Spiritual: ಅವಿವಾಹಿತ ಮಹಿಳೆಯರು ಕೆಲ ಕೆಲಸಗಳನ್ನು ಮಾಡಬಾರದು ಅನ್ನೋದು ಹಿಂದೂ ಧರ್ಮದ ಪದ್ಧತಿ. ಕತ್ತಿಗೆ ತಾಳಿ ಬಿದ್ದ ಮೇಲೆಯೇ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು. ಹಾಗಾದ್ರೆ ಅವಿವಾಹಿತೆಯರು ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ತುಳಸಿ ಗಿಡಕ್ಕೆ ನೀರು ಹಾಕುವುದಿಲ್ಲ: ತುಳಸಿ ದೇವಿಯನ್ನು ಆರಾಧಿಸಿದರೆ, ಬೇಗ ವಿವಾಹವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಮದುವೆಗೂ ಮುನ್ನ ತುಳಸಿಗೆ ನೀರು ಹಾಕಬಾರದು ಅಂತಾ ಹೇಳಲಾಗಿದೆ. ತುಳಸಿಗೆ ವಿವಾಹದ ಬಳಿಕ ನೀರೆರೆದು, ಪ್ರಾರ್ಥಿಸಿದರೆ, ಆಕೆ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಸುತ್ತಾಳೆ ಅನ್ನೋ ನಂಬಿಕೆ ಇದೆ.
ಈಗಿನ ಕಾಲದಲ್ಲಿ ಫ್ಯಾಷನ್ ಹೆಸರಲ್ಲಿ ಜನ ಏನೇನೋ ಮಾಡ್ತಿದ್ದಾರೆ. ಅಂಥ ಫ್ಯಾಷನ್ ಹೆಸರಲ್ಲಿ ಕೆಲವು ರಿಂಗ್ ಅಂತಾ, ಕಾಲಿನ ಬೆರಳಿಗೆ ಉಂಗುರ ಹಾಕ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಮದುವೆಯಗದವರು ಕಾಲುಂಗುರ ಧರಿಸಲೇಬಾರದು.
ಕೂದಲು ಓಪನ್ ಆಗಿರಿಸುವುದು ಇಂದಿನ ಕಾಲದಲ್ಲಿ ಕಾಮನ್ ಮತ್ತು ಫ್ಯಾಷನ್. ಆದರೆ ಹಿಂದಿನ ಕಾಲದವರ ಪ್ರಕಾರ, ಕೂದಲು ಓಪನ್ ಆಗಿರಿಸಿದರೆ, ನಕಾರಾತ್ಮಕ ಶಕ್ತಿ ನಮ್ಮನ್ನು ಆವರಿಸಿಕ“ಳ್ಳುತ್ತದೆ. ಹಾಗಾಗಿ ಹೆಣ್ಣು ಮಕ್ಕಳು, ಅದರಲ್ಲೂ ಅವಿವಾಾಹಿತೆಯರು ಕೂದಲು ಓಪನ್ ಬಿಡಬಾರದು ಅಂತಾ ಹೇಳಲಾಗುತ್ತದೆ.
ಇನ್ನು ಅವಿವಾಹಿತೆಯರು ಸಿಂಧೂರ ಹಚ್ಚಬಾರದು. ಹಣೆಯ ಮೇಲ್ಭಾಗದಲ್ಲಿ, ಮಧ್ಯಭಾಗದಲ್ಲಿ ಸಿಂಧೂರ ಹಚ್ಚಲಾಗುತ್ತದೆ. ವಿವಾಹದ ಬಳಿಕವೇ ಹೀಗೆ ಸಿಂಧೂರ ಹಚ್ಚಬೇಕು. ವಿವಾಹಕ್ಕೂ ಮುನ್ನ ಸಿಂಧೂರ ಹಚ್ಚುವುದು ಉತ್ತಮವಲ್ಲ ಅಂತಾರೆ ಹಿರಿಯರು.