ಅರಗಿನ ಮನೆಯಿಂದ ತಪ್ಪಿಸಿಕೊಂಡು ಸುರಂಗದ ಮೂಲಕ ಹೊರಬಂದ ಪಾಂಡವರು, ಒಂದು ಕಾನನಕ್ಕೆ ಬರುತ್ತಾರೆ. ಅದು ಹಿಡಿಂಬ ರಾಕ್ಷಸನಿಗೆ ಸೇರಿದ ವನವಾಗಿರುತ್ತದೆ. ಆ ಕಾಡಿನಲ್ಲಿ ಯುಧಿಷ್ಠಿರ, ಅರ್ಜುನ ನಕುಲ-ಸಹದೇವ ಮತ್ತು ಕುಂತಿದೇವಿ ವಿಶ್ರಮಿಸುತ್ತಾರೆ. ಮತ್ತು ಭೀಮ ಅವರನ್ನು ಕಾಯುತ್ತಾನೆ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹೀಗಿರುವಾಗ ಕಾಡಿಗೆ ಪಾಂಡವರು ಬಂದ ವಿಷಯ ಹಿಡಿಂಬನಿಗೆ ತಿಳಿಯುತ್ತದೆ. ಆಗ ಹಿಡಿಂಬ ಹಿಡಿಂಬೆಯನ್ನು ಕರೆದು, ಕಾಡಿಗೆ ನರರು ಬಂದಿದ್ದಾರೆ. ಅವರ ಬಳಿ ಹೋಗಿ ಅವರನ್ನು ಕೊಂದು ನನ್ನ ಬಳಿ ತಾ. ನಾವು ಅವರ ಮಾಂಸ ತಿಂದು ರಕ್ತ ಕುಡಿದು, ನಂತರ ನರ್ತಿಸೋಣ ಎನ್ನುತ್ತಾನೆ. ಅದಕ್ಕೆ ಒಪ್ಪಿದ ಹಿಡಿಂಬೆ ಪಾಂಡವರನ್ನು ಕೊಲ್ಲಲು ಕಾಡಿಗೆ ಬರುತ್ತಾಳೆ. ಭೀಮನೊಬ್ಬನನ್ನು ಬಿಟ್ಟು ಪಾಂಡವರೆಲ್ಲ ಮಲಗಿರುವುದನ್ನು ಕಾಣುತ್ತಾಳೆ.
ಭೀಮನ ದೇಹದ ಗಾತ್ರ, ಮೈ ಬಣ್ಣ, ಗತ್ತು ಗಾಂಭೀರ್ಯ ಕಂಡು ಹಿಡಿಂಬೆಗೆ ಪ್ರೇಮಾಂಕುರವಾಗುತ್ತದೆ. ಆಕೆ ಸೌಂದರ್ಯವತಿಯಂತೆ ವೇಷ ಬದಲಿಸಿ, ಆತ ತನ್ನನ್ನು ಮದುವೆಯಾಗುವಂತೆ ಕೇಳುತ್ತಾಳೆ. ಮತ್ತು ಹಿಡಿಂಬ ನನ್ನನ್ನು ನಿಮ್ಮನ್ನೆಲ್ಲ ಕೊಲ್ಲಲು ಕಳುಹಿಸಿದ್ದಾನೆ. ಅವನು ಇಲ್ಲಿಗೆ ಬರುವುದರೊಳಗಾಗಿ ನಾವೆಲ್ಲ ಬೇರೆ ಜಾಗಕ್ಕೆ ಹೋಗೋಣ. ನಿನ್ನ ತಾಯಿ ತಮ್ಮಂದಿರನ್ನು ಎಬ್ಬಿಸು ಎನ್ನುತ್ತಾಳೆ.
ಆಕೆಯ ಮಾತನ್ನು ನಿರಾಕರಿಸಿದ ಭೀಮ, ಓರ್ವ ರಾಕ್ಷಸನಿಗಾಗಿ ನಾನು ನನ್ನ ತಾಯಿ-ತಮ್ಮಂದಿರ ನಿದ್ದೆ ಹಾಳು ಮಾಡಲಾಗುವುದಿಲ್ಲ. ಅವನು ಬಂದರೆ ಬರಲಿ ಎನ್ನುತ್ತಾನೆ. ಅಷ್ಟೊತ್ತಿಗೆ ಹಿಡಿಂಬ ಪಾಂಡವರಿರುವ ಜಾಗಕ್ಕೆ ಬಂದು, ಹಿಡಿಂಬೆಯ ಮೇಲೆ ಕೋಪಗೊಳ್ಳುತ್ತಾನೆ. ತದನಂತರ ಭೀಮ ಮತ್ತು ಹಿಡಿಂಬನ ಮಧ್ಯೆ ಜಗಳವಾಗುತ್ತದೆ. ಹಿಡಿಂಬನನ್ನು ಭೀಮ ಕೊಲ್ಲುತ್ತಾನೆ. ಅಷ್ಟೊತ್ತಿಗೆ ಕುಂತಿ ಮತ್ತು ಪಾಂಡವರು ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಬರುತ್ತಾರೆ.
ಆಗ ಹಿಡಿಂಬೆ, ಕುಂತಿ ದೇವಿಗೆ ತನ್ನ ಪರಿಚಯ ಮಾಡಿಕೊಟ್ಟು, ಭೀಮನಿಗೆ ತನ್ನನ್ನು ವರಿಸಲು ಹೇಳು, ಅವನು ಸಿಗದಿದ್ದರೆ ನಾನು ನನ್ನ ದೇಹ ತ್ಯಜಿಸುತ್ತೇನೆ. ಅವನು ಸಿಕ್ಕರೆ, ಅವನಿಂದ ಒಂದು ಸಂತಾನ ಪಡೆದು ಭೀಮನನ್ನು ನಿಮಗೆ ಒಪ್ಪಿಸುತ್ತೇನೆಂದು ಹೇಳುತ್ತಾಳೆ. ಇದಕ್ಕೆ ಒಪ್ಪಿದ ಕುಂತಿ ಭೀಮನನ್ನು ಹಿಡಿಂಬೆಯೊಂದಿಗೆ ಕಳುಹಿಸುತ್ತಾಳೆ.
ಹಿಡಿಂಬೆ ಭೀಮನೊಂದಿಗೆ ವಿಹರಿಸಿ, ಓರ್ವ ಪುತ್ರನನ್ನು ಪಡೆಯುತ್ತಾಳೆ. ಅವನೇ ಘಟೋತ್ಕಜ. ಮುಂದೆ ಯುಧ್ಧ ನಡೆಯುವ ಸಮಯದಲ್ಲಿ ಕರ್ಣನ ವಿರುದ್ಧವಾಗಿ, ಪಾಂಡವರ ಪರವಾಗಿ ಘಟೋತ್ಕಜ ಹೋರಾಡುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