Sports News: ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೇಟಿಗ ಡೇವಿಡ್ ವಾರ್ನರ್ ಅರೆಸ್ಟ್ ಆಗಿದ್ದಾರೆ.
ಸಿಡ್ನಿಯ ಮಲಬಾರ್ ರೋಡ್‌ನಲ್ಲಿ ಮರೂಬ್ರಾದಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡುವ ವೇಳೆ ಕ್ರಿಕೇಟಿಗ ಡೇವಿಡ್ ವಾರ್ನರ್ ಸಿಕ್ಕಿಬಿದ್ದಿದ್ದು, ಅವರನ್ನು ಸಿಡ್ನಿ ಪೋಲೀಸರು ಬಂಧಿಸಿದ್ದಾರೆ.
ಪೋಲೀಸರು ಚೆಕ್ ಮಾಡುತ್ತಿದ್ದುದನ್ನು ಕಂಡು ವಾರ್ನರ್ ದೂರದಲ್ಲೇ ಕಾರ್ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಪೋಲೀಸರು ಹತ್ತಿರ ಹೋಗಿ, ವಾರ್ನರ್ ಅವರನ್ನು ಪರೀಕ್ಷಿಸಿದ್ದಾರೆ. ಆಗ ವಾರ್ನರ್ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಕಾಮನ್. ಆದರೆ ಅದಕ್ಕೆ ಮಿತಿ ಇರುತ್ತದೆ. ಆ ಮಿತಿ ಮೀರಿದರೆ ಮಾತ್ರ ಅಲ್ಲಿ ಬಂಧಿಸಲಾಗುತ್ತದೆ. ವಾರ್ನರ್ ಮಿತಿಗಿಂತ ಸ್ವಲ್ಪ ಹೆಚ್ಚೇ ಮದ್ಯಪಾನ ಮಾಡಿದ್ದರೆನ್ನಲಾಗಿದೆ. ಈ ಕಾರಣಕ್ಕೆ ವಾರ್ನರ್ ಅವರನ್ನು ಬಂಧಿಸಲಾಗಿದೆ. ಬಳಿಕ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಆದರೆ ವಾರ್ನರ್ ಈ ಕೇಸ್‌ನಲ್ಲಿ ಮೇ7ರಂದು ಕೋರ್ಟ್‌ಗೆ ಹಾಜರಾಗಬೇಕಿದೆ.
ಕೆಲ ಮೂಲಗಳ ಪ್ರಕಾರ, ವಾರ್ನರ್‌ಗೆ ಪಾಕಿಸ್ತಾನ್ ಕ್ರಿಕೇಟ್ ಲೀಗ್ ಬಗ್ಗೆ ಅಸಮಾಧಾನವಿದೆ. ಹಾಗಾಗಿ ತಂಡದಿಂದ ಆಚೆ ಬರಲು ವಾರ್ನರ್ ಪ್ರಯತ್ನಿಸಿದ್ದಾರೆ ಎಂಬ ಅನುಮಾನವೂ ಇದೆ. ಏಕೆಂದರೆ, ಲೀಗ್‌ನಲ್ಲಿ ಆಡುವಾಗ ಯಾರೂ ಸ್ವದೇಶಕ್ಕೆ ಹೋಗುವಂತಿಲ್ಲ. ಆದರೆ ವಾರ್ನರ್ ಸ್ವದೇಶಕ್ಕೆ ಹೋಗುವಾಗಲೇ, ಅವರು ತಂಡದಿಂದ ಆಚೆ ಹೋಗಲು ಪ್ರಯತ್ನಿಸಿದ್ದಾರೆಂಬ ಅನುಮಾನವಿತ್ತು. ಇದೀಗ ಬೇಕಂತಲೇ ವಾರ್ನರ್ ಈ ರೀತಿ ಮಾಡಿ, ಆಟದಿಂದ ಆಚೆ ಬಂದಿದ್ದಾರೆನ್ನಲಾಗಿದೆ.




