Spiritual: ಮಹಾಲಯ ಅಮಾವಾಸ್ಯೆಯ ಬಗ್ಗೆ ಈ ವಿಷಯಗಳನ್ನು ತಿಳಿದಿರಬೇಕು

Spiritual: ಮಹಾಲಯ ಶುರುವಾಗಿದೆ. ಈ ಸಮಯದಲ್ಲಿ ನಾವು ಶ್ರಾದ್ಧಗಳನ್ನು ಮಾಡಬೇಕು. ನಮ್ಮನ್ನಗಲಿರುವ ಹಿರಿಯರ ಹೆಸರಿನಲ್ಲಿಅನ್ನದಾನ ಮಾಡಬಹುದು. ಅಲ್ಲದೇ, ನಾವು ಮಹಾಲಯ ಅಮಾವಾಸ್ಯೆಯ ಬಗ್ಗೆ ಕೆಲ ವಿಷಯಗಳನ್ನು ತಿಳಿದಿರಬೇಕು.

ಮಹಾಲಯದ ಸಮಯದಲ್ಲಿ ಯಾರಿಗೆ ತಮ್ಮ ಪಿತೃಗಳ ಶ್ರಾದ್ಧ ಆಚರಿಸಲು ಸಾಧ್ಯವಾಗಲಿಲ್ಲವೋ, ಅಥವಾ ಯಾವಾಗ ಆಚರಿಸಬೇಕು ಎಂದು ತಿಳಿದಿರುವುದಿಲ್ಲವೋ, ಅಂಥವರು ಮಹಾಲಯ ಸಮಯದಲ್ಲಿ ಶ್ರಾದ್ಧ ಕಾರ್ಯ ಮಾಡಬಹುದು.

ಮಹಾಲಯದಲ್ಲಿ ಶ್ರಾದ್ಧ ಕಾರ್ಯ ಮಾಡುವವರು, ಆ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ, ಪೇಟೆ ತಿಂಡಿ ಸೇವನೆ ಮಾಡಬಾರದು. ಮದ್ಯಪಾನ ಮಾಡಬಾರದು. ಈ ದಿನ ಬ್ರಾಹ್ಮಣರಿಗೆ ದಕ್ಷಿಣೆ, ವಸ್ತ್ರ ನೀಡಿ, ಭೋಜನ ನೀಡಬೇಕು. ಅಲ್ಲದೇ ಅನ್ನದಾನ ಮಾಡಬೇಕು. ಕಾಗೆಗೆ, ಹಸುವಿದೆ ಅನ್ನ ನೀಡಬೇಕು. ಹಸು, ಕಾಗೆ ಅನ್ನ ತಿಂದರೆ, ಬ್ರಾಹ್ಮಣರು ಆಶೀರ್ವದಿಸಿದರೆ, ನಿಮ್ಮ ಕಾರ್ಯದಿಂದ ಪಿತೃಗಳು ಸಂತೃಪ್ತರಾಗಿದ್ದಾರೆಂದರ್ಥ.

ಇನ್ನು ಹೀಗೆ ಮಾಡುವುದರಿಂದ ನೀವು ಶ್ರಾದ್ಧದ ದಿನಾಂಕದಂದೇ, ತಿಥಿಯಂದೇ ಶ್ರಾದ್ಧ ಮಾಡದೇ, ಮಹಾಲಯದಲ್ಲಿ ಶ್ರಾದ್ಧ ಮಾಡಿದರೂ ಅದು ಪಿತೃಗಳಿಗೆ ತಲುಪುತ್ತದೆ.

About The Author