ಜಗಳೂರು: ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬಾಲಕಿಯರ ತ್ರೋಬಾಲ್ ಪಂದ್ಯದಲ್ಲಿ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಒಟ್ಟು 62 ಮಕ್ಕಳಿರುವ ಈ ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರು ಮಾತ್ರ ಇದ್ದರೆ. ಈ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಶಿಕ್ಷಕರ ಮಾರ್ಗದರ್ಶನ ಮಕ್ಕಳ ಪರಿಶ್ರಮದಿಂದ 2023-24 ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ನಂತರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಾಥಮಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಬಾಲಕಿಯರ ತ್ರೋಬಾಲ್ ಕೊನೆಯ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿ ಹರಿಹರ vs ಜಗಳೂರು ರಣರೋಚಕ ಪಂದ್ಯದಲ್ಲಿ ಜಗಳೂರು ತಾಲ್ಲೂಕಿನ ಸ.ಹಿ.ಪ್ರಾ.ಶಾಲೆಯ ಬಾಲಕಿಯರಾದ ಪೂರ್ವಿಕ, ಪೂಜಾ, ಹೇಮಲತಾ, ವಂಶಿಕ, ಲಕ್ಷ್ಮಿ, ಶಮಿತಾ, ಚಂದನ, ಹರ್ಷಿತಾ ಫಾತಿಮಾ, ಶೋಭಾ, ಲಿಖಿತ, ಪ್ರಿಯಾ, ಇವರುಗಳು ಪ್ರಥಮ ಸ್ಥಾನವನ್ನು ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಗೋವಿಂದಪ್ಪ, ಸಹ ಶಿಕ್ಷಕರಾದ ರಾಜು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೆನ್ನಪ್ಪ, ಹಾಗೂ ಗ್ರಾಮಸ್ಥರಾದ ಕೊಟ್ರೇಶ್, ಲಕ್ಷ್ಮಣ, ರವಿ, ಹಾಗೂ ಸಮಸ್ತ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಲಾಯಿತು.
Vijayanagara: ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಭಾಗಿಯಾದ ಜಗಳೂರು ಕ್ಷೇತ್ರದ ಶಾಸಕ..!
Karnataka Lokayukta: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಪುರಸಭೆ ಅಧಿಕಾರಿ..!