Spiritual: ನವವಿವಾಹಿತರು ಕೆನಸುಗಳನ್ನು ಕಟ್ಟಿಕ“ಂಡು ವಿವಾಹವಾಗುತ್ತಾರೆ. ಆ ಕನಸು ನನಸಾಗಬೇಕು, ಜೀವನ ಚೆಂದವಿರಬೇಕು ಅಂದ್ರೆ ನಿಮ್ಮ ಖುಷಿಗೆ ಯಾರದ್ದೂ ದೃಷ್ಟಿ ಬೀಳಬಾರದು. ಹಾಗಾಗಿ ನೀವು ಕೆಲ ಕೆಲಸಗಳನ್ನು ಮಾಡಬೇಕು. ಏನು ಮಾಡಬೇಕು ತಿಳಿಯೋಣ ಬನ್ನಿ..
ಕುಂಕುಮ ಅಥವಾ ವಿಭೂತಿ ಹಚ್ಚಿ: ಕೆಟ್ಟದೃಷ್ಟಿ ತಾಕಬಾರದು ಅಂದ್ರೆ, ನೀವು ದೇವರ ಕುಂಕುಮ ಅಥವಾ ವಿಭೂತಿ ಹಚ್ಚಿ. ಇದರಿಂದ ನಿಮಗೆ ಯಾರ ಕೆಟ್ಟದೃಷ್ಟಿ ಬೀಳುವುದಿಲ್ಲ.
ಕಪ್ಪು ಅಥವಾ ಕೆಂಪು ದಾರ: ದೇವಸ್ಥಾನದಲ್ಲಿ ದೃಷ್ಟಿ ತಾಕಬಾರದು ಎಂದು ಕೆಂಪು ಅಥವಾ ಕಪ್ಪು ದಾರ ಕಟ್ಟುತ್ತಾರೆ. ನಿಮ್ಮ ಜಾತಕಕ್ಕೆ ಅನುಗುಣವಾಗಿ ನೀವು ಈ ದಾರಗಳನ್ನು ಕಟ್ಟಿಕ“ಳ್ಳಬಹುದು. ಇದರಿಂದ ಕೂಡ ಕೆಟ್ಟದೃಷ್ಟಿಯಿಂದ ನೀವು ರಕ್ಷಣೆ ಪಡೆಯಬಹುದು.
ಪೂಜೆ-ಹೋಮ ಹವನ: ಮನೆಯಲ್ಲಿ ವರ್ಷಕ್ಕೆ ನಾಲ್ಕು ಬಾರಿಯಾದರೂ ಪೂಜೆ, ಹೋಮ ಹವನ ಮಾಡಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುವುದಲ್ಲದೇ, ಯಾರ ದೃಷ್ಟಿಯೂ ನಿಮ್ಮ ಮೇಲೆ ಬೀಳುವುದಿಲ್ಲ. ಅಲ್ಲದೇ, ದೇವಸ್ಥಾನಗಳಲ್ಲಿ ನಡೆಯುವ ಪೂಜೆಯಲ್ಲಿಯೂ ನೀವು ಭಾಗವಹಿಸಬಹುದು.
ನೀರಿಗೆ ಕಲ್ಲುಪ್ಪು ಹಾಕಿ ಸ್ನಾನ ಮಾಡಿ: ವಾರಕ್ಕೆ 2 ಬಾರಿ ನೀವು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಹಾಕಿ ಸ್ನಾನ ಮಾಡಬೇಕು. ಇದರಿಂದ ನಿಮ್ಮ ಮೇಲಿರುವ ನಕಾರಾತ್ಮಕ ಅಂಶಗಳು ದೂರವಾಗುತ್ತದೆ. ಕುದೃಷ್ಟಿಯೂ ನಾಶವಾಗುತ್ತದೆ.