Political News: ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಕರ್ನಾಟಕದಲ್ಲಿ ವಿಕಲಚೇತನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಮತ್ತು ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಸೂದೆ ತರುವ ಅಗತ್ಯವಿದೆ ಎಂದರು.
ಅಲ್ಲದೇ, ರಾಜ್ಯದ ಜನಸಂಖ್ಯೆಯಲ್ಲಿ ವಿಕಲಚೇತನರು ಗಮನಾರ್ಹ ಮತ್ತು ವೈವಿಧ್ಯಮಯ ಗುಂಪನ್ನು ಹೊಂದಿದ್ದಾರೆ. ವಿಕಲಚೇತನರ ಹಕ್ಕುಗಳ ಕಾಯ್ದೆ , 2016ನ್ನು ಪರಿಣಾಮಕಾರಿಯಾಗಿ, ಅನುಷ್ಟಾನಕ್ಕೆ ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸೂಕ್ತ ಕಾನೂನನ್ನು ಜಾರಿಗೆ ತರುವುದು ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ವಿಕಲಚೇತನರಿಗೆ ಸಂಭಾವ್ಯ ಶಾಸನದ ಕುರಿತಾದ ವರದಿಯು ಉದ್ಯೋಗಾವಕಾಶಗಳು, ಉಚಿತ ಮತ್ತು ಶೈಕ್ಷಣಿಕ ಹಕ್ಕು ಸಾಧನೆ ಮತ್ತು ಸಾಮಾಜಿಕ ಸೇರ್ಪಡೆಯಲ್ಲಿ ಹಲವಾರು ನೀತಿ ಅಂತರಗಳನ್ನು ಗುರುತಿಸುತ್ತದೆ. ಬೆಳವಣಿಗೆಯ ಮತ್ತು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ವಿಕಲಚೇತನರ ಒಳಗ“ಳ್ಳುವಿಕೆಯನ್ನು ಖಚಿತಪಡಿಸಿಕ“ಳ್ಳಲು ಮತ್ತು ಸಾಮಾಜಿಕ ಭಾಗವಹಿಸುವಿಕೆಯನ್ನು ಸಾಧಿಸಲು ರಾಜ್ಯ ನಿರ್ದಿಷ್ಟ ಶಾಸನದ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಕಲಚೇತನರಿಗೆ ಮೀಸಲಾತಿ ಕೇವಲ ಕ್ರಮವಲ್ಲ, ಇದು ಸಮಾನತೆ- ತಾರತಮ್ಯ ರಹಿತವಾದ ತತ್ವಗಳಿಂದ ಉದ್ಭವಿಸುವ ಸಾಂವಿಧಾನಿಕ ಭಾದ್ಯತೆಗಳಾಗಿದೆ. ಕಾನೂನಿನ ಮುಂದೆ ಸಮಾನತೆಯನ್ನು ಖಾತ್ರಿಪಡಿಸುತ್ತದೆ. ಅನುಚ್ಛೇದ 16 (1) ಮತ್ತು (4) ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶವನ್ನು ಕಡ್ಡಾಯಗ“ಳಿಸುತ್ತದೆ. ಮತ್ತು ಸೌಲಭ್ಯವಂಚಿತರಿಗೆ ಮೀಸಲಾತಿಯನ್ನು ಅನುಮತಿಸುತ್ತದೆ. ಅನುಚ್ಛೇದ 41- ವಿಕಲಚೇತನರಿಗೆ ಕೆಲಸ, ಶಿಕ್ಷಣ ಮತ್ತು ಸಾರ್ವಜನಿಕ ಸಹಾಯದ ಹಕ್ಕನ್ನು ಪಡೆಯಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ ಎಂದಿದ್ದಾರೆ.

