Sunday, September 8, 2024

Latest Posts

ಫೆಬ್ರುವರಿ ೧೭ ಕ್ಕೆ ರಾಜ್ಯ ಬಜೆಟ್ ಮಂಡನೆ.

- Advertisement -

financial news

ಅAತೂ ಇಂತೂ ಅಂತಿಮ ರಾಜ್ಯ ಬಜೆಟ್ ಮಂಡನೆ ಘೋಷಣೆಯಾಗಿದ್ದೂ ಮುಂದಿನ ತಿಂಗಳು ಫೆಬ್ರುವರಿ ೧೭ ಕ್ಕೆ ಬಜೆಟ್ ಮಂಡನೆ ಮಾಡಲಾಗುವುದು ಎಂದು ರಾಜ್ಯ ಕಾನೂನು ಸಚಿವ ಜೆಸಿ ಮಾದುಸ್ವಾಮಿ ಬಹಿರಂಗ ಪಡಿಸಿದ್ದಾರೆ.ಇನ್ನಾ ಫೆಬ್ರುಬರಿ ೧೦ ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದೂ ಎಷಗ್ಟು ದಿನಗಳ ಕಾಲ ನಡೆಯಲಿದೆ ಎಂಬ ಅಧಿಕೃತ ಮಾಹಿತಿ ಇಲ್ಲಕಾರ್ಯಕಲಾಪಗಳ ಸಲಹಾ ಸಮಿತಿಯಲ್ಲಿ ನಿರ್ಧಾರ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ ಸಂಪುಟ ಇತರ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ಯಾವ ಕಾಮಗಾರಿಗೆ ಬಜೆಟ್
ಶಿವಮೊಗ್ಗ ಜಿಲ್ಲೆಯ ಹೊಸನಗರ ಬೆಂಗಳೂರು ನಗರದ ಕಲಾಸಿಪಾಳ್ಯದಲ್ಲಿ ನೂತನ ಬಸ್ ನಿಲ್ದಾಣಕ್ಕೆ 63 ಕೋಟಿ ಅನುಮಾನಕ್ಕೆ ಅನುಮೋದನೆ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕ್ಷತ್ರಿಯ ಮರಾಠ ಯುವ ವೇದಿಕೆಗೆ ಶಾಲಾ ಕಟ್ಟಡಕ್ಕಾಗಿ 2 ಎಕರೆ ಜಮೀನು ನೀಡಲು ಅನುಮೋದನೆ.ಕಿತ್ತೂರು ತಾಲ್ಲೂಕಿನ 50 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ನಿರ್ಧಾರ.ತರೀಕೆರೆ ತಾಲ್ಲೂಕು ಕಲ್ಲತ್ತಿ ಡ್ಯಾಮ್ ಗೆ 20 ಕೋಟಿ ಅನುದಾನ ಮೀಸಲು.ಪಿಡಬ್ಲ್ಯೂಡಿ ವತಿಯಿಂದ 100 ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣಕ್ಕೆ 200 ಕೋಟಿ ಅನುದಾನ ನೀಡಲು ಅನುಮೋದನೆ.ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರು ಹೆಸರಲ್ಲಿ ಹಿಂದುಳಿದ ವರ್ಗಗಳ ಶಾಲೆಗಳ ನಿರ್ಮಾಣಕ್ಕೆ 72 ಕೋಟಿ ಅನುದಾನಕ್ಕೆ ಸಂಪುಟ ಅನುಮೋದನೆ.ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆಯಲ್ಲಿ ಸ್ಪೂರ್ತಿ ಯೋಜನೆಗೆ 12.5 ಕೋಟಿ ಮೊತ್ತಕ್ಕೆ ಅನುಮೋದನೆ.

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2

ನಿಮ್ಮ ಅಂಗೈಯ ಬಣ್ಣವು ಭವಿಷ್ಯದ ಬಗ್ಗೆ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ..!

ಈ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡಬೇಡಿ..!

- Advertisement -

Latest Posts

Don't Miss