ನವರಾತ್ರಿಯ ಐದನೇಯ ದಿನ ಅಂದ್ರೆ ನವರಾತ್ರಿ ಪಂಚಮಿಗೆ ನಾವು ಕಾಲಿರಿಸಿದ್ದೇವೆ. ಇಂದು ಸ್ಕಂದಮಾತೆಯ ಆರಾಧನೆ ಮಾಡಲಾಗುತ್ತದೆ. ಹಾಗಾದ್ರೆ ಬನ್ನಿ ಸ್ಕಂದಮಾತೆಯ ಕಥೆ ಕೇಳೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಾರಕಾಸುರನೆಂಬ ರಾಕ್ಷಸ ಅಮರನಾಗಲು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿದ್ದ. ತಾರಕಾಸುರನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಬ್ರಹ್ಮ, ಏನು ವರ ಬೇಕೆಂದು ಕೇಳಿದ. ತನಗೆ ಸಾವೇ ಬರಬಾರದೆಂದು ತಾರಕಾಸುರ ವರ ಬೇಡಿದ. ಆದರೆ ಇದನ್ನು ನಿರಾಕರಿಸಿದ ಬ್ರಹ್ಮ, ಬೇರೆ ವರವನ್ನ ಕೇಳು ಎಂದ. ಆಗ ಶಿವನ ಪುತ್ರನಿಂದಷ್ಟೇ ನನಗೆ ಸಾವು ಬರಬೇಕೆಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಬ್ರಹ್ಮ ತಥಾಸ್ತು ಎನ್ನುತ್ತಾನೆ.
ಇನ್ನು ನಮಗೆಲ್ಲ ಒಂದು ವಿಷಯದ ಬಗ್ಗೆ ಯೋಚನೆ ಬರಬಹುದು. ಅದೇನಂದರೆ, ಶಿವನಿಗೆ ಗಣೇಶ ಮತ್ತು ಸುಬ್ರಹ್ಮಣ್ಯನೆಂಬ ಪುತ್ರನಿದ್ದಾನಲ್ಲ..? ಅವರಿಂದ ಇವನಿಗೆ ಸಾವು ಬರಬಹುದಲ್ಲ ಎಂದು. ಆದರೆ ತಾರಕಾಸುರ ವರ ಬೇಡುವಾಗ ಗಣೇಶ ಮತ್ತು ಸುಬ್ರಹ್ಮಣ್ಯನ ಜನ್ಮವಾಗಿರಲಿಲ್ಲ. ಆಗ ಸತಿ ದೇವಿ ಹೋಮ ಕುಂಡದಲ್ಲಿ ಹಾರಿದ ಕಾರಣ, ಮಹದೇವ ಯೋಗನಿದ್ರೆಯಲ್ಲಿರುತ್ತಾನೆ. ಮತ್ತು ಶಿವನಿಗೆ ಮಕ್ಕಳಾಗುವುದಿಲ್ಲವೆಂದು ತಾರಕಾಸುರ ಭಾವಿಸಿದ್ದ. ಆದ್ರೆ ಅದಾಗಲೇ ಸತಿ, ಪಾರ್ವತಿಯ ರೂಪ ಪಡೆದಿದ್ದಳು.
ಇನ್ನು ವರ ಸಿಕ್ಕ ಸೊಕ್ಕಿನಲ್ಲಿ ತಾರಕಾಸುರ ದೇವಾನುದೇವತೆಗಳಿಗೆ ತೊಂದರೆ ಕೊಡಲಾರಂಭಿಸಿದ, ಯಜ್ಞ ಯಾಗಾದಿಗಳು ನಡೆಯುವ ಸಮಯದಲ್ಲಿ ವಿಘ್ನ ಉಂಟು ಮಾಡಿದ. ಇದರಿಂದ ಭಯಭೀತರಾದ ದೇವತೆಗಳು ಶಿವನ ಯೋಗನಿದ್ರೆಯನ್ನ ಭಂಗ ಮಾಡಲು, ಕಾಮದೇವನನ್ನು ಕಳುಹಿಸುತ್ತಾರೆ. ತನ್ನ ಯೋಗ ನಿದ್ರೆ ಭಂಗ ಮಾಡಿದ್ದಕ್ಕೆ, ಶಿವ ಕಾಮದೇವನನ್ನು ಸುಟ್ಟು ಭಸ್ಮ ಮಾಡಿದ. ನಂತರ ಪಾರ್ವತಿ ಶಿವನನ್ನು ವರಿಸಿ, ಸುಬ್ರಹ್ಮಣ್ಯನನ್ನು ಪಡೆದಳು.
ಸುಬ್ರಹ್ಮಣ್ಯನಿಗೆ ಹಲವಾರು ಹೆಸರುಗಳಿದೆ, ಅದರಲ್ಲಿ ಸ್ಕಂದ ಎಂಬ ಹೆಸರು ಕೂಡ ಒಂದು. ಹಾಗಾಗಿ ಪಾರ್ವತಿಗೆ ಸ್ಕಂದ ಮಾತಾ ಎಂದು ಕರೆಯಲಾಗುತ್ತದೆ. ಕೊನೆಗೆ ಸುಬ್ರಹ್ಮಣ್ಯನೇ ತಾಯಿಯ ಸಹಕಾರದಿಂದ ತಾರಕಾಸುರನ ವಧೆ ಮಾಡಿದ. ನವರಾತ್ರಿ ಪಂಚಮಿಯ ದಿನ ಇನ್ನೊಂದು ರಾಕ್ಷಸನ ಸಂಹಾರವಾದ ಕಾರಣ ಇಂದು ಸ್ಕಂದ ಮಾತೆಯನ್ನ ಪೂಜಿಸಲಾಗುತ್ತದೆ.
ಚತುರ್ಭುಜೆ, ಸಿಂಹ ವಾಹಿನಿಯಾದ ಸ್ಕಂದ ಮಾತೆ, ತೊಡೆಯ ಮೇಲೆ ಪಂಚಮುಖವನ್ನು ಹೊಂದಿದ ಸ್ಕಂದನನ್ನು ಕೂರಿಸಿಕೊಂಡಿದ್ದಾಳೆ. ಎಡಗೈಯಿಂದ ಮಗನನ್ನು ಹಿಡಿದು, ಬಲಗೈಯಿಂದ ಭಕ್ತರನ್ನ ಆಶೀರ್ವದಿಸುತ್ತಿದ್ದಾಳೆ. ಇನ್ನು ಉಳಿದೆರಡು ಕೈಗಳಲ್ಲಿ ಕಮಲದ ಹೂವನ್ನ ಹಿಡಿದಿದ್ದಾಳೆ.
ಈ ದಿನ ಜಪಿಸಬೇಕಾದ ಸ್ತುತಿಯೆಂದರೆ..
ಯಾ ದೇವಿ ಸರ್ವಭೂತೇಶು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಸ್ತುತಿಯನ್ನ ಬೆಳಿಗ್ಗೆ ಅಥವಾ ಸಂಜೆ ದೀಪ ಹಚ್ಚಿದ ಬಳಿಕ 108 ಬಾರಿ ಜಪಿಸಿದರೆ ಉತ್ತಮ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