Spiritual: ದೇವಸ್ಥಾನದಲ್ಲಿ ಗಂಟೆ ಬಾರಿಸೋದು, ಪೂಜೆ, ಆರತಿ, ಪ್ರದಕ್ಷಿಣೆ ಎಲ್ಲವೂ ಇರುತ್ತದೆ. ಆದರೆ ದೇವಸ್ಥಾನದ ಗೋಪುರದ ಮೇಲೆ ಭಗವಧ್ವಜ ಅಂದ್ರೆ ಕೇಸರಿ ಧ್ವಜ ಹಾರಿಸಾಗುತ್ತದೆ. ಹಾಗಾದ್ರೆ ಏಕೆ ಈ ಧರ್ಮಧ್ವಜ ಹಾರಿಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಇಡೀ ದೇವಸ್ಥಾನದಲ್ಲಿ 2 ಕಡೆ ದೇವರ ಶಕ್ತಿ ಹೆಚ್ಚಾಗಿರುತ್ತದೆ. ಅದು ಎಲ್ಲಿ ಎಂದರೆ, ಗರ್ಭಗುಡಿಯಲ್ಲಿ ಮತ್ತು ಗೋಪುರದ ತುತ್ತತುದಿಯಲ್ಲಿ. ಹಾಗಾಗಿ ದೇವರ ದರ್ಶನವಾಗಿಲ್ಲ ಎಂದು ಬೇಸರಪಡುವವರು ಗೋಪುರದ ತುದಿಗೆ ಕೈ ಮುಗಿಯಬಹುದು.
ಕೆಲವರು ಅಲ್ಲಿ ಕಲಶ ಸ್ಥಾಪನೆ ಮಾಡುತ್ತಾರೆ. ಇನ್ನು ಕೆಲವರು ಧ್ವಜ ಹಾರಿಸುತ್ತಾರೆ. ದೇವಸ್ಥಾನ ನಿರ್ಮಾಣದ ಬಳಿಕ ಎಲ್ಲ ಕೆಲಸ ಮುಗಿದ ಮೇಲೆ ಧ್ವಜ ಹಾರಿಸಲಾಗುತ್ತದೆ. ಅಂದ್ರೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಮತ್ತು ದೇವರ ದರ್ಶನಕ್ಕೆ ದೇವಸ್ಥಾನ ಸಿದ್ಧವಾಗಿದೆ. ದೇವಸ್ಥಾನದ ರಕ್ಷಣೆಗೆ ಧರ್ಮಧ್ವಜ ನಿಂತಿದೆ ಎಂಬುದರ ಸಂಕೇತ ಇದಾಗಿದೆ.
ಇನ್ನು ಗೋಪುರ ಮತ್ತು ಗರ್ಭಗೃಹದ ಮಧ್ಯೆ 1 ಮಾಧ್ಯಮವಿರುತ್ತದೆ. ಸಂಬಂಧವಿರುತ್ತದೆ. ಆ ಮಾಧ್ಯಮದ ಪ್ರತೀರೂಪವಾಗಿ ಧ್ವಜವಿರುತ್ತೆ. ಹಾಗಾಗಿ ದೇವಸ್ಥಾನದ ಮೇಲೆ ಧ್ವಜ ಹಾರಿಸಲಾಗುತ್ತದೆ.




