ಗರುಡನಿಗೆ ಸರ್ಪವೇ ನೆಚ್ಚಿನ ಆಹಾರವೇಕೆ ಗೊತ್ತೇ..?

ಹಾವಿಗೆ ಮುಂಗೂಸಿ ಹೇಗೆ ಶತ್ರುವೋ ಅಂತೆಯೇ ಹದ್ದು ಕೂಡ ಶತ್ರುವಾಗಿದೆ. ಹದ್ದಿಗೆ ಹಾವೇ ನೆಚ್ಚಿನ ಆಹಾರವಾಗಲು ಕಾರಣವೇನು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಹಾವುಗಳ ತಾಯಿಯಾದ ಕದ್ರಿ, ಮೋಸದಿಂದ ಗರುಡನ ತಾಯಿ ವಿನತಾಳನ್ನ ದಾಸಿಯಾಗಿ ಮಾಡಿಕೊಳ್ಳುತ್ತಾಳೆ. ತನ್ನ ತಾಯಿಯನ್ನ ದಾಸ್ಯದಿಂದ ಮುಕ್ತಿಗೊಳಿಸಲು ಗರುಡ ಹಾವುಗಳಲ್ಲಿ ಬೇಡಿಕೊಳ್ಳುತ್ತಾನೆ. ಆಗ ಹಾವುಗಳು ನಿನ್ನ ತಾಯಿಯನ್ನ ದಾಸ್ಯದಿಂದ ಮುಕ್ತಿಗೊಳಿಸಲು ನಮಗೆ ಅಮೃತ ತಂದುಕೊಡು. ಆಗ ನಾವು ನಿನ್ನ ತಾಯಿಯನ್ನ ದಾಸ್ಯದಿಂದ ಮುಕ್ತಿಗೊಳಿಸುತ್ತೇವೆ ಎನ್ನುತ್ತಾರೆ.

ಆಗ ಗರುಡ ದೇವತೆಗಳ ಜೊತೆ ಯುದ್ಧ ಮಾಡಿ, ಅಮೃತವನ್ನು ತೆಗೆದುಕೊಂಡು ಬರುತ್ತಾನೆ. ಮಾರ್ಗಮಧ್ಯೆ ಗರುಡನಿಗೆ ಇಂದ್ರ ಸಿಗುತ್ತಾನೆ. ಆಗ ಗರುಡನನ್ನು ಪ್ರಶ್ನಿಸಿದ ಇಂದ್ರ, ನೀನು ಈ ಅಮೃತವನ್ನು ಯಾರಿಗಾಗಿ ಕೊಂಡೊಯ್ಯುತ್ತಿರುವ ಎಂದು ಕೇಳುತ್ತಾನೆ.

ಇದನ್ನು ಹಾವುಗಳಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದೇವೆ. ಅವರಿಗೆ ಅಮೃತ ನೀಡಿದರೆ, ಅವರು ನನ್ನ ಅಮ್ಮನನ್ನು ದಾಸ್ಯದಿಂದ ಮುಕ್ತಗೊಳಿಸುತ್ತಾರೆ ಎಂದು ಗರುಡ ಹೇಳುತ್ತಾನೆ. ಆಗ ಇಂದ್ರೆ ನೀನೇನಾದರೂ ಅವರಿಗೆ ಅಮೃತ ನೀಡಿದರೆ ಅವರು ಅಮರರಾಗಿ ಇಡೀ ಭೂಮಿಯನ್ನೇ ನಾಶ ಮಾಡುತ್ತಾರೆ. ಮತ್ತು ನಿನ್ನ ಅಮ್ಮನನ್ನು ದಾಸ್ಯದಿಂದ ಮುಕ್ತ ಮಾಡುವುದಿಲ್ಲ ಎನ್ನುತ್ತಾನೆ.

ಆಗ ಯೋಚನೆ ಮಾಡಿದ ಗರುಡ, ಸರಿ ನನಗೊಂದು ವರ ಬೇಕೆಂದು ಕೇಳುತ್ತಾನೆ. ಅದೇನೆಂದರೆ ನನ್ನ ಅಮ್ಮನನ್ನು ಮೋಸದಿಂದ ದಾಸಿ ಮಾಡಿಕೊಂಡ ಸರ್ಪಗಳೇ ನನ್ನ ಆಹಾರವಾಗಲಿ ಎಂದು ವರ ಕೇಳುತ್ತಾನೆ. ಇಂದ್ರ ತಥಾಸ್ತು ಎನ್ನುತ್ತಾನೆ.

ಅಮೃತ ತೆಗೆದುಕೊಂಡು ಸರ್ಪಗಳ ಬಳಿ ಹೋದ ಗರುಡನನ್ನು ನೋಡಿ ಸರ್ಪಗಳು ವಿನತಳನ್ನು ದಾಸ್ಯದಿಂದ ಮುಕ್ತಿಗೊಳಿಸುತ್ತಾರೆ. ಆಗ ಗರುಡ ನೀವೇಲ್ಲ ಸ್ನಾನ ಮಾಡಿ ಶುದ್ಧರಾಗಿ ಬಂದು ಈ ಅಮೃತವನ್ನು ಸೇವಿಸಿ ಎಂದು ಹೇಳಿ ಹೊರಟು ಹೋಗುತ್ತಾನೆ. ಇದನ್ನು ನಂಬಿದ ಸರ್ಪಗಳು ಸ್ನಾನಕ್ಕೆ ಹೋದಾಗ, ಅಲ್ಲಿಗೆ ಬಂದ ಇಂದ್ರ ಅಮೃತದ ಬಿಂದಿಗೆ ತೆಗೆದುಕೊಂಡು ಹೋಗುತ್ತಾನೆ. ಹೀಗೆ ಅಮೃತವೂ ಸಿಗದೇ, ಅಮರವೂ ಆಗದೇ, ಗರುಡನಿಗೆ ಹಾವುಗಳು ಆಹಾರವಾಗಿಬಿಡುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author