ರಾಮ-ಸೀತೆಯ ಜೊತೆ ವನವಾಸಕ್ಕೆ ತೆರಳಿದ್ದ ಲಕ್ಷ್ಮಣ, 14 ವರ್ಷಗಳ ಕಾಲ ಅಣ್ಣ ಅತ್ತಿಗೆಯ ಸೇವೆ ಮಾಡುವುದರಲ್ಲಿಯೇ ನಿರತನಾಗಿದ್ದ. ಅತ್ತಿಗೆಯನ್ನು ದುಷ್ಟರಿಂದ ರಕ್ಷಿಸಲು ಲಕ್ಷ್ಮಣ, 14 ವರ್ಷಗಳ ಕಾಲ ನಿದ್ದೆಯೇ ಮಾಡಿರಲಿಲ್ಲ. ಲಕ್ಷ್ಮಣನಿಗೆ ಅಷ್ಟು ವರ್ಷ ನಿದ್ದೆ ಬರದಿರಲು ಕಾರಣವೇನು..? ಲಕ್ಷ್ಮಣ ನಿದ್ದೆಯನ್ನ ಹೇಗೆ ತಡೆದುಕೊಂಡ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತ್ರೇತಾ ಯುಗ, ದ್ವಾಪರ ಯುಗ, ಮತ್ತು ಅದಕ್ಕೂ ಮೊದಲು ರಾಮ- ಲಕ್ಷ್ಮಣನ ಸಂಬಂಧ ತುಂಬಾ ಗಾಢವಾದದ್ದು. ವಿಷ್ಣುವಿನ ಹಾಸಿಗೆಯಾಗಿದ್ದ ಶೇಷನಾಗ, ತ್ರೇತಾಯುಗಲ್ಲಿ ರಾಮನ ಸಹೋದರ ಲಕ್ಷ್ಮಣನಾಗಿದ್ದ. ದ್ವಾಪರಯುಗದಲ್ಲಿ ಕೃಷ್ಣನ ಸಹೋದರ ಬಲರಾಮನಾಗಿದ್ದ. ವಿಷ್ಣುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಶೇಷನಾಗ, ತ್ರೇತಾಯುಗ, ದ್ವಾಪರಯುಗದಲ್ಲೂ ಕೃಷ್ಣನಿಗೆ ಸಾಥ್ ನೀಡಿದ್ದ.
ಇಂಥ ಶೇಷನಾಗನೇ ರಾಮನ ಸಹೋದರ ಲಕ್ಷ್ಮಣ. ಇನ್ನು ಲಕ್ಷ್ಮಣ ವನವಾಸದ ಕಾಲದಲ್ಲಿ 14 ವರ್ಷ ನಿದ್ದೆ ಮಾಡದಿರಲು, ಇವನಿಗಿದ್ದ ವರವೇ ಕಾರಣ ಅಂತಾ ಹೇಳಲಾಗುತ್ತದೆ. ಅದು ಯಾವ ವರ ಮತ್ತು ಯಾರು ಕೊಟ್ಟ ವರ ಅಂತಾ ತಿಳಿಯಲು, ಒಂದು ಕಥೆ ಇದೆ.
ರಾಮ ಮತ್ತು ಸೀತೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಲಕ್ಷ್ಮಣ ಅವರಿಬ್ಬರನ್ನು ಕಾಯುತ್ತ ಗುಡಿಸಿಲಿನ ಹೊರಗೆ ನಿಂತುಕೊಳ್ಳುತ್ತಿದ್ದ. ಸುಮಾರು ದಿನಗಳವರೆಗೆ ನಿದ್ದೆ ಮಾಡಲಿಲ್ಲ. ಆಗ ಪ್ರತ್ಯಕ್ಷಳಾದ ನಿದ್ರಾದೇವಿ, ಹೀಗೆ ನಿದ್ದೆ ತ್ಯಜಿಸಲು ಕಾರಣ ಕೇಳುತ್ತಾಳೆ.
ಆಗ ಲಕ್ಷ್ಮಣ ತನ್ನ ಅಣ್ಣ ಮತ್ತು ಅತ್ತಿಗೆಯನ್ನು ಕಾವಲು ಕಾಯಬೇಕಾಗಿದೆ. ನನ್ನ ಅಣ್ಣನಿಗೆ ಒಂದಿಷ್ಟು ತೊಂದರೆಯಾದರೂ ನಾನು ಸಹಿಸಲಾರೆ, ಹಾಗಾಗಿ ನನಗೆ 14 ವರ್ಷಗಳ ಕಾಲ ನಿದ್ದೆ ತ್ಯಜಿಸುವ ಶಕ್ತಿ ಕೊಡು ಎಂದು ಕೇಳುತ್ತಾನೆ. ಆಗ ನಿದ್ರಾದೇವಿ ಲಕ್ಷ್ಮಣನ ಸಹೋದರ ಪ್ರೇಮಕ್ಕೆ ಮೆಚ್ಚಿ, ವರ ನೀಡಲು ಮುಂದಾಗುತ್ತಾಳೆ. ಅದರೊಂದಿಗೆ ಒಂದು ಷರತ್ತನ್ನೂ ಇಡುತ್ತಾಳೆ.
ಅದೇನೆಂದರೆ, 14 ವರ್ಷಗಳ ಕಾಲ ಲಕ್ಷ್ಮಣನ ಪಾಲಿನ ನಿದ್ದೆಯನ್ನು ಬೇರೆ ಯಾರಾದರೂ ಮಾಡಿದರೆ, ಲಕ್ಷ್ಮಣನಿಗೆ ಈ ವರ ನೀಡುತ್ತೇನೆ ಎನ್ನುತ್ತಾಳೆ. ಆಗ ಲಕ್ಷ್ಮಣ ತನ್ನ ನಿದ್ದೆಯನ್ನು ಪತ್ನಿ ಊರ್ಮಿಳೆಗೆ ನೀಡುವಂತೆ ಹೇಳುತ್ತಾನೆ. ಲಕ್ಷ್ಮಣನ ಪಾಲಿನ 14 ವರ್ಷಗಳ ಕಾಲದ ನಿದ್ದೆಯನ್ನ ಊರ್ಮಿಳೆಯೇ ಮಾಡುತ್ತಾಳೆ. ಲಕ್ಷ್ಮಣನಿಗೆ ನಿದ್ರಾದೇವಿಯಿಂದ ವರ ಸಿಗುತ್ತದೆ. ಇದೇ ವರದಿಂದ ಲಕ್ಷ್ಮಣ ನಿದ್ದೆ ತ್ಯಜಿಸಿ 14 ವರ್ಷಗಳ ಕಾಲ ಅಣ್ಣ ಅತ್ತಿಗೆಯ ರಕ್ಷಣೆ ಮಾಡುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




