Saturday, July 27, 2024

Latest Posts

ಧನುರ್ಮಾಸದಲ್ಲಿ ವಿಷ್ಣುವಿಗೆ ಯಾವ ಪ್ರಸಾದ ನೈವೇದ್ಯ ಮಾಡಲಾಗುತ್ತದೆ..? ಅದನ್ನು ಹೇಗೆ ತಯಾರಿಸುವುದು..?

- Advertisement -

ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ. ಪೂಜಿಸಲಾಗುತ್ತದೆ. ವಿಷ್ಣುವಿಗಾಗಿ ಅಕ್ಕಿ ಬೆಳೆ ಪ್ರಸಾದವನ್ನು ತಯಾರಿಸಲಾಗುತ್ತದೆ. ಆ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ..? ಆ ಪ್ರಸಾದದ ಅರ್ಥ ಎಲ್ಲವನ್ನೂ ನಾವಿಂದು ತಿಳಿಸಲಿದ್ದೇವೆ..

ಧನುರ್ಮಾಸದಲ್ಲಿ ವಿಷ್ಣುವಿಗೆ ಅಕ್ಕಿ ಮತ್ತು ಹೆಸರುಬೇಳೆಯ ಹುಗ್ಗಿಯನ್ನ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಇದನ್ನು ಮುದ್ಗಾನ್ನವೆಂದು ಕರಿಯಲಾಗುತ್ತದೆ. ಇದನ್ನ ಖಾರಾ ಪೊಂಗಲ್ ಅಂತಾನೂ ಕರಿಯಲಾಗುತ್ತದೆ. ಧನುರ್ಮಾಸದಲ್ಲಿ ಹಲವು ದೇವಸ್ಥಾನಗಳಲ್ಲಿ ಖಾರಾ ಪೊಂಗಲ್ಲನ್ನು ಪ್ರಸಾದವನ್ನಾಗಿ ಹಂಚುತ್ತಾರೆ. ಈ ಪ್ರಸಾದದ ವಿಶೇಷತೆ ಅಂದ್ರೆ ಇದಕ್ಕೆ ನಾವು ಎಷ್ಟು ಪ್ರಮಾಣದಲ್ಲಿ ಅಕ್ಕಿ ಹಾಕುತ್ತೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಹೆಸರುಬೇಳೆ ಹಾಕುತ್ತೇವೆ ಅನ್ನೋದು ಮುಖ್ಯ.

ಯಾಕಂದ್ರೆ ಇದಕ್ಕೆ ಒಂದು ಕಪ್ ಅಕ್ಕಿ ಹಾಕಿ ಅರ್ಧ ಕಪ್ ಹೆಸರುಬೇಳೆ ಹಾಕಿದ್ರೆ ಅದನ್ನು ಪ್ರಸಾದವೆಂದು ಪರಿಗಣಿಸಲಾಗುವುದಿಲ್ಲ. ಅಥವಾ ಅರ್ಧ ಅರ್ಧ ಕಪ್ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಹುಗ್ಗಿ ತಯಾರಿಸಿದರೂ, ಅದು ಪೂರ್ಣ ಪ್ರಸಾದವಾಗುವುದಿಲ್ಲ. ಈ ಪ್ರಸಾದವನ್ನು ನೀವು ಸರಿಯಾದ ರೀತಿಯಲ್ಲಿ ಮಾಡುವುದಿದ್ದರೆ, ಇದರಲ್ಲಿ ಹೆಸರುಬೇಳೆ ಪ್ರಮಾಣ ಹೆಚ್ಚಿರಬೇಕು. ಮತ್ತು ಅಕ್ಕಿ ಪ್ರಮಾಣ ಕಡಿಮೆ ಇರಬೇಕು.

ಅಂದ್ರೆ ಒಂದು ಕಪ್ ಹೆಸರು ಬೇಳೆ ಹಾಕಿದ್ರೆ, ಅರ್ಧ ಕಪ್ ಅಕ್ಕಿ ಹಾಕಿ ಈ ಹುಗ್ಗಿಯನ್ನು ಮಾಡಬೇಕು. ಆಗ ಮಾತ್ರ ಇದು ಪೂರ್ಣಪ್ರಮಾಣದ ಧನುರ್ಮಾಸದ ನೈವೇದ್ಯವಾಗುತ್ತದೆ. ಒಂದು ಕಪ್ ಹೆಸರು ಬೇಳೆ, ಅರ್ಧ ಕಪ್ ಅಕ್ಕಿ ಒಂದು ಪಾತ್ರೆಗೆ ಹಾಕಿ ಮೂರು ಬಾರಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಕುಕ್ಕರ್‌ನಲ್ಲಿ ಉಪ್ಪು ನೀರು ಮತ್ತು ಅಕ್ಕಿ-ಬೇಳೆ ಹಾಕಿ ನಾಲ್ಕರಿಂದ ಐದು ವಿಶಲ್ ಬರುವಷ್ಟು ಬೇಯಿಸಿ.

ನಂತರ ಒಂದು ಪಾತ್ರೆಗೆ ಒಂದು ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಉದ್ದಿನ ಬೇಳೆ, ಹಸಿ ಮೆಣಸು ಅಥವಾ ಒಣ ಮೆಣಸು, ಸಣ್ಣ ತುಂಡು ಜಜ್ಜಿದ ಹಸಿ ಶುಂಠಿ, ಗೋಡಂಬಿ, ಕರಿಬೇವಿನ ಸೊಪ್ಪು, ತರಿ ತರಿಯಾಗಿ ಪುಡಿ ಮಾಡಿದ ಕಾಳು ಮೆಣಸು, ಹಾಕಿ ಹುರಿಯಿರಿ. ಈಗ ಈ ಮಿಶ್ರಣಕ್ಕೆ ಬೇಯಿಸಿದ ಅಕ್ಕಿ-ಬೇಳೆ ಹಾಕಿ ಮಿಕ್ಸ್ ಮಾಡಿ. ಸಣ್ಣಗೆ ತುಂಡು ಮಾಡಿದ ಕೊಬ್ಬರಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ. ಇದುವೇ ಮುದ್ಗಾನ್ನ. ಈ ಮುದ್ಗಾನ್ನವನ್ನು ಶ್ರೀವಿಷ್ಣುವಿಗೆ ನೈವೇದ್ಯ ಮಾಡಿ, ಸವಿಯಿರಿ. ಈ ನೈವೇದ್ಯದೊಂದಿಗೆ ತಾಂಬೂಲ ಇಡುವುದನ್ನು ಮಾತ್ರ ಮರಿಯಬೇಡಿ.

- Advertisement -

Latest Posts

Don't Miss