ಗಾಲೆ: ಧನಂಜಯ ಡಿಸಿಲ್ವಾ ಅವರ ಆಕರ್ಷಕ ಶತಕದ ನೆರೆವಿನಿಂದ ಆತಿಥೇಯ ಶ್ರೀಲಂಕಾ ತಂಡ ನಾಲ್ಕನೆ ದಿನ ಮೇಲುಗೈ ಸಾಧಿಸಿತು.
ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ಥಾನ ನಡುವಿನ ಎರಡನೆ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.
ನಾಲ್ಕನೆ ದಿನದಾಟದ ಪಂದ್ಯದಲ್ಲಿ ಶ್ರೀಲಂಕಾ ತಂಡ ಎರಡನೆ ಇನ್ನಿಂಗ್ಸ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಹೊಡೆದು ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ ಅಂತ್ಯದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ಥಾನ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ.
ಮೂರನೆ ದಿನದಾಟದ ಪಂದ್ಯದಲ್ಲಿ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.
ಬ್ಯಾಟಿಂಗ್ ಮುಂದುವರೆಸಿದ ಧನಂಜಯ ಡಿಸಿಲ್ವಾ ಮತ್ತು ದೀಮುತ್ ಕರುಣೆರತ್ನೆ (61 ರನ್)ಭರ್ಜರಿ ಬ್ಯಾಟಿಂಗ್ ಮಾಡಿದರು. ಧನಂಜಯ ಡಿಸಿಲ್ವಾ ( 16 ಬೌಂಡರಿ, 109 ರನ್0 ಶತಕ ಸಿಡಿಸಿ ಅಬ್ಬರಿಸಿದರು. ರಮೇಶ್ ಮೆಂಡೀಸ್ ಅಜೇಯ 45 ರನ್ ಗಳಿಸದರು. ಪಾಕ್ ಪರ ನಸೀಮ್ ಶಾ ಹಾಗೂ ಮೊಹ್ಮದ್ ನವಾಜ್ ತಲಾ 2 ವಿಕೆಟ್ ಪಡೆದರು.
508 ರನ್ ಗುರಿ ಬೆನ್ನತ್ತಿದ ಪಾಕಿಸ್ಥಾನ ತಂಡ ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಾಫಿಕ್ 16, ಇಮಾಮ್-ಉಲ್-ಹಕ್ ಅಜೇಯ 46, ಬಾಬಾರ ಅಜಾಮ್ ಅಜೇಯ26 ರನ್ ಗಳಿಸಿದರು.