Spiritual: ದೇವರಲ್ಲಿ ಸರಳವಾಗಿರುವ ದೇವರು ಅಂದರೆ ಶಿವ. ಆತನೂ ಸರಳ, ಆತನಿಗೆ ಭಕ್ತಿ ಮಾಡುವ ರೀತಿಯೂ ಸರಳ. ನೀವು ಶಿವಲಿಂಗಕ್ಕೆ ನೀರು ಅರ್ಪಿಸಿದರೂ ಸಾಕು. ದೇವರು ನಿಮ್ಮ ಭಕ್ತಿಯನ್ನು ಅರ್ಪಿಸಿಕ“ಳ್ಳುತ್ತಾನೆ. ಅದೇ ರೀತಿ ಶಿವ ಕೂಡ ಹುಲಿಯಚರ್ಮ, ರುದ್ರಾಕ್ಷಿ, ಸರ್‌ಪ, ತ್ರಿಶೂಲ, ಭಸ್ಮ ಧಾರಣೆ ಮಾಡುತ್ತಾನೆ.
ಹಾಗಾದ್ರೆ ಶಿವ ಭಸ್ಮ ಧಾರಣೆ ಮಾಡಲು ಕಾರಣವೇನು..? ಶಿವಭಕ್ತರಿಗೂ ಕೂಡ ಶಿವನ ಪೂಜೆ ಭಸ್ಮವೇ ಹಣೆಗೆ ತಿಲಕವಾಗಿರುತ್ತದೆ. ಹಾಗಾದ್ರೆ ಇದರ ಹಿಂದಿರುವ ಸತ್ಯವೇನು ತಿಳಿಯೋಣ ಬನ್ನಿ..
ಸತಿದೇವಿ ಶಿವನನ್ನು ಮದುವೆಯಾಗಿದ್ದು, ಸತಿಯ ತಂದೆ ದಕ್ಷನಿಗೆ ಇಷ್ಟವಿರುವುದಿಲ್ಲ. ಹಾಗಾಗಿ ವಿವಾಹದ ಬಳಿಕ, ದಕ್ಷ ಮಹಾರಾಜ ಶಿವ ಮತ್ತು ಸತಿಯನ್ನೂ ದೂರವಿರಿಸಿರುತ್ತಾನೆ. ದಕ್ಷ ಮಹಾರಾಜ ಯಜ್ಞ ಆಯೋಜಿಸಿ, ಶಿವ ಮತ್ತು ಸತಿಯನ್ನು ಬಿಟ್ಟು ಉಳಿದವರನ್ನೆಲ್ಲ ಯಜ್ಞಕ್ಕೆ ಕರೆಯುತ್ತಾನೆ.
ಸತಿದೇವಿಗೆ ವಿಷಯ ತಿಳಿದು ಆಕೆ ಕರೆಯದಿದ್ದರೂ, ಯಜ್ಞಕ್ಕೆ ಹೋಗುತ್ತಾಳೆ. ಆಗ ಆಕೆಗೆ ಅಲ್ಲಿ ದಕ್ಷ ಮಹಾರಾಜ ಅವಮಾನಿಸುತ್ತಾನೆ. ಇದರಿಂದ ಬೇಸರವಾಗುವ ಸತಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಆಕೆಯ ದೇಹವನ್ನು ಹಿಡಿದು ಶಿವ ಶಿವ ತಾಂಡವ ನೃತ್ಯ ಮಾಡುತ್ತಾನೆ.
ಇದನ್ನು ಕಂಡ ವಿಷ್ಣು ಸತಿಯ ದೇಹವನ್ನು 18 ಭಾಗಗಳಾಗಿ ತುಂಡರಿಸುತ್ತಾನೆ. ಈ ಭಾಗಗಳು ಭೂಮಿಯ ಹಲವು ಭಾಗಗಳಲ್ಲಿ ಬಿದ್ದು, ಆ ಸ್ಥಳ ಶಕ್ತಿ ಪೀಠವಾಗಿ ಮಾರ್ಪಾಡಾಗುತ್ತದೆ. ಆದರೆ ಶಿವನ ಕೈಯಲ್ಲಿ ಬರೀ ಭಸ್ಮ ಉಳಿಯುತ್ತದೆ. ಆಗ ಶಿವ ಸತಿಯ ನೆನಪಿಗಾಗಿ ಭಸ್ಮವನ್ನು ತನ್ನ ದೇಹಕ್ಕೆ ಲೇಪಿಸಿಕ“ಳ್ಳುತ್ತಾನೆ.
ಭಸ್ಮ ಎಂದರೆ ಬೂದಿ ಎಂದರ್ಥ. ಈ ಪ್ರಪಂಚದಲ್ಲಿ ಜನಿಸಿದ ಪ್ರತಿಯೋರ್ವನು ಮುಂದೆ 1 ದಿನ ಬೂದಿಯಾಗಲೇಬೇಕು. ನಮ್ಮ ದೇಹ, ಸೌಂದರ್ಯ, ಮಾತು ಇದ್ಯಾವುದು ಶಾಶ್ವತವಲ್ಲ. ಈ ಪ್ರಪಂಚದಲ್ಲಿರುವ ಯಾವುದೂ ಶಾಶ್ವತವಲ್ಲ. ಎಲ್ಲವೂ ಭಸ್ಮವಾಗಲೇಬೇಕು. ಹಾಗಾಗಿ ಭಸ್ಮವನ್ನು ನಮ್ಮ ಹಣೆಗೆ ಇರಿಸುವ ಮುನ್ನ ನಾವು ಇದನ್ನು ತಿಳಿದಿರಬೇಕು.