Spiritual: ಹಿಂದೂ ಧರ್ಮದಲ್ಲಿ ಜನಿಸಿದಾಗಿನಿಂದ ಸಾವಿನವರೆಗೂ ಹಲವಾರು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದು ಬರೀ ಪದ್ಧತಿಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ. ಅಂಥ ಪದ್ಧತಿಗಳಲ್ಲಿ ಸಾವಿನ ಬಳಿ ಅಂತ್ಯಸಂಸ್ಕಾರ ಮಾಡುವಾಗ, ಶವ ಸುಡುವಾಗ ಕಪಾಲ ಕ್ರಿಯೆ ನಡೆಯಬೇಕು. ಹಾಗೆ ಕಪಾಲ ಕ್ರಿಯೆ ನಡೆದಾಗಲೇ, ಅಂತ್ಯಸಂಸ್ಕಾರ ಪೂರ್ಣವಾದಿತೆಂದರ್ಥ. ಹಾಗಾದ್ರೆ ಈ ಕಪಾಲ ಕ್ರಿಯೆ ಎಂದರೇನು ಅಂತಾ ತಿಳಿಯೋಣ ಬನ್ನಿ..
ಕಪಾಲ ಎಂದರೆ ಮನುಷ್ಯನ ತಲೆಬುರುಡೆ. ಶವಕ್ಕೆ ಅಗ್ನಿಸ್ಪರ್ಶ ಮಾಡಿದ ಬಳಿಕ, ಮನುಷ್ಯನ ದೇಹವು ನಾಶವಾಗುತ್ತದೆ. ಆದರೆ ತಲೆಬುರುಡೆ ಮಾತ್ರ ಹಾಗೇ ಉಳಿಯುತ್ತದೆ. ಆದರೆ ಅದನ್ನು ಹಾಗೇ ಉಳಿಯಲು ಬಿಡಬಾರದು. ಅದನ್ನು ಕೂಡ ಬೂದಿ ಮಾಡಲೇಬೇಕು. ಹಾಗೆ ತಲೆಬುರುಡೆಯನ್ನು ಬೂದಿ ಮಾಡುವ ಕ್ರಿಯೆಯೇ ಕಪಾಲ ಕ್ರಿಯೆ.
ಕಪಾಲ ಕ್ರಿಯೆ ಮಾಡದಿದ್ದಲ್ಲಿ, ಆ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಮುಂದಿನ ಜನ್ಮದಲ್ಲಿ ಮೆದುಳಿಗೆ, ತಲೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬರಬಹುದೆಂಬ ನಂಬಿಕೆ ಇದೆ. ಹಾಗಾಗಿ ಮನುಷ್ಯ ಸಾಯುವಾಗ ಅವನ ದೇಹದ ಎಲ್ಲ ಭಾಗ ಸರಿಯಾಗಿರಬೇಕು ಎಂದು ಹೇಳಲಾಗುತ್ತದೆ.