Hubli News: ಹುಬ್ಬಳ್ಳಿ: ನನ್ನ ಮಗಳನ್ನು ಕಡಿದು ಫ್ರೀಜ್ ನಲ್ಲಿ ಇಡ್ತಾರೆ.. ಅವಳು ನೆಮ್ಮದಿಯಿಂದ ಜೀವನ ಮಾಡಿಲ್ಲ. ಪ್ಲೀಸ್ ನನ್ನ ಮಗಳನ್ನು ನನಗೆ ಕೊಡಿಸಿ ಎಂದು ಹೆತ್ತ ತಾಯಿ ಅಂಗಲಾಚುತ್ತಿದ್ದಾಳೆ. ಇದೆಲ್ಲದರ ನಡುವೆಯೇ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ವಿರುದ್ಧ ಈಗ ಆರೋಪಗಳ ಸರಮಾಲೆಯೇ ಸುತ್ತಿಕೊಂಡಿದೆ.
ಮುಕಳೆಪ್ಪ ಯೂಟ್ಯೂಬ್ ಚಾನಲ್ ಮೂಲಕ ಜನರನ್ನು ರಂಜಿಸುತ್ತಿದ್ದ ಖ್ವಾಜಾ ಬಂದೇನವಾಜ್ ಎಂಬಾತ ಗಾಯಿತ್ರಿ ಜಾಲಿಹಾಳ ಎಂಬುವವರನ್ನು ಮೋಸ ಮಾಡಿ ಮತಾಂತರ ಮಾಡಿ ಮದುವೆಯಾಗಿದ್ದಾನೆ ಎಂದು ಹೆತ್ತವರು ಆರೋಪ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಆರೋಪ ಮುನ್ನೆಲೆಗೆ ಬಂದಿದೆ. ಹೌದು.. ಸುಳ್ಳು ದಾಖಲೆಯನ್ನು ಕೊಟ್ಟು ಸಬ್ ರಿಜಿಸ್ಟರ್ ನಲ್ಲಿ ಮದುವೆ ಮಾಡಿಕೊಂಡಿದ್ದಾನೆ.
ಅಲ್ಲದೇ 28-04-2025ರಂದು ಮುಂಡಗೋಡದ ಹಾಲ್ ನಲ್ಲಿ ಮದುವೆಯಾಗಿರುವುದಾಗಿ ದಾಖಲೆ ನೀಡಿದ್ದಾನೆ. ಆದರೆ ಎಲ್ಲ ದಾಖಲೆಗಳು ಸಂಪೂರ್ಣ ಸುಳ್ಳಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರುವುದಾಗಿ ಶ್ರೀರಾಮಸೇನಾ ಮುಖಂಡರು ನಿರ್ಧಾರ ಮಾಡಿದ್ದಾರೆ.
ಇನ್ನೂ ಮನೆ ಬಾಡಿಗೆ ಹೆಸರಲ್ಲಿ ಸುಳ್ಳು ಹೇಳಿ ಅನಧಿಕೃತ ದಾಖಲೆಗಳನ್ನು ನೀಡಿದ್ದಾನೆ. ಈ ನಿಟ್ಟಿನಲ್ಲಿ ಖ್ವಾಜಾ ವಿರುದ್ಧ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಗಾಯಿತ್ರಿ ತಾಯಿ ಶಿವಕ್ಕ ಜಾಲಿಹಾಳ ಗಂಭೀರವಾಗಿ ಆರೋಪಿಸಿದ್ದು, ನನ್ನ ಮಗಳನ್ನು ಕಡೆದು ಹಾಕ್ತಾರೆ ಎಂದು ಕಣ್ಣೀರು ಹಾಕಿದ್ದಾರೆ.