Spiritual: ಭಾರತದಲ್ಲಿ ರಾಶಿ ರಾಶಿ ಪುರಾತನ, ಪ್ರಾಚೀನ ಕಾಲದ, ಶ್ರೀಮಂತ, ಸಾಂಸ್ಕೃತಿಕ ದೇವಸ್ಥಾನಗಳಿದೆ. ಇಡೀ ಪ್ರಪಂಚದಲ್ಲಿ ಹಿಂದೂ ದೇವಸ್ಥಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶ ಅಂದ್ರೆ ಅದು ಭಾರತ ಮಾತ್ರ.
ಆದರೆ ಇಲ್ಲಿನ ವಿಶೇಷತೆ ಅಂದ್ರೆ ನಮ್ಮ ದೇಶದಲ್ಲಿ ಬರೀ ದೇವರ ದೇವಸ್ಥಾನ ಮಾತ್ರವಲ್ಲದೇ, ರಾಕ್ಷಸರಿಗೂ ದೇವಸ್ಥಾನವಿದೆ. ಮಹಾಭಾರತದಲ್ಲಿ ಬರುವ ರಕ್ಕಸಿಯಾಗಿರುವ ಹಿಡಿಂಬೆಗೂ ನಮ್ಮ ದೇಶದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಹಾಗಾದ್ರೆ ಆ ದೇವಸ್ಥಾನ ಎಲ್ಲಿದೆ..? ಆ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಪ್ರವಾಸಿ ತಾಣ ಎನ್ನಿಸಿಕ“ಂಡಿರುವ ಹಿಮಾಚಲಪ್ರದೇಶದ ಮನಾಲಿಯಲ್ಲಿ ಈ ಹಿಡಿಂಬಾ ದೇಗುಲವಿದೆ. ಇಲ್ಲಿ ಜನ ಹಿಡಿಂಬೆಯನ್ನು ಕಾಳಿಯ ರೂಪವೆಂದು ಭಾವಿಸಿ ಪೂಜಿಸುತ್ತಾರೆ. ಮನಾಲಿಗೆ ಪ್ರವಾಸ ಅಥವಾ ಹನಿಮೂನ್‌ಗೆ ಬರುವ ಜನ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಮನಾಲಿಯ ಕಾಡಿನಲ್ಲಿ ದೇವದಾರು ಮರದ ಮಧ್ಯದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಈ ಕಾಡಿನ ಸೌಂದರ್ಯದ ಮಧ್ಯೆ ಇರುವ ಈ ದೇವದಾರು ಮರಗಳೇ ಈ ದೇವಸ್ಥಾನದ ಅಂದವನ್ನು ಹೆಚ್ಚಿಸಿದೆ ಅಂದರೆ ತಪ್ಪಾಗಲಾರದು. ಇದರ ಇನ್ನ“ಂದು ವಿಶೇಷತೆ ಅಂದ್ರೆ ಈ ದೇವಸ್ಥಾನ ಮರದಿಂದ ನಿರ್ಮಿಸಲಾಗಿದೆ.
ಇನ್ನು ದೇವಸ್ಥಾನದ ವಿಚಿತ್ರ ಸಂಗತಿ ಅಂದ್ರೆ, ಈ ದೇವಸ್ಥಾನದಲ್ಲಿ ಯಾವುದೇ ಮೂರ್ತಿ ಇಲ್ಲ. ಬೃಹತ್ ಪಾಾದದ ರೂಪದಲ್ಲಿರುವ ಕಲ್ಲನ್ನೇ ಪೂಜಿಸಲಾಗುತ್ತದೆ. ಇದು ಹಿಡಿಂಬೆಯ ಪಾದ ತಾಕಿರುವ ಕಲ್ಲೆನ್ನಲಾಗಿದೆ. ಅಲ್ಲದೇ ಇದೇ ಸ್ಥಳದಲ್ಲಿ ಹಿಡಿಂಬೆ ತಪಸ್ಸು ಮಾಡಿದ್ದಳೆನ್ನಲಾಗಿದೆ. ಈ ದೇವಸ್ಥಾನದ ಗರ್ಭಗುಡಿ ಗುಹೆಯಂತಿದೆ.
ಇನ್ನು ಭೀಮಸೇನನಿಂದ ಪಡೆದಿದ್ದ ಮಗನಾಗಿರುವ ಘಟೋತ್ಕಜನ ದೇವಸ್ಥಾನವೂ ಇಲ್ಲಿದೆ. ಆದರೆ ಅದು ಬೃಹತ್ ಮರವಾಗಿದೆ. ಈ ಮರವನ್ನೇ ಘಟೋತ್ಕಜನ ರೂಪ ಎಂದು ಪೂಜಿಸಲಾಾಗುತ್ತದೆ. ಈ ಮರಕ್ಕೆ ಕತ್ತಿ, ಚೂರಿ, ಪ್ರಾಣಿಗಳ ಬುರುಡೆ, ಕೊಂಬು ಕಟ್ಟಲಾಗಿದೆ.
ಈ ದೇವಸ್ಥಾನವನ್ನು ಏಕೆ ನಿರ್ಮಿಸಲಾಯಿತು. ಹಿಡಿಂಬೆಗೂ ಮನಾಲಿಗೂ ಸಂಬಂಧವೇನು ಎಂದು ಮುಂದಿನ ಭಾಗದಲ್ಲಿ ತಿಳಿಯೋಣ.