Friday, October 18, 2024

Latest Posts

ಸಂತಾ ಕ್ಲೌಸ್ ಅಂದ್ರೆ ಯಾರು..? ಇವರು ಯಾಕೆ ಗಿಫ್ಟ್ ಕೊಡ್ತಾರೆ..?

- Advertisement -

ಕ್ರಿಸ್‌ಮಸ್‌ನ್ನು ಏಸುವಿನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಡಿಸೆಂಬರ್ 25ರಂದು ಜಿಸಸ್ ಹುಟ್ಟಿದ್ದು, ರಾತ್ರಿ 12 ಗಂಟೆಗೆ ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ಜೀಸಸ್ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ. ಆದ್ರೆ ಅದಕ್ಕೂ ಮುನ್ನ ಸಂತಾ ಕ್ಲೌಸ್ ಬರ್ತಾರೆ, ಚೆಂದ ಚೆಂದದ ಗಿಫ್ಟ್ ತರ್ತಾರೆ ಅಂತಾ ಮಕ್ಕಳು ಕಾಯ್ತಾ ಇರ್ತಾರೆ. ಚರ್ಚ್‌ಗಳಲ್ಲಿ ಸಂತಾ ವೇಷ ತೊಟ್ಟವರು ಬಂದು, ಎಲ್ಲರಿಗೂ ಗಿಫ್ಟ್ ಕೊಡ್ತಾರೆ. ಅಷ್ಟಕ್ಕೂ ಯಾರು ಈ ಸಂತಾ ಕ್ಲೌಸ್..? ಯಾಕೆ ಇವ್ರು ಎಲ್ಲರಿಗೂ ಗಿಫ್ಟ್ ಕೊಡ್ತಾರೆ ಅನ್ನೋ ಬಗ್ಗೆ ತಿಳಿಯೋಣ.

ಸಂತಾ ಕ್ಲೌಸ್ ಕುರಿತಂತೆ ಹಲವು ಕಥೆಗಳಿದೆ. ಅಂಥ ಕಥೆಯಲ್ಲಿ ಒಂದು ಕಥೆಯ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ. ಸೇಂಟ್ ನಿಕೋಲಸ್‌ನನ್ನ ಸಂತಾ ಕ್ಲೌಸ್ ಅಂತಾ ಕರೆಯಲಾಗತ್ತೆ ಅಂತಾ ಹೇಳ್ತಾರೆ. ಸೇಂಟ್ ಚಿಕ್ಕವರಿದ್ದಾಗಲೇ ತಂದೆ- ತಾಯಿಯನ್ನ ಕಳೆದುಕೊಂಡಿದ್ದರಂತೆ. ಸೇಂಟ್ ದೊಡ್ಡವರಾದ ಮೇಲೆ ಬಡವರ, ನಿರ್ತಿಕರ ಸೇವೆ ಮಾಡುವುದರಲ್ಲಿ ಸಂತೋಷ ಪಡುತ್ತಿದ್ದರು. ನಂತರ ಅವರು ಫಾದರ್ ಅಂದ್ರೆ ಪಾದ್ರಿಯಾಗಿ ದೀಕ್ಷೆ ಸ್ವೀಕರಿಸಿದರಂತೆ.  

ಕ್ರಿಸ್‌ಮಸ್ ಹಬ್ಬ ಬಂದಾಗ, ರಾತ್ರಿ ವೇಳೆ ಬಡವರ ಮನೆಗೆ ಹೋಗಿ, ಅವರಿಗೆ ಗೊತ್ತಾಗದಂತೆ ಆ ಮನೆ ಮಕ್ಕಳಿಗೆ ಉಡುಗೊರೆ ತಂದಿಟ್ಟು ಹೋಗುತ್ತಿದ್ದರು ಸೇಂಟ್ ನಿಕೋಲಸ್. ಆ ಗಿಫ್ಟ್ ರಾತ್ರಿಯೇ ಏಕೆ ಕೊಡುತ್ತಿದ್ದರು ಮತ್ತು ಯಾಕೆ ಯಾರಿಗೂ ತಿಳಿಯದಂತೆ ಕೊಡುತ್ತಿದ್ದರು ಅಂತಂದ್ರೆ, ತಮಗೆ ಅವಶ್ಯಕವಾದ ವಸ್ತು ಸಿಕ್ಕಾಗ ಮಕ್ಕಳಿಗೆ ಖುಷಿಯಾಗುತ್ತದೆ. ಅದರಲ್ಲೂ ಅಚಾನಕ್ಕಾಗಿ ಸರ್ಪ್ರೈಸ್ ರೀತಿ ಸಿಕ್ಕಾಗ, ಆ ಖುಷಿ ದುಪ್ಪಟ್ಟಾಗುತ್ತದೆ ಅನ್ನೋದು ಸೇಂಟ್ ಮಾತಾಗಿತ್ತು.

ಇನ್ನೊಂದು ಕಥೆಯ ಪ್ರಕಾರ, ಸಂತಾ ಕ್ಲೌಸ್ ದೇವ ಮಾನವನಲ್ಲ ಬದಲಾಗಿ, ಶೈತಾನ್ ಎಂದು ಹೇಳಲಾಗುತ್ತದೆ. ಅಚ್ಚರಿಯಾದ್ರೂ ಇದು ಕೆಲ ಕಥೆಗಳ ಪ್ರಕಾರ ಸತ್ಯ. ಆದ್ದರಿಂದಲೇ ಬೈಬಲ್‌ ನಲ್ಲಿ ಎಲ್ಲಿಯೂ ಸಂತಾನ ಬಗ್ಗೆ ಬರೆದಿಲ್ಲವೆಂದು ಹೇಳಲಾಗುತ್ತದೆ. ಕ್ರಿಸ್‌ಮಸ್‌ ದಿನ ಜನ ಜೀಸಸ್‌ ಬದಲು ತನ್ನನ್ನು ನೆನೆಯಬೇಕು ಅನ್ನೋದಕ್ಕೆ ಶೈತಾನ್ ಸಂತಾನ ವೇಷ ಧರಿಸಿ ಬಂದು, ಮಕ್ಕಳಿಗೆ ಗಿಫ್ಟ್ ಕೊಡುತ್ತಿದ್ದನಂತೆ. ಒಟ್ಟಿನಲ್ಲಿ ಸಂತಾ ಯಾರೇ ಆಗಿರಲಿ, ಪುಟ್ಟ ಮಕ್ಕಳಿಗೆ ಗಿಫ್ಟ್, ಚಾಕೋಲೇಟ್ ಸಿಕ್ಕರೆ ಖುಷಿಯೋ ಖುಷಿ. ಎಲ್ಲಾ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು.

- Advertisement -

Latest Posts

Don't Miss