Spiritual: ನೀವು ಹಿಂದೂ ದೇವರುಗಳಲ್ಲಿ ಯಾವ ದೇವರು ಸುಂದರನೆಂದು ನೋಡಿದಾಗ, ನಿಮಗೆ ಅಲಂಕಾರ ಪ್ರಿಯನಾದ ಕೃಷ್ಣನೇ ನೆನಪಿಗೆ ಬರಬಹುದು. ಆಭರಣ ಧರಿಸಿ, ಪಿತಾಂಬರ, ಹಾರ, ಕೊಳಲು ಇವೆಲ್ಲವೂ ಶ್ರೀಕೃಷ್ಣ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಅವನ ಅಂದವನ್ನು ದುಪ್ಪಟ್ಟು ಮಾಡುವ ವಸ್ತು ಅಂದ್ರೆ ಅದು ನವಿಲುಗರಿ. ಹಾಗಾದ್ರೆ ಶ್ರೀಕೃಷ್ಣನ ಮುಕುಟದ ಮೇಲೆ ನವಿಲುಗರಿ ಇರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಶ್ರೀಕೃಷ್ಣ ತನ್ನ ಮುಕುಟದಲ್ಲಿ ನವಿಲುಗರಿ ಧರಿಸುವುದಕ್ಕೂ, ಶ್ರೀರಾಮನ ಅವತಾರಕ್ಕೂ ಸಂಬಂಧವಿದೆ. ತ್ರೇತಾಯುಗದಲ್ಲಿ ನವಿಲಿಗೆ ನೀಡಿದ ಮಾತಿನ ಪ್ರಕಾರ, ದ್ವಾಪರ ಯುಗದಲ್ಲಿ ಶ್ರೀರಾಮ ಶ್ರೀಕೃಷ್ಣನಾಗಿ ಜನಿಸಿ, ತಮ್ಮ ಮುಕುಟಕ್ಕೆ ನವಿಲುಗರಿ ಧರಿಸುತ್ತಾರೆ.
ವನವಾಸ ಸಂದರ್ಭದಲ್ಲಿ ರಾಮ, ಲಕ್ಷ್ಮಣ, ಸೀತೆ ನಡೆದು ಬರುತ್ತಿದ್ದಾಗ, ಸೀತೆಗೆ ಬಾಯಾರಿಕೆಯಾಗುತ್ತದೆ. ಆದರೆ ಸಮೀಪದಲ್ಲಿ ಎಲ್ಲಿಯೂ ನೀರು ಸಿಗುವುದಿಲ್ಲ. ಆಗ ಶ್ರೀರಾಮ, ಪ್ರಕೃತಿ ಮಾತೆಯನ್ನು ಕುರಿತು, ನದಿ ಹರಿಯುವ ಜಾಗವನ್ನು ತೋರಿಸು ಎಂದು ಮನವಿ ಮಾಡುತ್ತಾರೆ.
ಶ್ರೀರಾಮನ ಮನವಿ ಕೇಳಿ, ಇಂಥ ಪುಣ್ಯ ಕಾರ್ಯ ಮಾಡುವ ಅವಕಾಶ ನನಗೆ ಸಿಕ್ಕಿತಲ್ಲವೆಂದು ನವಿಲ“ಂದು ಬಂದು, ನಾನು ನನ್ನ ಗರಿಯನ್ನು ಚೆಲ್ಲುತ್ತ ನಡೆಯುತ್ತೇನೆ. ಅದನ್ನು ಕಂಡು ನೀವೂ ನನ್ನನ್ನು ಹಿಂಬಾಲಿಸಿ, ನಾನು ನಿಮ್ಮನ್ನು ನದಿಯೆಡೆಗೆ ಕರೆದ`ಯ್ಯುತ್ತೇನೆ ಎಂದು ನವಿಲು ಹೇಳುತ್ತದೆ.
ನವಿಲು ಹೇಳಿದಂತೆಯೇ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ನವಿಲನ್ನು ಹಿಂಬಾಲಿಸುತ್ತಾರೆ. ನವಿಲು ಹಾರುವ ಕಾರಣ, ಇವರೆಲ್ಲ ಎಲ್ಲಿ ದಾರಿ ತಪ್ಪುತ್ತಾರೋ ಎಂದು ನವಿಲು ತನ್ನ ಗರಿಯನ್ನು ಬಿಚ್ಚಿ, ನೆಲ್ಲಕ್ಕೆ ಹಾಕುತ್ತ ಹಾರುತ್ತದೆ. ನವಿಲು ಗಿ ತಾನಾಗಿಯೇ ಬಿಚ್ಚಿದರೆ ಏನಾಗುವುದಿಲ್ಲ. ಆದರೆ ತಾನಾಗಿಯೇ ನವಿಲು ಗರಿಯನ್ನು ಬಿಚ್ಚಿದ್ದರಿಂದ ಗರಿಯೆಲ್ಲ ಉದುರಿ, ನವಿಲಿನ ಪ್ರಾಣ ಪಕ್ಷಿ ಹಾರುವ ಸಮಯ ಬರುತ್ತದೆ. ಅಷ್ಟರಲ್ಲೇ ನದಿಯೂ ಸಮೀಪಿಸುತ್ತದೆ. ಸೀತೆ ನೀರು ಕುಡಿದು ದಾಹ ತಣಿಸಿಕ“ಳ್ಳುತ್ತಾಳೆ.
ಬಳಿಕ ನವಿಲಿನ ಪರಿಸ್ಥಿತಿ ಕಂಡು ಎಲ್ಲರೂ ಮರುಕಪಡುತ್ತಾರೆ. ಆಗ ಶ್ರೀರಾಮ ನವಿಲನ್ನು ಕುರಿತು, ಸೀತೆಯ ದಾಹ ತಣಿಸಲು ನೀನು ನಿನ್ನ ಗರಿಯನ್ನೇ ತೆಗೆದು ಜೀವತ್ಯಾಗ ಮಾಡಿರುವೆ. ನಿನ್ನ ಈ ಋಣವನ್ನು ನಾನು ಮುಂದಿನ ಅವತಾರದಲ್ಲಿ ತೀರಿಸುತ್ತೇನೆ ಎನ್ನುತ್ತಾರೆ. ಹಾಗಾಗಿಯೇ ಶ್ರೀಕೃಷ್ಣ ನವಿಲಿನ ಋಣ ತೀರಿಸಲು, ದ್ವಾಪರ ಯುಗದಲ್ಲಿ ಮುಕುಟದ ಮೇಲೆ ನವಿಲು ಗರಿಯನ್ನಿರಿಸಿಕ“ಳ್ಳುತ್ತಾರೆ.