? ಎಂದು ಪ್ರಶ್ನಿಸುತ್ತಾರೆ.
ಆಗ ಕರಮಾಬಾಯಿ, ನನಗೆ ವಯಸ್ಸಾಗಿದೆ. ಹಾಗಾಗಿ ನಾನು ದೇವಸ್ಥಾನದ ಬಳಿ ಬರಲಾಗುವುದಿಲ್ಲ. ಕಿಚಡಿ ಬೇಕಾದ್ರೆ ನೀನೇ ಮನೆಗೆ ಬಾ ಎಂದು ಜಗನ್ನಾಥನಿಗೆ ಹೇಳಿದ್ದೆ. ಆತ ಪ್ರತಿದಿನ ಬರುತ್ತಾನೆ. ಕಿಚಡಿ ತಿಂದು ಹೋಗುತ್ತಾನೆ. ಹಾಗಾಗಿ ಆತನಿಗಾಗಿಯೇ ಕಿಚಡಿ ಮಾಡುತ್ತಿರುವೆ ಎನ್ನುತ್ತಾಳೆ.
ಆಗ ಅರ್ಚಕರು, ಈ ಅಜ್ಜಿಗೆ ವಯಸ್ಸಾಗಿದೆ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾಳೆ ಎಂದು ತಿಳಿದು. ಆಯಿತಾಯಿತು. ನಿನ್ನ ಜಗನ್ನಾಥನಿಗೆ ನೈವೇದ್ಯ ಮಾಡುವಾಗ, ಸ್ವಲ್ಪ ಸ್ನಾನ ಮಾಡು, ಪೂಜೆ ಮಾಡು, ಶ್ಲೋಕ ಹೇಳು ಎನ್ನುತ್ತಾರೆ. ಆಗ ವೃದ್ಧೆ ಆಯಿತೆಂದು ಹೇಳುತ್ತಾಳೆ. ಮರುದಿನ ಏನಾಗುತ್ತದೆ ಎಂದು ಮುಂದಿನ ಭಾಗದಲ್ಲಿ ತಿಳಿಯೋಣ.




