ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೆ ತಲುಪಿರುವ ಭಾರತ ತಂಡ ಮೋಜು ಮಸ್ತಿಯಲ್ಲಿ ತೊಡಗಿ ವಿಶ್ರಾಂತಿ ಪಡೆಯುತ್ತಿದೆ.
ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರರ ವಿಡಿಯೋವೊಂದನ್ನು ಹಂಚಿಕೊಂಡಿದೆ.
ದುಬೈ ಸಮುದ್ರದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ವಿಭಿನ್ನವಾದ ಕ್ರೀಡೆಯನ್ನು ಆಡಿ ಸಂಭ್ರಮಿಸಿದರು. ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್, ಕೆ.ಎಲ್. ರಾಹುಲ್ ಸರ್ಫಿಂಗ್ ಮಾಡಿ ಕಾಲಕಳೆದರು.
ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆಟಗಾರರಿಗೆ ಮೋಜು ಮಸ್ತಿ ಮಾಡಲು ಸೂಚನೆ ಕೊಟ್ಟರು. ನಮಗೆ ತುಂಬ ಖುಷಿ ನೀಡಿದೆ. ಇದು ಒಂದು ತಂಡವಾಗಿ ರೂಪಗೊಳ್ಳಲು ಸಹಕಾರಿಯಾಗಲಿದೆ ಎಂದು ಸ್ಪಿನ್ನರ್ ಯಜ್ವಿಂದರ್ ಚಾಹಲ್ ಹೇಳಿದ್ದಾರೆ.
ಸೆ.4ರಂದು ರೋಹಿತ್ ಪಡೆ ಸೂಪರ್ 4 ಹಂತದಲ್ಲಿ ಪಾಕಿಸ್ಥಾನ ತಂಡವನ್ನು ಎದುರಿಸಲಿದೆ.ಸೆ.6ರಂದು ಅಫ್ಘಾನಿಸ್ಥಾನ ಮತ್ತು ಸೆ.8ರಂದು ಶ್ರೀಲಂಕಾ ತಂಡ ವಿರುದ್ಧ ಸೆಣಸಲಿದೆ.