ರಾಜಾ ಹರಿಶ್ಚಂದ್ರ ತನ್ನ ಪತ್ನಿ- ಮಗನನ್ನು ಹಿಂದಿರುಗಿ ಪಡೆಯುತ್ತಾನಾ..? ಭಾಗ 2

ನಾವು ಭಾಗ 1ರಲ್ಲಿ ರಾಜಾ ಹರಿಶ್ಚಂದ್ರ ಪತ್ನಿ- ಮಗನನ್ನು ಯಾಕೆ ಮಾರಿದನೆಂದು ಹೇಳಿದ್ದೆವು. ಇದೀಗ ಎರಡನೇಯ ಭಾಗದಲ್ಲಿ, ಮಾರಾಟವಾಗಿದ್ದ ಪತ್ನಿ- ಮಗ ಮತ್ತೆ ಹರಿಶ್ಚಂದ್ರನನ್ನು ಸೇರುತ್ತಾರಾ..? ಹರಿಶ್ಚಂದ್ರನಿಗೆ ರಾಜನ ಪಟ್ಟ ಮತ್ತೆ ಸಿಗುತ್ತದಾ..? ವಿಶ್ವಾಮಿತ್ರ ಮುನಿಗಳು ಮುಂದೇನು ಮಾಡುವರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಪತ್ನಿ- ಮಕ್ಕಳನ್ನು ಮಾರಾಟ ಮಾಡಿದ ಬಳಿಕ, ಖಾಲಿ ಕೈಯಲ್ಲಿದ್ದ ಹರಿಶ್ಚಂದ್ರನನ್ನು ವಿಶ್ವಾಮಿತ್ರರು, ಚಾಂಡಾಳನ ಕೈ ಕೆಳಗೆ ಕೆಲಸ ಮಾಡಲು ನೇಮಿಸಿ, ತನಗೆ ಬೇಕಾದಷ್ಟು ಹಣವನ್ನು ಅವನಿಂದ ಪಡೆದರು. ಇದಾದ ಬಳಿಕ ಚಾಂಡಾಳ, ಈ ಸ್ಮಶಾನಕ್ಕೆ ಬರುವ ಹೆಣಗಳನ್ನು ಕಾಯಬೇಕು. ಇಲ್ಲಿ ಬರುವ ಪ್ರತಿಯೊಬ್ಬರ ಬಳಿ ಹಣ ಪಡಿಯಲೇಬೇಕು. ಅವರು ಶ್ರೀಮಂತರಾಗಲಿ, ಕಡು ಬಡವರೇ ಆಗಲಿ, ಹೆಣ ಸುಡಲು ಬರುವವರ ಬಳಿ, ಹಣ ಪಡೆಯಲೇಬೇಕು. ನೀನು ಸತ್ಯವಂತನೆಂದು ಕೇಳಿದ್ದೇನೆ. ಸತ್ಯದ ದಾರಿಯಲ್ಲೇ ನಡೆಯುತ್ತೀಯ ಎಂದು ನಂಬಿಕೆ ಇಟ್ಟಿದ್ದೇನೆಂದು ಹೇಳಿ ನಡೆಯುತ್ತಾನೆ.

ಈ ರೀತಿ ಜೀವನ ನಡೆಯುತ್ತಿರುವಾಗ, ಹರಿಶ್ಚಂದ್ರನ ಪತ್ನಿ ಚಂದ್ರಮತೀ, ಮಗ ರೋಹಿತಾಶ್ವನ ಹೆಣವನ್ನು ತೆಗೆದುಕೊಂಡು ಅಂತ್ಯ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಬರುತ್ತಾಳೆ. ರೋಹಿತಾಶ್ವ ಸತ್ತದ್ದು ಹೇಗೆಂದು ಹರಿಶ್ಚಂದ್ರ ಕೇಳಿದಾಗ, ಅವನಿಗೆ ಸರ್ಪ ಕಚ್ಚಿತು ಎಂದು ಹೇಳುತ್ತಾಳೆ. ಹರಿಶ್ಚಂದ್ರನಿಗೆ ಎಷ್ಟೇ ದುಃಖವಾದರೂ, ಹರಿಶ್ಚಂದ್ರ ಅದನ್ನು ತೋರಿಸಲಿಲ್ಲ. ಚಂದ್ರಮತೀಯ ಬಳಿ ಮಗನ ಅಂತ್ಯಸಂಸ್ಕಾರ ಮಾಡುವಷ್ಟು ಹಣವಿರಲಿಲ್ಲ.

ಹರಿಶ್ಚಂದ್ರ ತನ್ನ ಕಾರ್ಯ ನಿಷ್ಠೆಯನ್ನ ಈ ವೇಳೆಯೂ ಬಿಡಲಿಲ್ಲ. ಹಣ ನೀಡದಿದ್ದಲ್ಲಿ, ಅಂತ್ಯಸಂಸ್ಕಾರಕ್ಕೆ ಬಿಡುವುದಿಲ್ಲವೆಂದು ಹೇಳಿದ. ಆಗ ಇಂದ್ರದೇವ, ವಿಶ್ವಾಮಿತ್ರ ಮತ್ತು ದೇವತೆಗಳ ಸಮೇತನಾಗಿ ಪ್ರತ್ಯಕ್ಷನಾದ. ನೀನು ನಿನ್ನ ಸತ್ಯ ನಿಷ್ಠೆಯನ್ನ ಸಾಬೀತು ಮಾಡಿಬಿಟ್ಟೆ. ಇನ್ನು ನಿನ್ನನ್ನು ನಾವು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತೇವೆ. ನಮ್ಮೊಡನೆ ಬಾ ಎಂದು ಕರೆಯುತ್ತಾರೆ. ಆದರೆ ಸತ್ಯ ಹರಿಶ್ಚಂದ್ರ, ನಾನು ನನಗೆ ಕೆಲಸ ನೀಡಿದ ಚಾಂಡಾಳನನ್ನು ಕೇಳಿ ಬರುವುದಾಗಿ ಹೇಳುತ್ತಾನೆ. ಆಗ ಧರ್ಮರಾಜ, ನಾನು ನಿನ್ನನ್ನು ಪರೀಕ್ಷಿಸುವುದಕ್ಕಾಗಿ ಚಾಂಡಾಳನ ರೂಪ ಧರಿಸಿ ಬಂದಿದ್ದು ಎಂದು ಹೇಳುತ್ತಾನೆ. ಅಲ್ಲದೇ, ರೋಹಿತಾಶ್ವನನ್ನೂ ಬದುಕಿಸುತ್ತಾರೆ. ಹರಿಶ್ಚಂದ್ರನಿಗೆ ರಾಜ್ಯವೂ ಮರಳಿ ಸಿಗುತ್ತದೆ.

About The Author