ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ ಅರೆ-ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು https://karunadu.karnataka.gov.in/hfw/pages/hfws_sections_drc.aspx ಈ ಲಿಂಕ್ ಗೆ ಭೇಟಿ ನೀಡಿ ವಿವಿಧ 558 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಂದಹಾಗೇ 150 ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟ್ನಾಲಜಿಸ್ಟ್, 400 ಫಾರ್ಮಸಿಸ್ಟ್ ಆಫೀಸರ್ ಹಾಗೂ 8 ಜೂನಿಯರ್ ಮೆಡಿಕಲ್ ರೇಡಿಯಾಲಾಜಿಕಲ್ ಟೆಕ್ನಾಲಜಿಸ್ಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 07-09-2022ರಿಂದ ಆರಂಭಗೊಂಡು ದಿನಾಂಕ 06-10-2022ರಂದು ಕೊನೆಗೊಳ್ಳಲಿದೆ. ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ದಿನಾಂಕ 07-10-2022 ಕೊನೆಯಾಗಿದೆ.

About The Author