Wednesday, January 15, 2025

Latest Posts

ಹೂವುಗಳಲ್ಲೇ ಶ್ರೇಷ್ಠ ಹೂವು ಪಾರಿಜಾತ: ಈ ದೇವ ವೃಕ್ಷದ ಹಿಂದಿದೆ ಹಲವು ಕಥೆ..!

- Advertisement -

ಸಾಮಾನ್ಯವಾಗಿ ನಾವು ಮಲ್ಲಿಗೆ, ದಾಸವಾಳ, ಸೇವಂತಿ, ಗುಲಾಬಿ, ಚೆಂಡುಹೂವುಗಳನ್ನ ದೇವರಿಗೆ ಹಾಕುತ್ತೇವೆ. ಆದ್ರೆ ಈ ಎಲ್ಲ ಹೂವಿಗಿಂತ ಪಾರಿಜಾತ ಹೂವು ತುಂಬಾ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ. ಯಾಕೆ ಪಾರಿಜಾತ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ..? ಏನಿದರ ವಿಶೇಷತೆ ಅನ್ನೋದನ್ನ ನೋಡೋಣ ಬನ್ನಿ..

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278

ಹಿಂದಿನ ಕಾಲದಿಂದ ಇಂದಿನ ಕಾಲದವರೆಗೂ ಪ್ರೀತಿ ಬಗ್ಗೆ ಹತ್ತು ಹಲವು ಕಥೆಗಳನ್ನ ನಾವು ಕೇಳಿದ್ದೇವೆ. ಮೊಟ್ಟ ಮೊದಲ ಪ್ರೇಮಕಥೆಯಾದ ರಾಧೆ- ಕೃಷ್ಣರ ಪ್ರೀತಿ ಕೇಳಿದ್ದೇವೆ. ಸೀತಾ-ರಾಮ, ಲೈಲಾ- ಮಜನು, ರೋಮಿಯೋ- ಜೂಲಿಯಟ್, ಮುಮ್ತಾಜ್- ಷಹಜಾನ್ ಇತ್ಯಾದಿ ಪ್ರೇಮಕಾವ್ಯವನ್ನ ಕೇಳಿದ್ದೇವೆ. ಈ ಬಗ್ಗೆ ಯಾಕೆ ಹೇಳ್ತಿದ್ದೇವೆ ಅಂದ್ರೆ, ಪಾರಿಜಾತ ಹೂವು ಹುಟ್ಟಿದ್ದು ಕೂಡ, ಒನ್ ಸೈಡ್ ಪ್ರೀತಿಯಿಂದ.

ಕೆಲ ಕಥೆಗಳ ಪ್ರಕಾರ ಪಾರಿಜಾತಕ ಎಂಬ ಸುಂದರಿ ಸೂರ್ಯನನ್ನ ಪ್ರೀತಿಸುತ್ತಿದ್ದಳಂತೆ. ಆದ್ರೆ ಸೂರ್ಯ ಆಕೆಯ ಪ್ರೀತಿಯನ್ನ ನಿರಾಕರಿಸಿದ. ಇದಕ್ಕೆ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗಿದೆ. ಆಕೆಯ ದೇಹದ ಬೂದಿಯಿಂದಲೇ ಪಾರಿಜಾತ ಹೂವು ಉದ್ಭವಿಸಿದ್ದು ಎನ್ನಲಾಗಿದೆ. ಈ ಕಾರಣಕ್ಕೆ ಸೂರ್ಯ ಬಂದಾಗ ಬಾಡುವ ಪಾರಿಜಾತ, ಸೂರ್ಯಾಸ್ತದ ಬಳಿಕ ಅರಳುತ್ತದೆ ಎನ್ನಲಾಗಿದೆ.

ಈ ಬಗ್ಗೆ ಇನ್ನೊಂದು ಕಥೆಯಿದೆ. ಸಮುದ್ರಮಥನ ಕಾಲದಲ್ಲಿ ಕ್ಷೀರ ಸಮುದ್ರದಲ್ಲಿ ಐದು ದೇವ ವೃಕ್ಷ ಉದ್ಭವಿಸಿತ್ತಂತೆ. ಈ ವೃಕ್ಷಗಳ ಪೈಕಿ ಪಾರಿಜಾತ ಕೂಡ ಒಂದು. ಇಂದ್ರ ಇಂದ್ರಾಣಿಗಾಗಿ ಪಾರಿಜಾತ ಗಿಡವನ್ನ ತನ್ನ ಬಳಿ ಇರಿಸಿಕೊಂಡಿದ್ದ. ಆದ್ರೆ ಪಾರಿಜಾತದ ಸುಗಂಧ ಮತ್ತು ಸೌಂದರ್ಯಕ್ಕೆ ಮನಸೋತ ಕೃಷ್ಣ ಭಾಮೆಗಾಗಿ ಪಾರಿಜಾತ ತರಲು ಹೋದಾಗ, ಇಂದ್ರ ಮತ್ತು ಕೃಷ್ಣನ ನಡುವೆ ಜಗಳವಾಯಿತಂತೆ.

ಇನ್ನು ಸಾಮಾನ್ಯವಾಗಿ ನಾವು ನೆಲಕ್ಕೆ ಬಿದ್ದ ಹೂವನ್ನ ದೇವರಿಗೆ ಹಾಕುವುದಿಲ್ಲ. ಆದ್ರೆ ಪಾರಿಜಾತದ ಹೂವು ನೆಲಕ್ಕೆ ಬಿದ್ದರೂ ದೇವರಿಗೆ ಹಾಕಲು ಯೋಗ್ಯವಾಗಿದೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

- Advertisement -

Latest Posts

Don't Miss