Spiritual: ಹಿಂದೂ ಧರ್ಮದಲ್ಲಿ ಹಲವು ನಿಯಂಗಳು, ಪದ್ಧತಿಗಳು ಇದೆ. ಎಲ್ಲ ಧಾರ್ಮಿಕ ಕೆಲಸದಲ್ಲೂ ನಾವು ಆ ನೀತಿ ನಿಯಮವನ್ನು ಪಾಲಿಸಬೇಕು. ಹಾಗೆ ಪಾಲಿಸಬೇಕಾದ ನಿಯಮಗಳಲ್ಲಿ ಮರಣವಾದಾಗ, ಸೂರ್ಯಾಸ್ತಕ್ಕೂ ಮುನ್ನ ಶವಸಂಸ್ಕಾರ ಮಾಡುವುದು. ಹಾಗಾದ್ರೆ ಏಕೆ ಹಿಂದೂ ಧರ್ಮದಲ್ಲಿ ಸೂರ್ಯಾಸ್ತಕ್ಕೂ ಮುನ್ನ ಶವಸಂಸ್ಕಾರ ಮಾಡಲಾಗುತ್ತದೆ. ರಾತ್ರಿ ಏಕೆ ಶವಸಂಸ್ಕಾರ ಮಾಡುವುದಿಲ್ಲ ಅಂತ ತಿಳಿಯೋಣ ಬನ್ನಿ.
ಸತ್ತ ವ್ಯಕ್ತಿಗೆ ಮೋಕ್ಷ ಸಿಗಬೇಕು ಎಂದರೆ, ಅಂತ್ಯಸಂಸ್ಕಾರ ಕೂಡ ಹಗಲಿನಲ್ಲೇ ಆಗಬೇಕು. ಅದೇ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೇ, ಸೂರ್ಯನ ಕಿರಣ ಮರಣವಾದ ವ್ಯಕ್ತಿಯ ಆತ್ಮವನ್ನು ಮೋಕ್ಷದ ಕಡೆಗೆ ಕರೆದ“ಯ್ಯುತ್ತದೆ ಅನ್ನೋ ನಂಬಿಕೆ ಇದೆ.
ರಾತ್ರಿ ವೇಳೆ ನಾಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಿರುತ್ತದೆ. ಈ ಸಮಯವನ್ನು ಅಶುಭ ಸಮಯವೆಂದೇ ಪರಿಗಣಿಸಲಾಗುತ್ತದೆ. ಬೆಳಗ್ಗಿನ ಜಾವ ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರುತ್ತದೆ. ಹಾಗಾಗಿ ಸೂರ್ಯೋದಯವಿರುವಾಗಲೇ ಶವಸಂಸ್ಕಾರ ಮಾಡಬೇಕು ಎಂದು ಹೇಳುವುದು.
ಇನ್ನು ಶವಸಂಸ್ಕಾರ ಮಾಡುವಾಗ ಅಗ್ನಿಯ ಬಳಕೆ ಮಾಡುವುದರಿಂದ ಸೂರ್ಯನಿರುವ ಸಮಯದಲ್ಲಿಯೇ ಅಗ್ನಿಗೆ ಹಚ್ಚು ಶಕ್ತಿ ಇರುತ್ತದೆ. ಈ ಕಾರಣಕ್ಕೆ ಬೆಳಕಿನ ಸಮಯದಲ್ಲೇ ಶವಕ್ಕೆ ಅಗ್ನಿಸ್ಪರ್ಶ ಮಾಡಬೇಕು ಎಂದು ಹೇಳಲಾಗಿದೆ.
ಮುಖ್ಯವಾದ ವಿಚಾರ ಎಂದರೆ, ಸೂರ್ಯ ನಾರಾಯಣನ ಆಶೀರ್ವಾದವಿದ್ದರೆ, ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ. ಅಂದರೆ ಸೂರ್ಯನಿರುವ ಸಮಯದಲ್ಲೇ ಮದುವೆ, ಅಂತ್ಯಸಂಸ್ಕಾರವಾಗಬೇಕು. ಸೂರ್ಯನಿಲ್ಲದ ಸಮಯದಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಕೆಲಸ ಮಾಡಿದರೆ, ಅದರಿಂದ ಫಲ ಸಿಗುವುದಿಲ್ಲವೆಂದು ಹೇಳಲಾಗಿದೆ.