Movie News: ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ನಟಿಯೂ ಆಗಿರುವಂತ ಜ್ಯಾತಿಕಾ ಇಂದು ಉಡುಪಿಯ ಬೈಂದೂರಿನ ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು, ಚಂಡಿಕಾ ಯಾಗದಲ್ಲಿ ಭಾಗವಹಿಸಿದರು.
ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಕಂಗುವ ಸಿನಿಮಾ ಅಷ್ಟೇನು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿಲ್ಲ. ಇದು ಸೇರಿ ಹಲವು ಕಾರಣಗಳಿಂದ ಈ ಸ್ಟಾರ್ ದಂಪತಿ ಕೊಲ್ಲೂರು ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊಲ್ಲೂರಿನಲ್ಲಿ ಪ್ರತಿದಿನ ಚಂಡಿಕಾಯಾಗ ನಡೆಸಲಾಗುತ್ತದೆ. ಕೆಲವು ಬಾರಿ ಭಕ್ತರು ಈ ಹೋಮ ನಡೆಸಿದರೆ, ಇನ್ನುಳಿದ ದಿನಗಳಲ್ಲಿ ದೇವಸ್ಥಾನದಿಂದಲೇ ಚಂಡಿಕಾ ಯಾಗ ನಡೆಯುತ್ತದೆ. ಚಂಡಿಕಾಯಾಗ ಮಾಡಿಸಿ, ದೇವಿಗೆ ಸೇವೆ ಮಾಡುವುದರಿಂದ ಅವರ ಜೀವನದಲ್ಲಿದ್ದ ಕಷ್ಟವೆಲ್ಲ ಕಳೆದುಹೋಗುತ್ತದೆ ಅನ್ನೋ ನಂಬಿಕೆ ಇದೆ.
ದರ್ಶನ್ ಜೈಲಿನಲ್ಲಿದ್ದಾಗ, ಪತ್ನಿ ವಿಜಯಲಕ್ಷ್ಮೀ ಕೂಡ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದರು. ಕೊಲ್ಲೂರಿನಲ್ಲಿ ಚಂಡಿಕಾಯಾಗ ಮಾಡಿಸಿ, ಅದರ ಪ್ರಸಾದವನ್ನು ದರ್ಶನ್‌ಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಅಲ್ಲದೇ, ಲಲಿತಾ ಸಹಸ್ರನಾಮ ಓದಲು ಹೇಳಿದ್ದರು.