Political News: ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆ ಮುಗಿದಿದ್ದು, ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಎರಡು ಕ್ಷೇತ್ರದಲ್ಲಿ ಸೋತರೆ, ಜೆಡಿಎಸ್ ಚೆನ್ನಪಟ್ಟಣದಲ್ಲಿ ಸೋತಿದೆ.
ಈ ಕಾರಣ್ಕಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಪತ್ರ ಬರೆದಿದ್ದು, ಸಹೃದಯ ಕಾರ್ಯಕರ್ತ ಬಂಧುಗಳೇ, ಉಪ ಚುನಾವಣೆಗಳ ಫಲಿತಾಂಶ ಸಂಘಟನಾ ಶಕ್ತಿಯನ್ನು ಅಳೆಯುವ ಅಳತೆಗೋಲಲ್ಲ, ಭವಿಷ್ಯತ್ತಿನಲ್ಲಿ ಸಂಘಟನೆಯನ್ನು ಬಲ ವೃದ್ಧಿಗೊಳಿಸಲು ನಮ್ಮ ಮುಂದಿರುವ ಸವಾಲುಗಳನ್ನು ನೆನಪಿಸುವ ಸಂಕೇತ ಎಂದಿದ್ದಾರೆ.
ಅಲ್ಲದೇ, ಈ ಸೋಲಿನಿಂದ ನಾವೆಲ್ಲ ಎದೆ ಗುಂದಬೇಕಿಲ್ಲ. ಕಾಂಗ್ರೆಸ್ ಆಮಿಷದ ಮೂಲಕ ಮತದಾರರನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂಬುದು ಗೊತ್ತು. ಆದ್ದರಿಂದ ಈ ಸೋಲನ್ನು ನಾವು ಸವಾಲಾಗಿ ಸ್ವೀಕರಿಸಿ, ಮುಂದೆ ನಡೆಯೋಣ ಎಂದು ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್‌ನ ಕೆಲವು ಅಕ್ರಮಗಳ ಆರೋಪದ ಬಗ್ಗೆಯೂ ವಿಜಯೇಂದ್ರ ಈ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಆ ಪತ್ರ ಹೀಗಿದೆ..
ಸಹೃದಯ ಕಾರ್ಯಕರ್ತ ಬಂಧುಗಳೇ,
ಉಪ ಚುನಾವಣೆಗಳ ಫಲಿತಾಂಶ ಸಂಘಟನಾ ಶಕ್ತಿಯನ್ನು ಅಳೆಯುವ ಅಳತೆಗೋಲಲ್ಲ, ಭವಿಷ್ಯತ್ತಿನಲ್ಲಿ ಸಂಘಟನೆಯನ್ನು ಬಲ ವೃದ್ಧಿಗೊಳಿಸಲು ನಮ್ಮ ಮುಂದಿರುವ ಸವಾಲುಗಳನ್ನು ನೆನಪಿಸುವ ಸಂಕೇತ. pic.twitter.com/UvrFaxtpC6
— Vijayendra Yediyurappa (@BYVijayendra) November 26, 2024