ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನು ಮಗಳು ಜೀವಾ ಕೂಡ ಅಪ್ಪನನ್ನೇ ಮೀರಿಸುವಂತೆ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾಳೆ. ಸದ್ಯ ಹನ್ನೆರಡನೇ ಐಪಿಎಲ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯುದ್ದಕ್ಕೂ ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಜೀವಾ ಚಿಯರ್ ಮಾಡೋದ್ರ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಈ ನಡುವೆ ವಿಷಯ ಏನಪ್ಪ ಅಂದ್ರೆ..ಜೀವಾಳನ್ನ ಕಿಡ್ನಾಪ್ ಮಾಡುವ ಬೆದರಿಕೆ ಬಂದಿದೆ..ಅಷ್ಟಕ್ಕೂ ಜೀವಾಳನ್ನ ಕಿಡ್ನಾಪ್ ಮಾಡೋ ಬೆದರಿಕೆ ಹಾಕಿರೋದು ಯಾರೂ ಅಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ, ಪ್ರೀತಿ ಜಿಂಟಾ.
ಹೌದು ,ಧೋನಿ ಹುಷಾರಾಗಿರು ನಿನ್ನ ಮಗಳನ್ನ ಕಿಡ್ನ್ಯಾಪ್ ಮಾಡ್ತೀನಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ಎಚ್ಚರಿಕೆ ಕೂಡ ನೀಡಿದ್ದಾರೆ. ಅರೇ..ಪ್ರೀತಿಗೆ ಯಾಕಪ್ಪಾ ಈ ಕೆಟ್ಟ ಬುದ್ಧಿ ಬಂತು ಅನ್ಕೋಬೇಡಿ.. ಪ್ರೀತಿ ಜಿಂಟಾ ಹೀಗೆ ಹೇಳಿದ್ದು ಜೀವಾ ಮೇಲಿರೋ ಪ್ರೀತಿಯಿಂದ. ಧೋನಿಗಿಂತ ಹೆಚ್ಚಾಗಿ ಜೀವಾನ ಕಂಡ್ರೆ ಆಕೆಗೆ ಇಷ್ಟ ಇರೋದ್ರಿಂದ ಈ ಫನ್ನಿ ಪೋಸ್ಟ್ ಹಾಕಿಕೊಂಡಿದ್ದಾರಷ್ಟೇ. ಇತ್ತೀಚಿಗಷ್ಟೇ ಮೋಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮ್ಯಾಚ್ ನಂತರ ಪ್ರೀತಿ ಜಿಂಟಾ, ಧೋನಿ ಜೊತೆ ಫೋಟೋ ತೆಗೆಸಿಕೊಂಡಿದ್ರು. ಸದ್ಯ ಈ ಫೋಟೋವನ್ನೇ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಪ್ರೀತಿ, “ಕ್ಯಾಪ್ಟನ್ ಕೂಲ್ ಧೋನಿ, ನಾನೂ ಸೇರಿದಂತೆ ಬಹಳ ಅಭಿಮಾನಿಗಳನ್ನ ಹೊಂದಿದ್ದಾರೆ. ಆದ್ರೆ ಈಗ, ಧೋನಿ ಮೇಲಿನ ನನ್ನ ನಿಷ್ಠೆ ಧೋನಿಯ ಮುದ್ದಿನ ಮಗಳು ಜೀವಾ ಮೇಲೆ ಶಿಫ್ಟ್ ಆಗ್ತಿದೆ. ನಿಮ್ಮ ಮಗಳ ಬಗ್ಗೆ ಎಚ್ಚರವಾಗಿರಿ. ಇಲ್ಲ ಅಂದ್ರೆ ನಾನು ನಿಮ್ಮ ಮಗಳನ್ನ ಕಿಡ್ನ್ಯಾಪ್ ಮಾಡಬಹುದು ಅಂತ ಬರೆದುಕೊಂಡಿದ್ದಾರೆ. ಹಾಗೇ ಈ ಫೋಟೋಗೊಂದು ಕ್ಯಾಪ್ಷನ್ ನೀಡಿ ಅಂತಲೂ ಅಭಿಮಾನಿಗಳಲ್ಲಿ ಪ್ರೀತಿ ಜಿಂಟಾ ಕೇಳಿಕೊಂಡಿದ್ದಾರೆ.