Spiritual: ಮನಾಲಿಯ ರಾಜರನ್ನು ಪ್ರಜೆಗಳನ್ನು ಕಾಯುವ ದೇವತೆ ಅಂದ್ರೆ ಅದು ಹಿಡಿಂಬೆ ಅಂತಲೇ ಇಲ್ಲಿನ ಜನರ ನಂಬಿಕೆ. ಈ ದೇವಸ್ಥಾನ ನಿರ್ಮಿಸೋಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..
ಮನಾಲಿಯ ಈ ಪ್ರದೇಶಕ್ಕೆ ಹಿಡಿಂಬ ರಾಜನಾಗಿರುತ್ತಾನೆ. ಹಿಡಿಂಬೆ ಅವನ ತಂಗಿ. ಹಿಡಿಂಬನಿಗೆ ರಾಕ್ಷಸ ಗುಣ ತುಂಬಿ ತುಳುಕುತ್ತಿದ್ದರೆ, ಹಿಡಿಂಬೆಗೆ ಕರುಣೆ ಹೆಚ್ಚು. ಆಕೆ ಮನುಷ್ಯರಂತೆ ವರ್ತಿಸುವವಳು. ಹಾಗಾಗಿಯೇ ಭೀಮಸೇನನಿಗೆ ಮನಸೋತು, ಕೆಲ ಸಮಯ ಅವನ ಪತ್ನಿಯಾಗಿ ಘಟೋತ್ಕಜನನ್ನು ಪಡೆದಿದ್ದಳು.
ಭೀಮನ ಮೇಲೆ ಪ್ರೀತಿಯಾಗಿದ್ದು ಹೇಗೆ..?
ಪಾಂಡವರು ಮನವಾಸಕ್ಕೆಂದು ಅರಣ್ಯಕ್ಕೆ ಬಂದಾಗ, ಭೀಮನನ್ನು ಕಂಡ ಹಿಡಿಂಬನಿಗೆ ಆತನನ್ನು ತಿನ್ನಬೇಕು ಎಂದು ಮನಸ್ಸಾಯಿತು. ಆಗ ಹಿಡಿಂಬ ತಂಗಿ ಹಿಡಿಂಬೆಯನ್ನು ಭೀಮನನ್ನು ಪುಸಲಾಯಿಸಿ, ಕರೆತಾ ಎಂದು ಕಳುಹಿಸಿದ. ಭೀಮನನ್ನು ತರಲು ಹೋಗಿದ್ದ ಹಿಡಿಂಬೆಗೆ ಭೀಮನ ಮೇಲೆ ಪ್ರೇಮವಾಯಿತು. ಹೀಗಾಗಿ ಸಹೋದರ ಹಿಡಿಂಬನ ದುರಾಲೋಚನೆ ಬಗ್ಗೆ ಭೀಮನಲ್ಲಿ ಹೇಳುತ್ತಾಳೆ. ಆಗ ಭೀಮ ಹಿಡಿಂಬನ ಜತೆ ಯುದ್ಧ ಮಾಡಿ ಆತನ ಸಂಹಾರ ಮಾಡುತ್ತಾನೆ.
ಬಳಿಕ ಭೀಮ ಹಿಡಿಂಬೆ ವಿವಾಹವಾಗುತ್ತದೆ. ನಂತರ ಪುತ್ರ ಸಂತಾನವಾಗುತ್ತದೆ. ಇಬ್ಬರೂ 1 ವರ್ಷ ಸಂಸಾರ ಮಾಡಿ, ತಮ್ಮ ತಮ್ಮ ದಾರಿಗೆ ಹೋಗುತ್ತಾರೆ. ಭೀಮ ವನವಾಸ ಮುಂದುವರಿಸಿದರೆ, ಹಿಡಿಂಬೆ ಪುತ್ರನ ಜತೆ ಮನಾಲಿಯಲ್ಲೇ ಇದ್ದು, ರಾಜ್ಯ ಭಾರ ಮಾಡುತ್ತಾಳೆ.
ಮುಂದೆ ಮಹಾಭಾರತ ಯುದ್ಧ ನಡೆಯುವಾಗ ಪಾಂಡವರ ಪರವಾಗಿ, ತಂದೆಗೆ ಬೆಂಬಲವಾಗಿ ಪುತ್ರ ಘಟೋತ್ಕಜನನ್ನು ಕಳುಹಿಸಿಕ“ಡುತ್ತಾಳೆ. ಆದರೆ ಪುತ್ರ ಘಟೋತ್ಕಜ ಮಾತ್ರ ಮರಳಿ ಬರುವುದಿಲ್ಲ. ಬಳಿಕ ಹಿಡಿಂಬೆ ಮನಾಲಿಯ ಇದೇ ಸ್ಥಳದಲ್ಲಿ ತಪಸ್ಸಿಗೆ ಕೂರುತ್ತಾಳೆ. ಆಕೆ ತಪಸ್ಸಿಗೆ ಕುಳಿತ ಸ್ಥಳದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.