Tuesday, October 7, 2025

Latest Posts

ಮೂಕಾಂಬಿಕೆ ಕೊಲ್ಲೂರಿನಲ್ಲಿ ನೆಲೆ ನಿಂತಿದ್ದು ಹೇಗೆ..?

- Advertisement -

ಇಂದು ನಾವು ತ್ರಿಗುಣ ಸ್ವರೂಪಿಯಾದ ಮೂಕಾಂಬಿಕೆಯ, ಆಕೆ ಮೂಕಾಸುರನನ್ನು ಕೊಂದ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಒಮ್ಮೆ ದಕ್ಷ ರಾಜ ಮಹಾಯಾಗವನ್ನು ನಡೆಸುತ್ತಾನೆ. ಆದರೆ ಆ ಯಾಗಕ್ಕೆ ಸ್ವಂತ ಮಗಳಾದ ಸತಿಯನ್ನೇ ಕರೆದಿರುವುದಿಲ್ಲ. ಕಾರಣ, ಆಕೆಯ ಪತಿ ಶಿವನನ್ನು ಕಂಡರೆ, ದಕ್ಷ ಮಹಾರಾಜನಿಗೆ ಆಗುತ್ತಿರಲಿಲ್ಲ. ಆದರೆ ಸತಿ, ಕರೆಯದೇ ಯಜ್ಞಕ್ಕೆ ಬರುತ್ತಾಳೆ. ಆಗ ದಕ್ಷ, ಯಜ್ಞಕ್ಕೆ ಬಂದ ಎಲ್ಲರೆದುರು, ಶಿವನ ಬಗ್ಗೆ ಬೇಡದ್ದನ್ನು ಮಾತನಾಡುತ್ತ, ಮಗಳನ್ನೇ ಅವಮಾನಿಸುತ್ತಾನೆ. ಶಿವನಿಗೆ ಅವಮಾನವಾದುದ್ದನ್ನು ಸಹಿಸದ ಸತಿದೇವಿ, ಅಗ್ನಿ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನ ಬಿಡುತ್ತಾಳೆ.

ಆಗ ಕೋಪಗೊಂಡ ಶಿವ, ತನ್ನ ಅಂಶವಾದ ವೀರಭದ್ರನನ್ನು ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಕಳುಹಿಸಿ, ದಕ್ಷನನ್ನು ಸಂಹರಿಸುವಂತೆ ಹೇಳುತ್ತಾನೆ. ಶಿವನ ಆಜ್ಞೆಯಂತೆ ವೀರಭದ್ರನು, ದಕ್ಷನನ್ನು ಸಂಹರಿಸುತ್ತಾನೆ. ನಂತರ ಸತಿ ದೇವಿಯ ದೇಹದಿಂದ ಉದ್ಭವಗೊಂಡ ಜ್ಯೋತಿಗಳು, ಒಂದೊಂದು ಸ್ಥಳ ಸೇರಿ ಶಕ್ತಿ ಪೀಠವಾಗುತ್ತದೆ.

ಅದರಲ್ಲಿ ಒಂದು ಜ್ಯೋತಿ ಮಹಾರಣ್ಯಪುರಕ್ಕೆ ಹೋಗಿ ಅಲ್ಲಿ ಜ್ಯೋತಿರ್ಲಿಂಗವಾಗುತ್ತದೆ. ಆ ಲಿಂಗದಲ್ಲಿ ಶಿವ ಐಕ್ಯನಾಗುತ್ತಾನೆಂದು ಹೇಳಲಾಗಿದೆ. ಅದೇ ಸ್ಥಳದಲ್ಲಿ ಕೋಲಾ ಮಹರ್ಷಿಗಳು ತ್ರಿಮೂರ್ತಿಗಳನ್ನು ಕುರಿತು ತಪಸ್ಸು ಮಾಡುತ್ತಾರೆ. ಮಹರ್ಷಿಗಳ ತಪಸ್ಸಿಗೆ ಮೆಚ್ಚಿದ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ಏನು ವರ ಬೇಕೆಂದು ಕೇಳುತ್ತಾರೆ.

