ಹಿಂದೂಗಳಲ್ಲಿ ಪೂಜೆ ಮಾಡುವಾಗ ಹೂವಿಗಿರುವಷ್ಟೇ ಪ್ರಾಮುಖ್ಯತೆ ತುಳಸಿಗಿದೆ. ಆದ್ರೆ ಗಣಪನ ಪೂಜೆಯಲ್ಲಿ ಮಾತ್ರ ತುಳಸಿಯನ್ನು ಬಳಸಲಾಗುವುದಿಲ್ಲ. ಯಾಕೆ ಗಣಪನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮಹಾ ಧರ್ಮರಾಜನ ಮಗಳೇ ತುಳಸಿ. ನೋಡಲು ಸುಂದರಳಾದ, ವಿಷ್ಣುವಿನ ಭಕ್ತೆಯೂ ಆದ ತುಳಸಿ, ಪ್ರಿತಿದಿನ ವಿಷ್ಣುವಿನ ಪೂಜೆಗಾಗಿ ನದಿಯ ಬಳಿ ಹೋಗುತ್ತಿದ್ದಳು. ಅಲ್ಲಿ ನದಿ ದಂಡೆಯ ಮೇಲೆ ತಪಸ್ಸು ಮಾಡಿ, ಪೂಜೆ ಮಾಡುತ್ತಿದ್ದಳು. ಹೀಗೆ ಒಮ್ಮೆ ನದಿಯ ದಡದ ಬಳಿ ಪೂಜೆ ಮುಗಿಸಿ ಕುಳಿತಿದ್ದ ತುಳಸಿ, ಓರ್ವ ಯುವಕನನ್ನು ನೋಡುತ್ತಾಳೆ. ಅವನೆಡೆಗೆ ಆಕರ್ಷಿತಳಾಗುತ್ತಾಳೆ.
ಅವನ ಬಳಿ ಹೋಗಿ ತನ್ನನ್ನು ಮದುವೆಯಾಗುವಂತೆ ಕೇಳುತ್ತಾಳೆ. ಆದ್ರೆ ಆ ಯುವಕ ಒಪ್ಪುವುದಿಲ್ಲ. ಶಾಂತವಾಗಿಯೇ ತುಳಸಿಯ ಪ್ರೀತಿಯನ್ನ ನಿರಾಕರಿಸುತ್ತಾನೆ. ಅಲ್ಲದೇ ತಾನು ತನ್ನ ತಂದೆ ತಾಯಿಗಾಗಿ ಕೊನೆಯವರೆಗೂ ಅವಿವಾಹಿತನಾಗಿ ಉಳಿಯಲು ಇಚ್ಛಿಸುತ್ತೇನೆಂದು ಹೇಳುತ್ತಾನೆ. ಇದರಿಂದ ಕೋಪಗೊಂಡ ತುಳಸಿ, ನನ್ನ ಪ್ರೀತಿಯನ್ನು ನಿರಾಕರಿಸಿದ ನಿನಗೆ ಕೊನೆಯವರೆಗೂ ಅವಿವಾಹಿತನಾಗದಿರಲು ಸಾಧ್ಯವಾಗದಿರಲಿ. ನಿನ್ನ ಇಚ್ಛೆಗೆ ವಿರುದ್ಧವಾಗಿ ನಿನಗೆ ವಿವಾಹವಾಗಲಿ ಎಂದು ಶಾಪ ನೀಡುತ್ತಾಳೆ.
ವಿನಾಃ ಕಾರಣ ತನಗೆ ಶಾಪ ನೀಡಿದ್ದನ್ನು ಕಂಡು, ತುಳಸಿಯ ಮೇಲೆ ಕೋಪಗೊಂಡ ಗಣೇಶ, ತುಳಸಿಗೂ ಶಾಪ ನೀಡುತ್ತಾನೆ. ನಿನ್ನ ವಿವಾಹ ರಾಕ್ಷಸನೊಂದಿಗಾಗಲಿ, ನನ್ನ ಶಾಪದಿಂದ ನೀನು ಗಿಡವಾಗುವಂತಾಗಲಿ ಎಂದು ಗಣಪ ತುಳಸಿಗೆ ಶಾಪ ನೀಡುತ್ತಾನೆ.
ತನ್ನ ತಪ್ಪಿನ ಅರಿವಾಗಿ ತುಳಸಿ ಗಣಪನ ಬಳಿ ಕ್ಷಮೆ ಕೇಳುತ್ತಾಳೆ. ಆಗ ಗಣಪ, ಶಾಪವನ್ನಂತೂ ಹಿಂದೆಗೆದುಕೊಳ್ಳಲಾಗುವುದಿಲ್ಲ. ಅದರ ಬದಲು ನಿನ್ನನ್ನು ಒಂದು ಪವಿತ್ರ ಗಿಡವೆಂದು ಪೂಜಿಸುವಂತಾಗಲಿ. ಆದರೆ ನನ್ನ ಪೂಜೆಯಲ್ಲಿ ನಿನ್ನ ಬಳಕೆ ಮಾಡದಿರಲಿ ಎಂದು ಹೇಳುತ್ತಾನೆ. ಆದ್ದರಿಂದಲೇ, ಗಣಪನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




