ಕೆರೆಗಳ ಸಂರಕ್ಷಿತ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತದೆ. ಈ ಕೆರೆಗಳ ಬಫರ್ ಝೋನ್ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ. ಪರಿಸರ ಸಮತೋಲನ ಕಾಪಾಡಲು 30 ಮೀಟರ್ ಬದಲು 300 ಮೀಟರ್‌ಗೆ ಬಫರ್ ಝೋನ್ ಹೆಚ್ಚಿಸುವ ಅಗತ್ಯವಿದೆ.
ಕೆರೆಗಳ ಬಫರ್ ಝೋನ್ ವ್ಯಾಪ್ತಿ ಕಡಿಮೆ ಮಾಡಲು ಕಾನೂನಿಗೆ ತಿದ್ದುಪಡಿ ತರಲು, ಸಿಎಂ ಸಿದ್ದರಾಮಯ್ಯ ಸರ್ಕಾರ ಹೊರಟಿತ್ತು. ಈ ಸಂಬಂಧ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಗೆ ತಿದ್ದುಪಡಿಯನ್ನು ತರಲಾಗಿತ್ತು. ಆದರೆ, ರಾಜ್ಯಪಾಲರು ಈ ತಿದ್ದುಪಡಿ ವಿಧೇಯಕವನ್ನು ತಿರಸ್ಕರಿಸಿದ್ದಾರೆ. ಪರಿಸರ ಸಮತೋಲನ ಕಾಪಾಡಲು ಬಫರ್ ಝೋನ್ ವಿಸ್ತರಿಸುವ ಬದಲು, ಕಡಿಮೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವಿಧೇಯಕ ಮರುಪರಿಶೀಲನೆಗೆ ಸೂಚಿಸಿದ್ದಾರೆ.
ಜಲಮೂಲಗಳ ಬಫರ್ ಝೋನ್ ಅನ್ನು 30 ಮೀಟರ್‌ಗೆ ಕಡಿತಗೊಳಿಸಲು ಹೊರಟ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲರು ಗರಂ ಆಗಿದ್ದಾರೆ. ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ಸಲ್ಲಿಸಿರುವ ಆಕ್ಷೇಪಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಕಾಯಿದೆ ತಿದ್ದುಪಡಿ ಆಕ್ಷೇಪಿಸಿ ತಮಗೆ ಸಲ್ಲಿಕೆಯಾಗಿರುವ ಮನವಿಗಳಲ್ಲಿ, ರಾಜ್ಯ ಸರ್ಕಾರದ ತೀರ್ಮಾನ ಕೇಂದ್ರದ ಕಾನೂನು ಮತ್ತು ಮಾರ್ಗಸೂಚಿಗೆ ವಿರುದ್ಧವಾಗಿವೆ. ಆಕ್ಷೇಪಗಳ ಪಟ್ಟಿ ಸಲ್ಲಿಸಿ, ಸರ್ಕಾರದಿಂದ ಸ್ಪಷ್ಟನೆ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೇ, ಅನುಮೋದನೆಗೊಂಡ ವಿಧೇಯಕಕ್ಕೆ, ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಹಿಂದಕ್ಕೆ ಕಳುಹಿಸಿದ್ದಾರೆ. ತಜ್ಞರ ಅಭಿಪ್ರಾಯದಂತೆ ಪ್ರಸ್ತುತ 30 ಮೀಟರ್ ಬಫರ್ ವಲಯ ಕೂಡ ಸಾಲುವುದಿಲ್ಲ. ಪರಿಸರ ಸಮತೋಲನ ಕಾಪಾಡಲು 300 ಮೀಟರ್‌ನಷ್ಟು ಬಫರ್ ವಲಯ ನಿಗದಿಯ ಅವಶ್ಯಕತೆಯಿದೆ. ಹೀಗಾಗಿ ಬಫರ್ ವಲಯವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬೇಕು ಎಂದು ತಿಳಿಸಿದೆ.