Wednesday, July 2, 2025

Latest Posts

‘ಚಿನ್ನ’ದ ಮೀನಿಗೆ ಶುಭಕೋರಿದ ಸಿಎಂ

- Advertisement -

ಬೆಂಗಳೂರು: ಇತ್ತೀಚೆಗೆ ಬ್ರೆಜಿಲ್ ನಲ್ಲಿ ನಡೆದ ವಿಶ್ವ ಮಟ್ಟದ ಈಜು ಚಾಂಪಿಯನ್ಶಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ರಾಜ್ಯದ ಈಜುಪಟು ನಿರಂಜನ್ ಮುಕುಂದನ್ ಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಸಾವೋಪೋಲೋದಲ್ಲಿ ನಡೆದ ವಿಶ್ವ ಈಜು ಸರಣಿಯ 200 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ನಿರಂಜನ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದಿವ್ಯಾಂಗರಾಗಿ ಜನಿಸಿದ್ರೂ ಎದೆಗುಂದದೆ ಸಾಧನೆ ಮಾಡಿದ್ದಾರೆ.ಹಲವು ಶಸ್ತ್ರಚಿಕಿತ್ಸೆಗೆ ಒಳಗಾದ್ರೂ ಎದೆಗುಂದದೆ ಈತ ಮಾಡಿದ ಸಾಧನೆ ಎಲ್ಲರಿಗೂ ಆದರ್ಶವಾಗಿರಲಿ ಅಂತ ಟ್ವೀಟ್ ಮಾಡೋ ಮೂಲಕ ಸಿಎಂ ಕುಮಾರಸ್ವಾಮಿ ಶುಭಾಶಯ ತಿಳಿಸಿದ್ದಾರೆ.

- Advertisement -

Latest Posts

Don't Miss