ಆಗ ಕೋಲಾ ಮಹರ್ಷಿಗಳು, ನೀವು ಮೂವರು ಈ ಸ್ಥಳದಲ್ಲೇ ನೆಲೆಸಬೇಕೆಂದು ಕೇಳುತ್ತಾರೆ. ಆಗ ತ್ರಿಮೂರ್ತಿಗಳು, ಸಮಯ ಬಂದಾಗ ನಾವಿಲ್ಲಿ ನೆಲೆಸುತ್ತೇವೆ. ಆದರೆ ಇಲ್ಲಿ ತ್ರಿಗುಣ ಸ್ವರೂಪಿಯಾದ ಮೂಕಾಂಬಿಕೆಯು ನೆಲೆನಿಲ್ಲುತ್ತಾಳೆ. ಈ ಊರು ನಿಮ್ಮ ಹೆಸರಿನಿಂದಲೇ ಪ್ರಖ್ಯಾತವಾಗುತ್ತದೆ ಎಂದು ಹೇಳುತ್ತಾರೆ. ಮಹಾರಣ್ಯಪುರ, ಕೋಲಾಪುರವಾಗುತ್ತದೆ. ನಂತರ ಕೊಲ್ಲೂರೆಂದು ಪ್ರಸಿದ್ಧವಾಗುತ್ತದೆ.

ಇನ್ನು ಮೂಕಾಂಬಿಕೆ ಇಲ್ಲಿ ಹೇಗೆ ನೆಲೆ ನಿಂತಳು ಎಂದು ನೋಡುವುದಾದರೆ, ಮೂಕಾಸುರನೆಂಬ ರಾಕ್ಷಸ ವರ ಪಡೆದು, ದೇವತೆಗಳಿಗೆ ತೊಂದರೆ ನೀಡುತ್ತಿದ್ದ. ಆಗ ದೇವತೆಗಳು ತ್ರಿಮೂರ್ತಿಗಳ ಬಳಿ ಹೋಗಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ಅಂಶದಿಂದ ದೇವಿ ಉದ್ಭವಿಸಿದಳು. ಆಕೆಯನ್ನು ಮೂಕಾಸುರನ ವಧೆ ಮಾಡಲು ಕಳುಹಿಸಿದರು. ದೇವಿಯ ಜೊತೆ ಯುದ್ಧ ಮಾಡಲು ಮೂಕಾಸುರ ಶಿವನನ್ನು ತಪಸ್ಸು ಮಾಡಿ, ವರ ಕೇಳಲು ಮುಂದಾದ. ಆದರೆ ವರ ನೀಡಲು ಶಿವ ಮುಂದೆ ಬಂದಾಗ, ಮೂಕಾಸುರನ ನಾಲಿಗೆಯ ಮೇಲೆ ಕುಳಿತ ಸರಸ್ವತಿ, ವರ ಕೇಳದಂತೆ ತಡೆದಳು.

ಮೂಕಾಸುರ ಮತ್ತು ದೇವಿಯ ನಡುವೆ ಯುದ್ಧ ನಡೆಯಿತು. ಮೂಕಾಸುರನನ್ನು ದೇವಿ ಸಂಹರಿಸಿದಳು. ಮೂಕಾಸುರನನ್ನು ವಧಿಸಿದ ದೇವಿ, ಮೂಕಾಂಬಿಕೆಯಾದಳು. ಭಕ್ತರ ರಕ್ಷಣೆಗಾಗಿ ಕೊಲ್ಲೂರಿನಲ್ಲಿಯೇ ನೆಲೆ ನಿಂತಳು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ

ಈ ಕೂಡಲೇ ಕರೆ ಮಾಡಿ

998698754

- Advertisement -

Latest Posts

Don't Miss