Friday, October 18, 2024

Latest Posts

ಸರ್ಕಾರ ಕೊಟ್ಟ 423 ಕೋಟಿ ಏನಾಯ್ತು..? – ಡಾ ರವೀಂದ್ರ – ಕರ್ನಾಟಕ ಟಿವಿ

- Advertisement -

ಮಂಡ್ಯ : ಮೈಷುಗರ್ ಕಾರ್ಖಾನೆ ಆಸ್ತಿ ಸರ್ಕಾರಿ ವ್ಯವಸ್ಥೆಯಲ್ಲಿ ಉಳಿಯುತ್ತಿರುವುದು ಸಂತಸದ ವಿಷಯ, ಆದರೆ, ಈ ವರ್ಷವೇ ಕಬ್ಬು ಅರಿಯಬೇಕಾಗಿರುವುದು ಪ್ರಸ್ತುತ ಸರ್ಕಾರ ಈ ವಿಷಯದಲ್ಲಿ ಕಂದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು ಕಾಂಗ್ರೆಸ್ ಮುಖಂಡ ಡಾ ರವೀಂದ್ರ ಹೇಳಿದ್ದಾರೆ. Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ. ಈ ಬಗ್ಗೆ, ನಾವು ಹಳ್ಳಿಗಳಿಗೆ ಸುತ್ತುವಾಗಲೂ ಹೇಳಿದ್ದೇವೆ. ರೈತರ ಹಿತ ಕಾಯುವ ಬದಲು, ಪ್ರತಿಷ್ಠೆಗೆ ಜೋತು ಬೀಳುವುದು ಸರಿಯಲ್ಲ. ಸದ್ಯಕ್ಕೆ ನಿಮ್ಮ ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಮಾದರಿ ಕಬ್ಬು ಅರೆಯುವಿಕೆ ಬೆಂಬಲ ನೀಡುತ್ತಿದ್ದೇವೆ ಹೊರತು, ಇಂದಿಗೂ, ಮುಂದೆಯೂ ಖಾಸಗೀಕರಣಕ್ಕೆ ನಮ್ಮ ವಿರೋಧ ಇದ್ದೇ ಇದೆ ಎಂದು ಡಾ ರವೀಂದ್ರ ಹೇಳಿದ್ರು.

ಜೆಡಿಎಸ್ ದ್ವಿಮುಖ ನೀತಿಗೆ ಡಾ. ರವೀಂದ್ರ ಆಕ್ರೋಶ

ಸರ್ಕಾರ ನಗರ ಕಾರ್ಖಾನೆ ಖಾಸಗೀಕರಣ ವಿಚಾರವನ್ನು ಕೈಬಿಟ್ಟಿದ್ದಕ್ಕೆ, ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಮತ್ತು ಕಾರ್ಖಾನೆ ಪ್ರಾರಂಭಿಸುವುದರ ಜೊತೆಗೆ, 423 ಕೋಟಿ ಹಣ ಎಲ್ಲಿ ಹೋಯಿತು ಎಂಬುದರ ಬಗ್ಗೆ ವ್ಯಾಪಕ ತನಿಖೆ ನಡೆದು, ತಾರ್ಕಿಕ ಅಂತ್ಯ ಪಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದೂ ಕೂಡ ಆಗ್ರಹಿಸುತ್ತೇವೆ, ಅಂದ ಹಾಗೆ, ಮೈಷುಗರ್ ಕಾರ್ಖಾನೆ ಯನ್ನು Operation and maintainance ವಿಧಾನದಲ್ಲೂ ಅರಿಯಲು ಬಿಡುವುದಿಲ್ಲ ಎನ್ನುವ ಮೇಲ್ನೋಟದ ಶಾಸಕ, ತಾವೇ ಮಂತ್ರಿ ಆಗಿದ್ದಾಗ, ಪಿ.ಎಸ್.ಎಸ್.ಕೆ. ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಲು ತೀರ್ಮಾನ ಕೈಗೊಳ್ಳುವ ಹಾಗೆ, ಜನರಲ್ ಬಾಡಿ ಮೀಟಿಂಗ್‌ನಲ್ಲಿ ತೀರ್ಮಾನಿಸಿದ್ದೇಕೆ?

150 ರಿಂದ 200 ಕೋಟೆಯೊಳಗೆ ಒಂದು ಮಾದರಿ ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶ ಇರುವಾಗ, ನಿರಾಣಿಗೆ 405 ಕೋಟಿ ಗುತ್ತಿಗೆ ತೆಗೆದುಕೊಳ್ಳುತ್ತಾರೆ ಅಂದರೆ, ಸಕ್ಕರೆ ಕಾರ್ಖಾನೆ ಜೊತೆಗೆ ಎಲ್ಲವನ್ನೂ ಮಾರಿ ಬಿಟ್ಟಿರಾ? ಈ ಪ್ರಶ್ನೆಗಳಿಗೆ ಪುಟ್ಟರಾಜು ಉತ್ತರಿಸಬೇಕಿದೆ ಎಂದು ಡಾ ರವೀಂದ್ರ ಒತ್ತಾಯಿಸಿದ್ರು.

