ಶಾರ್ಜಾ: ಏಷ್ಯಾಕಪ್ ಟೂರ್ನಿಯ ಸೂಪರ್ 4ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ಥಾನ ತಂಡ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175/6 ರನ್ ಗಳಿಸಿತು. ಶ್ರೀಲಂಕಾ ತಂಡ 19.1 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179ರನ್ ಗಳಿಸಿತು.
ಆಫ್ಘಾನ್ ಪರ ರೆಹಮಾನ್ ಹುಲ್ಲಾ ಗುರ್ಬಾಜ್ 84 ರನ್ 4 ಬೌಂಡರಿ 6 ಸಿಕ್ಸರ್ ಸಿಡಿಸಿದರು. ರೆಹಮಾನ್ ಹುಲ್ಲಾ 22 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಇಬ್ರಾಹಿಂ ಜರ್ದಾನ್ 40ರನ್,ನಜಿಬ್ ಹುಲ್ಲಾ ಜರ್ದಾನ್ 17, ಮೊಹ್ಮದ್ ನಬಿ 1, ರಶೀದ್ ಖಾನ್ 9, ಕರೀಂ ಜನತ್ 12 ರನ್ ಗಳಿಸಿದರು. ಲಂಕಾ ಪರ ದಿಲ್ಶಾನ್ ಮಧುಶನಕಾ 36ಕ್ಕೆ 2, ಮಹೇಶ್ ತೀಕ್ಷ್ಣ ಮತ್ತು ಆಶಿತಾ ಫೆರ್ನಾಡೊ ತಲಾ 1 ವಿಕೆಟ್ ಪಡೆದರು.
ಪಾಥುಮ್ ನಿಸ್ಸಾಂಕಾ 35, ಕುಶಾಲ್ ಮೆಂಡೀಸ್ 36, ಚರತ್ ಅಸಲಂಕಾ 8, ದನುಶ್ಕ ಗುಣತಿಲಕ 33, ದಾಸಾನು ಶನಕಾ 10, ಭಾನುಕಾ ರಾಜಪಕ್ಸ 31, ವನಿಂದು ಹಸರಂಗ ಅಜೇಯ 16 ರನ್ ಗಳಿಸಿದರು.ಆಫ್ಘಾನ್ ಪರ ಮುಜೀಬ್ ಉರ್ ರೆಹಮಾನ್ ಮತ್ತು ನವೀನ್ ಉಲ್ ಹಕ್ ತಲಾ 2 ವಿಕೆಟ್ ಪಡೆದರು. ರಶಿದ್ ಖಾನ್ ಮತ್ತು ಮೊಹ್ಮದ್ ನಬಿ ತಲಾ 1 ವಿಕೆಟ್ ಪಡೆದರು.