ಬೆಂಗಳೂರು: ರಾಜ್ಯದ ಸಚಿವರು, ಸಂಸದರು, ವಿವಿಧ ಅಧಿಕಾರಿಗಳಿಗೆ ಸರ್ಕಾರ ಹೊಸ ವಾಹನ ಖರೀದಿಗಾಗಿ ನಿಗದಿ ಪಡಿಸಲಾಗಿದ್ದಂತ ದರವನ್ನು, ಹೆಚ್ಚಳ ಮಾಡಿ ಭರ್ಜರಿ ಗಿಫ್ಟ್ ನೀಡಿದೆ.
ಈ ಬಗ್ಗೆ ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ್ದು, ಸಚಿವರು, ಸಂಸದರಿಗೆ ಹೊಸ ವಾಹನ ಖರೀದಿಸಲು ಮಿತಿಗೊಳಿಸಿದ್ದಂತ ಆರ್ಥಿಕ ಮಿತಿಯನ್ನು 23 ಲಕ್ಷದಿಂದ 26 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ( ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿದ್ದಲ್ಲಿ ) ಇವರುಗಳಿಗೆ ರೂ.20 ಲಕ್ಷ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳಿಗೆ ರೂ.18 ಲಕ್ಷ ಮತ್ತು ಇತರೆ ಜಿಲ್ಲಾ ಹಂತದ ಅಧಿಕಾರಿಗಳು, ಉಪವಿಭಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕರುಗಳಿಗೆ ರೂ.12.50 ಲಕ್ಷಗ ಹಾಗೂ ತಹಶೀಲ್ದಾರರುಗಳು ಮತ್ತು ಇತರೆ ಅರ್ಹ ತಾಲೂಕು ಮಟ್ಟದ ಅಧಿಕಾರಿಗಳಿಗೆ ರೂ.9 ಲಕ್ಷಗಳ ಮಿತಿಯನ್ನು ನಿಗದಿ ಪಡಿಸಲಾಗಿದೆ.