ಪಿ.ಎಸ್.ಎಸ್.ಕೆ ಕಾರ್ಖಾನೆ ವಿಚಾರದಲ್ಲಿ ಒಂದು ಧೋರಣೆ, ಮೈಷುಗರ್ ವಿಚಾರದಲ್ಲಿ ಇನ್ನೊಂದು ಧೋರಣೆ ತೋರಿಸುತ್ತಿರುವವರು. ಅದರ ಕಾರಣಗಳನ್ನು ನನ್ನ ಜನರ ಮುಂದಿಡಬೇಕು, ರೈತರ ವಿಷಯದಲ್ಲಿ ರಾಜಕೀಯ ಮಾಡುವ ಇಂತಹ ಜನರ ಬಗ್ಗೆ, ನನ್ನ ಜನ ಎಚ್ಚರಿಕೆಯಿಂದ ಇರಬೇಕು, ಇಂದು ಮೈಷುಗರ್ ವ್ಯಾಪ್ತಿಯ ಹಳ್ಳಿಗಳನ್ನು ರೈತರಿಂದ ಸಾಂಕೇತಿಕವಾಗಿ ಸಂಗ್ರಹಿಸಿದ್ದ ಒಂದು ರೂಪಾಯಿ ನಾಣ್ಯಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, ಈ ವರ್ಷವೇ ಮೈಷುಗರ್ ಕಾರ್ಖಾನೆ ಪ್ರಾರಂಭಿಸಲು ಒತ್ತಾಯಿಸುತ್ತಿದ್ದೇವೆ. ಖಾಸಗೀಕರಣ ಮತ್ತು ಓ ಅಂಡ್ ಎಂ ಮಾದರಿಯಲ್ಲಿ ಕಾರ್ಖಾನೆಗಳು ಹೇಗೆ ನಡೆಯುತ್ತದೆ ಎನ್ನುವುದನ್ನು ನನ್ನ ರೈತರೂ ಗಮನಿಸಲಿ. ಇನ್ನು ಮೂರು ವರ್ಷಕ್ಕಾದರೂ ಅರ್ಥ ಆಗಲಿ ಎಂದು ಡಾ ರವೀಂದ್ರ ಹೇಳಿದ್ರು..

https://www.youtube.com/watch?v=sCihnjoLmew

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಡಾ ರವೀಂದ್ರ ವಿರೊಧ

 “ಇದೆ ರೀತಿ 1961ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ರೈತರಲ್ಲದವರ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುತ್ತಿರುವುದು, ರೈತನ ಬದುಕಿನ ಶವಪೆಟ್ಟಿಗೆಗೆ ಹೊಡೆಯುವ ಕೊನೆ ಮೊಳೆ ಎಂದು ನಾವು ಭಾವಿಸುತ್ತೇವೆ. ಈಗಾಗಲೇ, ರಸ್ತೆ ಬದಿಯ ಇಕ್ಕೆಲಗಳಲ್ಲಿ, ನದಿ ತೀರಗಳಲ್ಲಿಯೂ ನನ್ನ ರೈತರು ಬಹುತೇಕ ಜಮೀನನ್ನು ಮಾಡಿಕೊಂಡಿದ್ದಾರೆ, ಮೀರ್ ಸಾಧಿಕ್  ರೀತಿಯ ನಮ್ಮೊಳಗೆ ಇರುವ ದಲ್ಲಾಳಿಗಳು, ಹತ್ತು ಹಲವು ಆಮಿಷ ತೋರಿ, ನನ್ನ ರೈತರ ಬದುಕಿಗೆ ಕೊಳ್ಳಿ ಇಟ್ಟುಬಿಡುತ್ತಾರೆ. ದಯವಿಟ್ಟು ಈ ತಿದ್ದುಪಡಿ ಯನ್ನ ಕೈಬಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ, ಒಳಿತು ಕೆಡುಕುಗಳ ವಿವೇಚನೆ ಇಟ್ಟುಕೊಂಡು ನನ್ನ ಜನರ ಹಿತ ಕಾಪಾಡಬೇಕಾದ ಸರ್ಕಾರಗಳಿಗೆ ಪ್ರತಿಭಟನೆಯಿಂದ ಚುರುಕು ಮುಟ್ಟಿಸಬೇಕು ಎನ್ನುವುದಾದರೆ, ಅಂತಹ ಸರ್ಕಾರಗಳು “ಕಳ್ಳರ ಕೂಟ” ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಂತೆ ಸರಿ ಎಂದು ಡಾ ರವೀಂದ್ರ ಅಭಿಪ್ರಾಯ ಪಟ್ಟರು..

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=7GStfT4rX2k
- Advertisement -

Latest Posts

Don't Miss