ಶಿವನ ಜಟೆಯಲ್ಲಿ ಗಂಗೆ ಇರುವ ಕಾರಣಕ್ಕೆ ಶಿವನಿಗೆ ಗಂಗಾಧನ ಅನ್ನೋ ಹೆಸರು ಬಂತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಗಂಗೆ ಹೇಗೆ ಶಿವನ ಜಟೆ ಸೇರಿದಳು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ..

ಪುರಾಣ ಕಥೆಗಳ ಪ್ರಕಾರ ಸಾಗರನೆಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಆ ರಾಜನಿಗೆ ಸುಮತಿ ಮತ್ತು ಕೇಶಿನಿ ಎಂಬ ಪತ್ನಿಯರಿದ್ದರು. ಆದರೂ ಕೂಡ ಆ ರಾಜನಿಗೆ ಮಕ್ಕಳಿರಲಿಲ್ಲ. ಆಗ ಸಾಗರ ರಾಜ, ಹಿಮಾಲಯಕ್ಕೆ ಹೋಗಿ ಸಂತಾನಕ್ಕಾಗಿ ತಪಸ್ಸು ಆಚರಿಸಿದನು. ಆಗ ಸಾಗರನಿಗೆ 61 ಸಾವಿರ ಮಕ್ಕಳು ಜನಿಸಿದರು. ಆದ್ರೆ ಆ ಮಕ್ಕಳಲ್ಲಿ ಒಬ್ಬರೂ ಸಜ್ಜನರಾಗಿರಲಿಲ್ಲ.

ತದನಂತರ ಸಾಗರ ತಾನು ಸ್ವರ್ಗದ ಅಧಿಪತಿಯಾಗಬೇಕೆಂದು 99 ಅಶ್ವಮೇಧ ಯಾಗವನ್ನು ಮಾಡಿದ್ದು, ಇನ್ನೂ ಒಂದು ಯಾಗವನ್ನು ಮಾಡುವುದು ಬಾಕಿಯಿತ್ತು. 100ನೇ ಅಶ್ವಮೇಧ ಯಾಗ ಮಾಡಲು ಸಿದ್ಧನಾಗಿದ್ದ ಸಾಗರ ರಾಜ ತನ್ನ ಅಶ್ವವನ್ನು ನಗರ ಸಂಚಾರಕ್ಕೆ ಕಳುಹಿಸುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಇನ್ನೊಂದೆಡೆ ಎಲ್ಲಿ ಸಾಗರ ರಾಜನು 100ನೇ ಅಶ್ವಮೇಧ ಯಾಗ ಮಾಡಿ, ತನ್ನ ಪಾಲಿನ ಸ್ವರ್ಗವನ್ನು ಕಸಿದುಕೊಂಡು ಬಿಡುತ್ತಾನೋ ಎಂಬ ಭಯದಿಂದ ಸ್ವರ್ಗಾಧಿಪತಿ ಇಂದ್ರ ಸಾಗರ ಕಳುಹಿಸಿದ ಅಶ್ವವನ್ನು, ಬಚ್ಚಿಡಬೇಕೆಂದು ತೀರ್ಮಾನಿಸುತ್ತಾನೆ.
