- Advertisement -
Spiritual: ಹಿಂದೂಗಳಲ್ಲಿ ಪೂಜೆ ಮಾಡುವಾಗ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ತೆಂಗಿನಕಾಯಿ, ಕುಂಕುಮ-ಅರಿಶಿನ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ವಸ್ತುಗಳನ್ನು ಬಳಸಲಾಗುತ್ತದೆ. ಅದೇ ರೀತಿ ಕರ್ಪೂರ ಬಳಸಿ ಆರತಿ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಕರ್ಪೂರ ಬಳಸಿ ಆರತಿ ಮಾಡೋದಾದ್ರೂ ಯಾಕೆ ಅಂತಾ ತಿಳಿಯೋಣ ಬನ್ನಿ..
ಪೂಜೆ ಮಾಡುವಾಗ ಕರ್ಪೂರವನ್ನು ಬಳಸಿ ಆರತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೇ ಪಿತೃ ದೋಷ, ಗ್ರಹ ದೋಷಗಳ ಪರಿಣಾಮ ಕಡಿಮೆಯಾಗುತ್ತದೆ.
ಇನ್ನು ಇದಕ್ಕಿರುವ ವೈಜ್ಞಾನಿಕ ಕಾರಣವೇನೆಂದರೆ, ಮನೆಯಲ್ಲಿ ಕರ್ಪೂರ ಬಳಸಿ ಆರತಿ ಮಾಡುವುದರಿಂದ ಪರಿಸರ ಶುದ್ಧವಾಗುತ್ತದೆ. ಉಸಿರಾಡಲು ಉಪದ್ರಿಸುವ ಸೂಕ್ಷ್ಮ ಜೀವಿಗಳು, ಕ್ರಿಮಿ-ಕೀಟಗಳ ಓಡಾಟ ಕಡಿಮೆಯಾಗುತ್ತದೆ.
- Advertisement -