Spiritual: ದೇವರ ದಯೆ ಇಲ್ಲದೇ 1 ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುತ್ತಾರೆ. ಅದೇ ದೇವರ ದಯೆ ಇದ್ದರೆ ನಾವಂದುಕ“ಂಡ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಯವರ ಮೇಲೆ ಹೆಚ್ಚು ದೇವರ ದಯೆ ಇದೆ ಎಂದು ತಿಳಿಯೋಣ.
ಕರ್ಕ ರಾಶಿ: ಕರ್ಕ ರಾಶಿಯವರು ಧಾರ್ಮಿಕತೆ, ಪೂಜೆ, ಪುನಸ್ಕಾರಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿ ಮಾಡುತ್ತಾರೆ. ಇವರು ಭಾವನಾತ್ಮಕ ಜೀವಿಯಾಗಿದ್ದು, ಇನ್ನ“ಬ್ಬರಿಗೆ ಕೇಡು ಬಯಸುವುದಿಲ್ಲ. ಈ ಉತ್ತಮ ಮನಸ್ಸಿನಿಂದಲೇ ಈ ರಾಶಿಯವರು ದೇವರ ದಯೆಗೆ ಪಾತ್ರರಾಗುತ್ತಾರೆ. ಹೆಚ್ಚು ಉನ್ನತಿಯೂ ಕಾಣದೇ, ಹೆಚ್ಚು ಅವನತಿಯೂ ಕಾಣದೇ, ಹೆಚ್ಚು ಆಸೆ ಆಕಾಂಕ್ಷೆ ಇಲ್ಲದೇ, ಎಲ್ಲ ದೇವರ ದಯೆ ಎಂದು ಬದುಕುವವರು ಈ ರಾಶಿಯವರು.
ಕನ್ಯಾ ರಾಶಿ: ಶಿಸ್ತಿಗೆ ಹೆಚ್ಚು ಬೆಲೆ ನೀಡುವ ಕನ್ಯಾ ರಾಶಿಯವರು, ದೇವರಲ್ಲಿಯೂ ಹೆಚ್ಚು ಭಕ್ತಿ ಹ“ಂದಿದವರಾಗಿದ್ದಾರೆ. ಅಲ್ಲದೇ ದೇವರಿಗೆ ಸಂಬಂಧಿಸಿದ ಆಚರಣೆ ಮೇಲೆ ಹೆಚ್ಚು ಆಸಕ್ತಿ, ಶ್ರದ್ಧೆ ಇರಿಸಿದ್ದಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ದೇವರ ಮೇಲೆ ಹೆಚ್ಚು ಭಕ್ತಿ ಇದ್ದು, ಇವರು ಆದಷ್ಟು ಜೀವನದಲ್ಲಿ ನಿಯತ್ತಿನಿಂದ ಇರಲು ಪ್ರಯತ್ನಿಸುತ್ತಾರೆ. ಹಾಗಾಗಿ ದೇವರ ದಯೆ ಇವರ ಮೇಲೆ ಸದಾ ಇರುತ್ತದೆ.
ಧನು ರಾಶಿ: ಧನು ರಾಶಿಯವರು ಕೂಡ ದೇವರಲ್ಲಿ ಹೆಚ್ಚು ಭಕ್ತಿ, ನಂಬಿಕೆ ಉಳ್ಳವರಾಗಿರುತ್ತಾರೆ. ಈ ನಂಬಿಕೆಯೇ ಇವರನ್ನು ಕಷ್ಟ ಕಾಲದಿಂದ ಪಾರು ಮಾಡುತ್ತದೆ. ದಾನ ಧರ್ಮ, ಉತ್ತಮ ಕಾರ್ಯಗಳಲ್ಲಿ ಇವರು ನಂಬಿಕೆ ಹ“ಂದಿದ್ದು, ಇವರು ಮಾಡುವ ಉತ್ತಮ ಕೆಲಸಗಳೇ ಇವರ ಕೈ ಹಿಡಿಯುತ್ತದೆ.
ಮೀನ ರಾಶಿ: ಮೀನ ರಾಶಿಯವರು ಸಾತ್ವಿಕ ಸ್ವಭಾವದರು. ಅಲ್ಲದೇ ದೇವರಲ್ಲಿ ನಂಬಿಕೆ ಇರಿಸಿಕ“ಂಡವರು. ಇವರ ಸೌಮ್ಯ ಸ್ವಭಾವವರೇ ಇವರಿಗೆ ವರವಾಗಿದ್ದು, ಉತ್ತಮ ಕರ್ಮಗಳನ್ನು ಮಾಡುವಲ್ಲಿ ಸಹಕಾರಿಯಾಗಿದೆ. ಈ ಉತ್ತಮ ಕಾರ್ಯಗಳೇ ಇವರನ್ನು ಕಾಪಾಡುತ್ತದೆ.