ಸಾಗರನ ಅಶ್ವವನ್ನು ತಂದು ಪಾತಾಳದಲ್ಲಿ ಧ್ಯಾನ ಮಾಡುತ್ತಿದ್ದ ಕಪಿಲ ಮಹರ್ಷಿಯ ಹಿಂದೆ ಕಟ್ಟುತ್ತಾನೆ. ತನ್ನ ಕುದುರೆಯನ್ನು ಹುಡುಕುತ್ತ ಬಂದ ಸಾಗರ, ಪಾತಾಳದಲ್ಲಿ ಕಪಿಲ ಮಹರ್ಷಿಯ ಹಿಂದೆ ಅಶ್ವವಿರುವುದನ್ನ ನೋಡಿ, ಅವರೇ ಕದ್ದು ತಂದಿದ್ದಾರೆಂದು ತಿಳಿದು, ಕಳ್ಳತನದ ಆರೋಪ ಹೊರಿಸುತ್ತಾನೆ. ತಾನು ಮಾಡದ ತಪ್ಪಿಗೆ, ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಸಿಟ್ಟಾದ ಕಪಿಲ ಮಹರ್ಷಿಗಳು, ನಿನ್ನ ವಂಶಜರು ಗಂಗೆಯನ್ನು ಪಾತಾಳದಿಂದ ಭೂಮಿಗೆ ತರುವವರೆಗೂ ನಿಮಗೆ ಮೋಕ್ಷವಿಲ್ಲ ಎಂದು ಹೇಳುತ್ತಾನೆ.
ಸಾಗರನ ಮೊಮ್ಮಗನಾಗಿದ್ದ ಭಗೀರಥರು ಗಂಗೆಯ ಬಳಿ ಹೋಗಿ ಭೂಮಿಗೆ ಬರುವಂತೆ ಕೇಳುತ್ತಾನೆ. ಆದರೆ ಗಂಗೆ ಅಹಂಕಾರ ತೋರಿಸುತ್ತಾಳೆ. ಎಷ್ಟೇ ವಿನಂತಿಸಿದರೂ ಬರುವುದಿಲ್ಲ. ಆಗ ಭಗೀರಥ ಬ್ರಹ್ಮನ ಬಳಿ ಹೋಗಿ, ಗಂಗೆಯನ್ನು ಪಾತಾಳದಿಂದ ಭೂಮಿಗೆ ತರುವಂತೆ ಬೇಡಿಕೊಳ್ಳುತ್ತಾನೆ. ಬ್ರಹ್ಮ ಗಂಗೆಯ ಬಳಿ ಈ ಬಗ್ಗೆ ಮಾತನಾಡಿದಾಗ, ನಾನು ಭೂಮಿಗೆ ಬರಲು ಸಿದ್ಧಳಿದ್ದೇನೆ. ಆದರೆ ನಾನು ಅತೀ ರಭಸದಿಂದ ಬರುವ ಕಾರಣ ಭೂಮಿ ಮುಳುಗಿಯೂ ಹೋಗಬಹುದು ಎಂದು ಹೇಳುತ್ತಾಳೆ.
ಚಿಂತಾಕ್ರಾಂತರಾದ ಭಗೀರಥರು, ಶಿವನ ಬಳಿ ಹೋಗಿ ಸಮಸ್ಯೆ ಬಗೆಹರಿಸುವಂತೆ ಕೇಳುತ್ತಾರೆ. ಗಂಗೆ ಭೂಮಿಗೆ ಬಂದು ಎಲ್ಲವನ್ನೂ ತೊಳೆದುಕೊಂಡು ಹೋಗಲು ನಿರ್ಧರಿಸುತ್ತಾಳೆ. ತನ್ನನ್ನು ನಿಯಂತ್ರಿಸಲು ಬಂದ ಶಿವನ ಮೇಲೂ ಕೊಚ್ಚಿಕೊಂಡು ಹೋಗಬೇಕೆಂದು ನಿರ್ಧರಿಸುತ್ತಾಳೆ. ಆದ್ರೆ ಆಕೆ ಭೂಮಿಗೆ ಬರುತ್ತಿದ್ದಂತೆ, ಶಿವ ತನ್ನ ಜಟೆಯಲ್ಲಿ ಗಂಗೆಯನ್ನು ಕಟ್ಟಿಹಾಕುವ ಮೂಲಕ, ಆಕೆಯನ್ನ ನಿಯಂತ್ರಿಸುತ್ತಾನೆ,. ಆಗ ಗಂಗೆಗೆ ತನ್ನ ತಪ್ಪಿನ ಅರಿವಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )