Wednesday, June 7, 2023

Latest Posts

ಸಿದ್ದರಾಮಯ್ಯ ಸೋಲಿನ ರಹಸ್ಯ

- Advertisement -

ಕರ್ನಾಟಕ ಟಿವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬಾದಾಮಿ ಯಲ್ಲಿ ಅಲ್ಪಮತಗಳಿಂದ ರಾಮುಲು ವಿರುದ್ಧ ಗೆದ್ದು ಮಾನ ಉಳಿಸಿಕೊಂಡಿದ್ರು..

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ಸಿದ್ದರಾಮಯ್ಯ ಸೋಲಿಗೆ ಕಾರಣ ಅನ್ನೋದು ಓಪನ್ ಸೀಕ್ರೆಟ್. ಇದೀಗ ಜಿ.ಟಿ.ದೇವೆಗೌಡ ಚಾಮುಂಡೇಶ್ವರಿಯಲ್ಲಿ ಗೆಲ್ಲೋದಕ್ಕೆ ನಾನೆ ಮುಖ್ಯ ಕಾರಣ ಅಂತ ಜಿಟಿಡಿ ಚಾಮುಂಡೇಶ್ವರಿ ಗೆಲುವಿನ ಗುಟ್ಟು ಶ್ರೀನಿವಾಸ್ ಪ್ರಸಾದ್ ಬಿಚ್ಚಿಟ್ಟಿದ್ದಾರೆ.

ಸಿದ್ದರಾಮಯ್ಯ ಸೋಲಿಗೆ ನಾನು ಕಾರಣ

ಅಂದು ನಾನು ಈ ಮಾತನ್ನು ಹೇಳಿದ್ರೆ ಮಾಧ್ಯಮದವರು ನಗುತ್ತಿದ್ದರು. ಈಗ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.
ಜಿ.ಟಿ.ದೇವೆಗೌಡರ ಪರ ಕೆಲಸ ಮಾಡಿದವರೆ ನಾವು. ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಲ್ಲಿ ಸೋತ. ಮೈಸೂರಿನಲ್ಲಿ ಅವನ ಪಟಾಲಮು ಹೇಳ ಹೆಸರಿಲ್ಲದಂತಾಯಿತು. ಅಲ್ಪ ಮತದಲ್ಲಿ ಬಾದಮಿಯಲ್ಲಿ ಗೆದ್ದು ಮುಖ ಉಳಿಸಿಕೊಂಡ ಎಂದು ಮೈಸೂರಿನಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ರು

- Advertisement -

Latest Posts

Don't Miss