Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ ಪ್ರಾಮುಖ್ಯತೆ ಏನು..? ಯಾತಕ್ಕಾಗಿ ಅಕ್ಷತೆಯನ್ನು ಬಳಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಅಕ್ಷತೆ ಅಂದ್ರೆ ಹಾಳಾಗದ ವಸ್ತು ಎಂದರ್ಥ. ಅಕ್ಕಿಯ ಹೆಸರು ಅಕ್ಷತ್. ಇದರ ಜತೆ ಕುಂಕುಮ-ಅರಿಶಿನ ಸೇರಿಸಿ, ತಯಾರಿಸುವುದೇ ಅಕ್ಷತೆ. ಅಕ್ಕಿ ವಿಶೇಷ ಮತ್ತು ಪವಿತ್ರ ಧಾನ್ಯವಾಗಿರುವ ಕಾರಣಕ್ಕೆ ಅಕ್ಕಿಯನ್ನೇ ಅಕ್ಷತೆಗೆ ಬಳಸಲಾಗುತ್ತದೆ.

ಅಕ್ಕಿ- ಅಕ್ಷತೆ ಶುಕ್ರ ಗ್ರಹದ ಜತೆ ಸಂಬಂಧವಿದೆ. ಹಾಗಾಗಿ ಯಾರ ರಾಶಿಗೆ ಶುಕ್ರ ಅಧಿಪತಿಯಾಗಿರುತ್ತಾನೋ, ಆ ರಾಶಿಯವರಿಗೆ ಆಹಾರಕ್ಕೇನೂ ಸಮಸ್ಯೆಯಾಗುವುದಿಲ್ಲ. ಅನ್ನಪೂರ್ಣಯ ಕೃಪೆ ಅವರ ಮೇಲೆ ಸದಾ ಕಾಲವಿರುತ್ತದೆ. ಅಲ್ಲದೇ, ಅನ್ನಕ್ಕಾಗಿ ಖರ್ಚು ಮಾಡಲು, ಅವರ ಬಳಿ ಸದಾ ಹಣವಿರುತ್ತದೆ.

ಅಲ್ಲದೇ ಶುಕ್ರನ ಕೃಪೆ ಯಾರ ಮೇಲಿರುತ್ತದೋ, ಅವರು ಕೂಡ ಅನ್ನಕ್ಕಾಗಿ ಪರಿತಪಿಸಬೇಕಿಲ್ಲ. ಅಂಥವರಿಗೂ ಉತ್ತಮ ಆಹಾರ ಸಿಗುತ್ತದೆ. ನಿಮಗೆ ರುಚಿಕರ ಭೋಜನ ಸವಿಯುವ ಅವಕಾಶ ಸಿಕ್ಕಿತೆಂದರೆ, ಅಲ್ಲಿ ಅನ್ನಪೂರ್ಣಯ ಜತೆ ಶುಕ್ರನ ಅನುಗ್ರಹವಿದೆ ಎಂದೇ ಅರ್ಥ.

ಅಕ್ಕಿ-ಅರಿಶಿನ-ಕುಂಕುಮ ಇದೆಲ್ಲವೂ ಶುಭಸಂಕೇತವಾಗಿದ್ದು, ಇದರ ಬಳಕೆಯಿಂದ ದೇವರ ಆಶೀರ್ವಾದದ ಜತೆಗೆ, ಮನೆಯಲ್ಲಿ ಸಕಾರಾತ್ಮಕ ವಾತಾವರಣವೂ ಇರುತ್ತದೆ. ಹಾಗಾಗಿ ಪೂಜೆಯಲ್ಲಿ ಅಕ್ಷತೆಯ ಬಳಕೆ ಮಾಡಲಾಗುತ್ತದೆ.

About The Author